ಕಾರವಾರ: ಪಶ್ಚಿಮಘಟ್ಟದ ಕುಮಟಾ, ಶಿರಸಿ ತಾಲೂಕಿನ ಹಲವಡೆ ಭೂ ಕಂಪನದ ಅನುಭವ

| Updated By: ವಿವೇಕ ಬಿರಾದಾರ

Updated on: Dec 01, 2024 | 1:54 PM

ಉತ್ತರ ಕನ್ನಡ ಜಿಲ್ಲೆಯ ಕುಮಟಾ ಮತ್ತು ಶಿರಸಿ ತಾಲೂಕುಗಳಲ್ಲಿ 3 ಸೆಕೆಂಡ್​ಗಳ ಕಾಲ ಭೂಕಂಪನದ ಅನುಭವಾಗಿದೆ. ಕುಮಟಾ ತಾಲೂಕಿನ ದೇವಿಮನೆ ಘಟ್ಟ, ಶಿರಸಿ ತಾಲೂಕಿನ ರಾಗಿಹೊಸಳ್ಳಿ, ಕಸಗೆ, ಬಂಡಳದಲ್ಲಿ ​ಭೂಮಿ ಕಂಪಿಸಿದೆ. ಭೂ ಕಂಪನದಿಂದ ಜನ ಬೆದರಿದ್ದಾರೆ.

ಕಾರವಾರ: ಪಶ್ಚಿಮಘಟ್ಟದ ಕುಮಟಾ, ಶಿರಸಿ ತಾಲೂಕಿನ ಹಲವಡೆ ಭೂ ಕಂಪನದ ಅನುಭವ
ಸಾಂಧರ್ಭಿಕ ಚಿತ್ರ
Follow us on

ಕಾರವಾರ, ಡಿಸೆಂಬರ್​ 01: ಪಶ್ಚಿಮಘಟ್ಟ ಪ್ರದೇಶದಲ್ಲಿ ಭೂ ಕಂಪನದ ಅನುಭವವಾಗಿದೆ. ಉತ್ತರ ಕನ್ನಡ (Uttar Kannada) ಜಿಲ್ಲೆ ಕುಮಟಾ (Kumata) ತಾಲೂಕಿನ ದೇವಿಮನೆ ಘಟ್ಟ, ಶಿರಸಿ (Sirasi) ತಾಲೂಕಿನ ರಾಗಿಹೊಸಳ್ಳಿ, ಕಸಗೆ, ಬಂಡಳದಲ್ಲಿ 3 ಸೆಕೆಂಡ್​ ಭೂಮಿ ಕಂಪಿಸಿದೆ. ಭೂ ಕಂಪನದಿಂದ ಜನ ಬೆದರಿದ್ದಾರೆ.

ಇದೇ ವರ್ಷ ಮಳೆಗಾದಲ್ಲಿ ಕುಮಟಾ ತಾಲೂಕಿನ ಬರ್ಗಿ, ಸಿದ್ದಾಪುರ-ಕುಮಟಾ ಮಾರ್ಗದ ಉಳ್ಳೂರಮಠ ಕ್ರಾಸ್​ ಬಳಿ ಗುಡ್ಡ ಕುಸಿತವಾಗಿತ್ತು. ಸುಮಾರು ಮುಕ್ಕಾಲು ಕಿಲೋಮಿಟರ್ ದೂರದಿಂದ ಗುಡ್ಡ ಕುಸಿದು ರಸ್ತೆಯ ಮೇಲೆ ಬಿದ್ದಿತ್ತು. ಇದರಿಂದ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು.

ಇದನ್ನೂ ಓದಿ: ತೂಗು ಸೇತುವೆ ಕೊಚ್ಚಿ ಹೋಗಿ ಐದು ವರ್ಷ ಕಳೆದರೂ ಇಲ್ಲ ಪರ್ಯಾಯ ವ್ಯವಸ್ಥೆ

ಇನ್ನು, ಇದೇ ಸಂದರ್ಭದಲ್ಲಿ ಅಂಕೋಲಾ ತಾಲೂಕಿನ ಶಿರೂರು ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಗುಡ್ಡ ಕುಸಿತಗೊಂಡಿತ್ತು. ಗುಡ್ಡ ಕುಸಿತದಲ್ಲಿ 11 ಜನರು ಮೃತಪಟ್ಟಿದ್ದರು. ಕೆಲವರ ಮೃತದೇಹಗಳನ್ನು ಹೆದ್ದಾರಿ ಪಕ್ಕದಲ್ಲೇ ಇದ್ದ ಗಂಗಾವಳಿ ನದಿಯಲ್ಲಿ ಪತ್ತೆಯಾಗಿದ್ದವು.

ಗುಡ್ಡ ಕುಸಿದು ಅಪಾರ ಪ್ರಮಾಣದ ಮಣ್ಣು ಗಂಗಾವಳಿ ನೀರಿನಲ್ಲಿ ಬಿದ್ದಿದ್ದರಿಂದ ನೀರು ಉಕ್ಕಿ ಪಕ್ಕದ ಉಳುವರೆ ಗ್ರಾಮದೊಳಕ್ಕೆ ನುಗ್ಗಿತ್ತು. ಇದರಿಂದ ಆರು ಮನೆಗಳು ಸಂಪೂರ್ಣ ನಾಶವಾಗಿದ್ದವು. 30ಕ್ಕೂ ಹೆಚ್ಚು ಮನೆಗಳು ಭಾಗಶಃ ಹಾನಿಗೊಳಗಾಗಿದ್ದವು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