ಉತ್ತರ ಕನ್ನಡ, ಡಿ.22: ಟಿವಿ9 ವರದಿ ಬೆನ್ನಲ್ಲೇ ಉತ್ತರ ಕನ್ನಡ(Uttara Kannada) ಜಿಲ್ಲಾಡಳಿತ ಎಚ್ಚೆತ್ತುಕೊಂಡಿದ್ದು, ಕೊವಿಡ್ ಸೆಂಟರ್(Covid 19) ನಿರ್ಮಾಣಕ್ಕೆ ವೈದ್ಯಕೀಯ ಸಿಬ್ಬಂದಿ ಮುಂದಾಗಿದ್ದಾರೆ. ಕೊವಿಡ್ ಸೆಂಟರ್ ಇಲ್ಲದಿರುವ ಬಗ್ಗೆ ಟಿವಿ9 ವರದಿ ಪ್ರಸಾರ ಮಾಡಿತ್ತು. ಇದೀಗ ಜನರಲ್ ಮೆಡಿಸಿನ್ ವಾರ್ಡ್ನ ರೋಗಿಗಳನ್ನು ಬೇರೆಡೆ ಶಿಫ್ಟ್ ಮಾಡಿ, ಕಾರವಾರ ವೈದ್ಯಕೀಯ ಶಿಕ್ಷಣ ಸಂಸ್ಥೆ ಕಟ್ಟಡದಲ್ಲಿ ಕೊವಿಡ್ ಸೆಂಟರ್ ನಿರ್ಮಾಣ ಮಾಡಲು ಮುಂದಾಗಿದೆ.
ರಾಜ್ಯಾದ್ಯಂತ ಕೊರೋನಾ ಸೋಂಕು ಹೆಚ್ಚಾಗುತ್ತಲಿದ್ದು, ಹೊಸ ವರ್ಷಾಚರಣೆ ಹಾಗೂ ಕ್ರಿಸ್ ಮಸ್ ಹಿನ್ನಲೆಯಲ್ಲಿ ಪ್ರವಾಸಿಗರ ಸ್ವರ್ಗ ಉತ್ತರ ಕನ್ನಡ ಜಿಲ್ಲೆಗೆ ಪ್ರವಾಸಿಗರ ದಂಡೇ ಹರಿದು ಬರುತ್ತಿದೆ. ಕೊರೊನಾ ಹೆಚ್ಚಾದ್ರೆ, ನಮಗೇನು ಭಯ ಎಂದು ಎಂಜಾಯ್ ಮಾಡುವ ಪ್ರವಾಸಿಗರಿಗೆ ರಾಜ್ಯದ ಮಾರ್ಗಸೂಚಿ ಜೊತೆ ಉತ್ತರ ಕನ್ನಡ ಜಿಲ್ಲಾಡಳಿತ ಸಹ ಹಲವು ಸೂಚನೆ ನೀಡಿದೆ. ಕರ್ನಾಟಕದ ಕಾಶ್ಮೀರ, ಪ್ರವಾಸಿಗರ ಸ್ವರ್ಗ ಎಂದೇ ಪ್ರಸಿದ್ಧಿ ಪಡೆದ ಉತ್ತರ ಕನ್ನಡ ಜಿಲ್ಲೆ. ಕಡಲು ಮತ್ತು ಪ್ರಕೃತಿ ಸೌಂದರ್ಯಕ್ಕೆ ತವರು. ಹೀಗಾಗಿ ಮೋಜು,ಮಸ್ತಿ ಜೊತೆ ಧಾರ್ಮಿಕ ಕ್ಷೇತ್ರಗಳಿಗೂ ಪ್ರವಾಸಿಗರ ದಂಡು ಹರಿದು ಬರುತ್ತದೆ.
