ಕಾಳಿ ನದಿಗೆ ಹಾರಿ ಜಿ.ಪಂ ಉದ್ಯೋಗಿ ಆತ್ಮಹತ್ಯೆ; ಮೇಲಾಧಿಕಾರಿಗಳ ಕಿರುಕುಳ ಆರೋಪ

ಕಾಳಿ ನದಿಗೆ ಹಾರಿ ಜಿಲ್ಲಾ ಪಂಚಾಯತ್​​ ನೌಕರ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಕಾರವಾರದಲ್ಲಿ ನಡೆದಿದೆ.

ಕಾಳಿ ನದಿಗೆ ಹಾರಿ ಜಿ.ಪಂ ಉದ್ಯೋಗಿ ಆತ್ಮಹತ್ಯೆ; ಮೇಲಾಧಿಕಾರಿಗಳ ಕಿರುಕುಳ ಆರೋಪ
ಮೃತ ಜಿ.ಪಂ ಉದ್ಯೋಗಿ ಶ್ರೀಕಾಂತ
Updated By: ವಿವೇಕ ಬಿರಾದಾರ

Updated on: Dec 04, 2022 | 5:22 PM

ಉತ್ತರ ಕನ್ನಡ: ಕಾಳಿ ನದಿಗೆ ಹಾರಿ ಜಿಲ್ಲಾ ಪಂಚಾಯತ್​​ ನೌಕರ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಕಾರವಾರದಲ್ಲಿ (Karwar) ನಡೆದಿದೆ. ಯೋಜನಾಧಿಕಾರಿ ಶ್ರೀಕಾಂತ ಮೇಲಿನಮನೆ (38) ಮೃತ ದುರ್ದೈವಿ. ಕೆಲಸದ ಒತ್ತಡ ಮತ್ತು ಮೇಲಾಧಿಕಾರಿಗಳ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಮೃತ ಶ್ರೀಕಾಂತ ತಂದೆ ತಮ್ಮಣ್ಣ ಕಾರವಾರ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಸಮುದ್ರದಲ್ಲಿ ಈಜಲು ಹೋಗಿ ಮುಳಗುತಿದ್ದ ಮಹಿಳೆ ಮತ್ತು ಮಗು ರಕ್ಷಣೆ

ಸಮುದ್ರದಲ್ಲಿ ಈಜಲು ಹೋಗಿ, ಮುಳಗುತಿದ್ದ ಮಹಿಳೆ ಮತ್ತು ಮಗುವನ್ನು ಮೀನುಗಾರರು ರಕ್ಷಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ತದಡಿಯಲ್ಲಿ ನಡೆದಿದೆ. ಭಟ್ಕಳ ಮೂಲದ ಮನ್ಸೂರ್ ಶೇಖ್ (28), ರಜಾ (6) ರಕ್ಷಣೆಗೊಳಗಾದವರು.

ಮನ್ಸೂರ್ ಶೇಖ್ ಮತ್ತು ರಜಾ ಸಂಬಂಧಿಕರ ಕಾರ್ಯಕ್ರಮಕ್ಕಾಗಿ ಭಟ್ಕಳದಿಂದ ತದಡಿಗೆ ಆಗಮಿಸಿದ್ದರು. ತದಡಿ ಭಾಗದ ಸಮುದ್ರದಲ್ಲಿ ಈಜುವಾಗ ಮನ್ಸೂರ್ ಶೇಖ್ ಮತ್ತು ರಜಾ ಅಲೆಗೆ ಸಿಲುಕಿ ಮುಳುಗುತ್ತಿದ್ದರು. ಇದನ್ನು ಕಂಡ ಸ್ಥಳೀಯ ಮೀನುಗಾರು ಮನ್ಸೂರ್ ಶೇಖ್ ಮತ್ತು ರಜಾರನ್ನು ರಕ್ಷಣೆ ಮಾಡಿದ್ದಾರೆ. ಇನ್ನೂ ಮನ್ಸೂರ್ ಶೇಖ್ ಮತ್ತು ರಜಾರನ್ನು ಕುಮಟಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗೋಕರ್ಣ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ರಾಜ್ಯ ಮತ್ತಷ್ಟು ಸುದ್ದಿಗಳನ್ನು ಓದಲು  ಇಲ್ಲಿ ಕ್ಲಿಕ್  ಮಾಡಿ

Published On - 5:21 pm, Sun, 4 December 22