ಹೊಸ ವರ್ಷಾಚರಣೆಗೆ ಉತ್ತರ ಕನ್ನಡ ಜಿಲ್ಲೆಗೆ ಯಾವುದೇ ನಿರ್ಬಂಧ ಹೇರಿಲ್ಲ-ಜಿಲ್ಲಾ ಆರೋಗ್ಯಾಧಿಕಾರಿ
ಉತ್ತರ ಕನ್ನಡ(Uttara Kannada) ಜಿಲ್ಲೆಯಲ್ಲಿ ಹೊಸ ವರ್ಷಾಚರಣೆಗೆ ನಿರ್ಬಂಧ ಹೇರಿಲ್ಲ ಎಂದು ಜಿಲ್ಲಾ ಆರೋಗ್ಯಾಧಿಕಾರಿ(DHO) ಡಾ.ನೀರಜ್ ಅವರು ಹೇಳಿದ್ದಾರೆ. ಕೊರೊನಾ ಎದುರಿಸಲು ನಮ್ಮ ಜಿಲ್ಲಾ ಆರೋಗ್ಯ ಇಲಾಖೆ ರೆಡಿಯಾಗಿದ್ದು, ಕೊವಿಡ್ ಸೆಂಟರ್ ಹಾಗೂ ಆಕ್ಸಿಜನ್ ಪ್ಲ್ಯಾಂಟ್ ಸೇರಿದಂತೆ ಎಲ್ಲ ಮುನ್ನೆಚ್ಚರಿಕೆ ಕ್ರಮ ವಹಿಸಿದ್ದೆವೆ. ಕೊರೊನಾ ಹೆಚ್ಚಾದ್ರೆ ಗೋವಾ ಗಡಿಯಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುತ್ತೇವೆ ಎಂದರು.
ಉತ್ತರ ಕನ್ನಡ, ಡಿ.20: ಜಿಲ್ಲೆಯಲ್ಲಿ ಹೊಸ ವರ್ಷಾಚರಣೆಗೆ ನಿರ್ಬಂಧ ಹೇರಿಲ್ಲ ಎಂದು ಟಿವಿ9ಗೆ ಉತ್ತರ ಕನ್ನಡ(Uttara Kannada) ಜಿಲ್ಲಾ ಆರೋಗ್ಯಾಧಿಕಾರಿ(DHO) ಡಾ.ನೀರಜ್ ಮಾಹಿತಿ ನೀಡಿದ್ದಾರೆ. ಇಂದು(ಡಿ.20) ಮಾಧ್ಯಮ ಪ್ರತಿನಿಧಿಯೊಂದಿಗೆ ಮಾತನಾಡಿದ ಅವರು ‘ಜಿಲ್ಲೆಗೆ ಬರುವ ಪ್ರವಾಸಿಗರಿಗೆ ಯಾವುದೇ ನಿರ್ಬಂಧ ಇಲ್ಲ. ಕೊವಿಡ್ ಬಗ್ಗೆ ಪ್ರವಾಸಿಗರಿಗೆ ಆತಂಕ ಬೇಡ, ಮುನ್ನೆಚ್ಚರಿಕೆ ಇರಲಿ. ಅಸ್ತಮಾ, ಹೃದಯ ಸಮಸ್ಯೆ ಇರುವವರು ಬರದಿದ್ದರೆ ಒಳ್ಳೆಯದು. ವೈರಸ್ ತೀವ್ರತೆ ಹೆಚ್ಚಾದರೆ ನಿರ್ಬಂಧ ಹೇರಬೇಕಾಗುತ್ತೆ ಎಂದರು.
ಕೊರೊನಾ ಎದುರಿಸಲು ನಮ್ಮ ಜಿಲ್ಲಾ ಆರೋಗ್ಯ ಇಲಾಖೆ ರೆಡಿ
ಕೊರೊನಾ ಎದುರಿಸಲು ನಮ್ಮ ಜಿಲ್ಲಾ ಆರೋಗ್ಯ ಇಲಾಖೆ ರೆಡಿಯಾಗಿದ್ದು, ಕೊವಿಡ್ ಸೆಂಟರ್ ಹಾಗೂ ಆಕ್ಸಿಜನ್ ಪ್ಲ್ಯಾಂಟ್ ಸೇರಿದಂತೆ ಎಲ್ಲ ಮುನ್ನೆಚ್ಚರಿಕೆ ಕ್ರಮ ವಹಿಸಿದ್ದೆವೆ. ಕೊರೊನಾ ಹೆಚ್ಚಾದ್ರೆ ಗೋವಾ ಗಡಿಯಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುತ್ತೇವೆ. ಡಿಸೆಂಬರ್ 10ರಂದು ಜಿಲ್ಲೆಯಲ್ಲಿ ಒಂದು ಕೊವಿಡ್ ಪ್ರಕರಣ ಪತ್ತೆಯಾಗಿತ್ತು. ಗೋವಾಕ್ಕೆ ಹೋಗಿ ಬಂದ ವ್ಯಕ್ತಿಯಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಸದ್ಯ ಆ ವ್ಯಕ್ತಿ ಸಂಪೂರ್ಣ ಗುಣಮುಖನಾಗಿದ್ದಾನೆ ಎಂದು ತಿಳಿಸಿದರು.
ಇದನ್ನೂ ಓದಿ:New Year 2024: ಹೊಸ ವರ್ಷಕ್ಕೆ ಗೈಡ್ ಲೈನ್ಸ್ ರೆಡಿ: ಡಿ. 31ರ ಮಧ್ಯರಾತ್ರಿಯಿಂದಲೇ ಅನ್ವಯ
ಚಿಕ್ಕಮಗಳೂರು: ನಾಲ್ವರಲ್ಲಿ ಕೊರೊನಾ ಪಾಸಿಟಿವ್ ಧೃಡ
ಚಿಕ್ಕಮಗಳೂರು: ಜಿಲ್ಲೆಯ ನಾಲ್ವರಲ್ಲಿ ಇಂದು(ಡಿ.20) ಕೊರೊನಾ ಪಾಸಿಟಿವ್ ಧೃಡವಾಗಿದೆ. ಇಬ್ಬರು ವಿದ್ಯಾರ್ಥಿಗಳು ಸೇರಿದಂತೆ ನಾಲ್ವರಲ್ಲಿ ಕೊರೊನಾ ಪಾಸಿಟಿವ್ ಆಗಿದ್ದು, ಹೋಂ ಐಸೂಲೇಷನ್ ಮಾಡಲಾಗಿದೆ. ಮೂವರಲ್ಲಿ ಓರ್ವರಿಗೆ ಮಾತ್ರ ಟ್ರಾವೆಲ್ ಹಿಸ್ಟರಿ ಇದೆ. ಪಾಸಿಟಿವ್ ಒಂದಿರುವ ಒಬ್ಬರು ಶಿವಮೊಗ್ಗದ ತೀರ್ಥಹಳ್ಳಿ ಹೋಗಿ ಬಂದಿದ್ದರು. ಆ ಕುರಿತು ಸರ್ಕಾರದ ಸೂಚನೆಯಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಟಿವಿ9 ಗೆ ಚಿಕ್ಕಮಗಳೂರು DHO ಅಶ್ವಥ್ ಬಾಬಾ ಮಾಹಿತಿ ನೀಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:47 pm, Wed, 20 December 23