ಇದನ್ನೂ ಓದಿ:ಹೊಸ ವರ್ಷಾಚರಣೆಗೆ ಉತ್ತರ ಕನ್ನಡ ಜಿಲ್ಲೆಗೆ ಯಾವುದೇ ನಿರ್ಬಂಧ ಹೇರಿಲ್ಲ-ಜಿಲ್ಲಾ ಆರೋಗ್ಯಾಧಿಕಾರಿ
ಇನ್ನು ಸದ್ಯ ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರವಾಸಿಗರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕಾರವಾರ, ಯಲ್ಲಾಪುರ, ದಾಂಡೇಲಿ, ಮುರುಡೇಶ್ವರ ,ಗೋಕರ್ಣ, ಶಿರಸಿ ಮಾರಿಕಾಂಬಾ ಸೇರಿದಂತೆ ಹಲವು ಭಾಗದಲ್ಲಿ ಫುಲ್ ರಷ್ ಇರುತ್ತದೆ. ಆದ್ರೆ, ಇತ್ತೀಚೆಗೆ ಕರಾವಳಿ ಭಾಗದಲ್ಲಿ ಕೊರೊನಾ ಸಹ ಪ್ರವಾಸಿಗರಂತೆ ಜಿಲ್ಲೆಗೆ ಅಥಿತಿಯಾಗಿ ಬಂದಿದ್ದು, ತನ್ನ ಖಾತೆ ತೆರದಿದೆ. ರಾಜ್ಯ ಸರ್ಕಾರ ಸಹ ಕಠಿಣ ನಿಯಮ ಜಾರಿಗೆ ತರದಿದ್ರೂ ನಿಯಮಾವಳಿ ಜಾರಿಗೆ ಮಾಡಿದೆ. ಆದ್ರೆ, ಬಂದ ಪ್ರವಾಸಿಗರು ತಮಗೆ ಯಾವುದೇ ಭಯ ಇಲ್ಲ ಎನ್ನುವಂತೆ ಬೇಕಾ ಬಿಟ್ಟಿಯಾಗಿ ಎಂಜಾಯ್ ಮಾಡುತಿದ್ದಾರೆ. ಇನ್ನು ಜಿಲ್ಲೆಗೆ ಆಂಧ್ರ, ತಮಿಳುನಾಡು, ಕೇರಳ ಸೇರಿದಂತೆ ಹಲವು ರಾಜ್ಯದ ಜನರು ಆಗಮಿಸುತ್ತಿದ್ದು, ಕೊರೊನಾ ಆತಂಕ ಮತ್ತಷ್ಟು ಹೆಚ್ಚು ಮಾಡಿದೆ. ಇದರಿಂದ ಜಿಲ್ಲಾಡಳಿತಕ್ಕೆ ಕಠಿಣ ಕ್ರಮ ಕೈಗೊಳ್ಳುವಂತೆ ಸ್ಥಳೀಯ ಜನ ಆಗ್ರಹಿಸಿದ್ದರು.
ಹೊಸ ವರ್ಷಾಚರಣೆಗೆ ಕಾರವಾರಕ್ಕೆ ಬರುವವರಿಗೆ ಸದ್ಯ ಯಾವುದೇ ನಿರ್ಬಂಧ ಹೇರಿಲ್ಲ. ವೈರಸ್ ತಿವ್ರತೆ ಹೆಚ್ಚಾಗಿ ಕಂಡು ಬಂದಲ್ಲಿ ನಿರ್ಬಂಧ ಹೆರಬೇಕಾಗುತ್ತದೆ. ಸದ್ಯ ಉತ್ತರ ಕನ್ನಡ ಜಿಲ್ಲೆಗೆ ಬರುವ ಪ್ರವಾಸಿಗರಿಗೆ ಯಾವುದೇ ನಿರ್ಬಂಧ ಇಲ್ಲ ಪ್ರವಾಸಿಗರು ಕೊವಿಡ್ ಬಗ್ಗೆ ಯಾವುದೇ ಆತಂಕ ಬೇಡ ಎಚ್ಚರಿಕೆ ಇರಲಿ ,ಹಾರ್ಟ್, ಅಸ್ತಮಾ ಸಮಸ್ಯೆ ಕಾಯಿಲೆ ಇರುವವರು ಪ್ರವಾಸಕ್ಕೆ ಬರದೆ ಇರುವುದು ಒಳ್ಳೆಯದು. ಕೊರೊನಾ ಸಂಖ್ಯೆ ಹೆಚ್ಚಾದ್ರೆ ಗೋವಾ ಬಾರ್ಡರ್ನಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದಿದ್ದಾರೆ. ಸದ್ಯ ಪ್ರವಾಸಿಗರಿಗಾಗಿ ಜಿಲ್ಲೆಯಲ್ಲಿ ಕುಲ್ಲಂ ಕುಲ್ಲ ಅವಕಾಶವನ್ನೇನೋ ಮಾಡಿಕೊಟ್ಟಿದೆ. ಇನ್ನು ಮುಚ್ಚಿದ ಕೋವಿಡ್ ಕೇಂದ್ರಗಳನ್ನು ತೆರಯಲಾಗುತ್ತಿದೆ. ಜೊತೆಗೆ ಕೋವಿಡ್ ತಪಾಸಣೆಗೆ ಬೇಕಾದ ವ್ಯವಸ್ಥೆ ಮಾಡಲಾಗುತ್ತಿದೆ. ಆದ್ರೂ ನಮ್ಮ ಜಾಗ್ರತೆಯಲ್ಲಿ ನಾವುಗಳು ಇರದಿದ್ರೆ ,ಎಂಜಾಯ್ ಮಾಡಲು ಹೋದವರು ಕೊನೆಗೆ ಸಂಕಟ ಪಡುವ ಸ್ಥಿತಿ ಎದುರಾಗದಂತೆ ಎಚ್ಚರವಹಿಸಬೇಕಷ್ಟೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:30 pm, Fri, 22 December 23