ಕುಮಟಾ: ತೂಗು ಸೇತುವೆ ಕೊಚ್ಚಿ ಹೋಗಿ ಐದು ವರ್ಷ ಕಳೆದರೂ ಇಲ್ಲ ಪರ್ಯಾಯ ವ್ಯವಸ್ಥೆ, ಏಳು ಗ್ರಾಮಗಳ ಜನರಿಗೆ ನರಕ ಯಾತನೆ

ಅವು ನದಿಯ ದಡದ ಸಣ್ಣ ಗ್ರಾಮಗಳು. ಚಿಕ್ಕ ಪುಟ್ಟ ಕೆಲಸಕ್ಕೂ ನದಿ ಇನ್ನೊಂದು ಬದಿಯ ಗ್ರಾಮವನ್ನೇ ಅವಲಂಬಿಸಿರುವ ಹಿನ್ನೆಲೆ ತೂಗುಸೇತುವೆಯನ್ನೇ ನಿತ್ಯದ ಸಂಪರ್ಕ ಕೊಂಡಿಯಾಗಿ ಬಳಕೆ ಮಾಡಲಾಗುತಿತ್ತು, ಆದರೆ, ಕಳೆದ ಐದು ವರ್ಷಗಳ ಹಿಂದೆ ನದಿಯ ಪ್ರವಾಹದ ಅಬ್ಬರಕ್ಕೆ ತೂಗು ಸೇತುವೆ ಕೊಚ್ಚಿ ಹೋಗಿದೆ. ಇದುವರೆಗೂ ಸೇತುವೆ ನಿರ್ಮಾಣ ಮಾಡದ ಕಾರಣ, ಸುಮಾರು 32 ಕಿಲೋಮೀಟರ್ ಸುತ್ತಿಬಳಸಿ ಬರಬೇಕಿರುವ ಅನಿವಾರ್ಯತೆ ಉಂಟಾಗಿದೆ.

ಕುಮಟಾ: ತೂಗು ಸೇತುವೆ ಕೊಚ್ಚಿ ಹೋಗಿ ಐದು ವರ್ಷ ಕಳೆದರೂ ಇಲ್ಲ ಪರ್ಯಾಯ ವ್ಯವಸ್ಥೆ, ಏಳು ಗ್ರಾಮಗಳ ಜನರಿಗೆ ನರಕ ಯಾತನೆ
ಮುರಿದು ಬಿದ್ದಿರುವ ತೂಗುಸೇತುವೆಯ ಅವಶೇಷ
Follow us
ಸೂರಜ್​, ಮಹಾವೀರ್​ ಉತ್ತರೆ
| Updated By: Ganapathi Sharma

Updated on: Nov 28, 2024 | 2:49 PM

ಕಾರವಾರ, ನವೆಂಬರ್ 28: ಸಮೃದ್ಧವಾದ ಕಾಡಿನ ಮಧ್ಯದಿಂದ ಹರಿದು ಬರುತ್ತಿರುವ ಅಘನಾಶಿನಿ ನದಿ. ನದಿಯ ಪಕ್ಕದಲ್ಲೇ ಕಳಚಿ ಬಿದ್ದಿರುವ ತೂಗು ಸೇತುವೆ. ಇನ್ನೊಂದು ಕಡೆ ಆತಂಕದಲ್ಲಿ ನಿಂತಿರುವ ಗ್ರಾಮಸ್ಥರು. ಇದು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಬಂಗಣಿ ಸೇರಿದಂತೆ ಏಳೂ ಗ್ರಾಮಸ್ಥರ ಪರಿಸ್ಥಿತಿ. 2019 ರಲ್ಲಿ ಸುರಿದ ಅಬ್ಬರದ ಮಳೆಗೆ ಅಘನಾಶಿನಿ ನದಿಗೆ ಅಡ್ಡಲಾಗಿ ಕಟ್ಟಿರುವ ತೂಗುಸೇತುವೆ ಕಳಚಿ ಬಿದ್ದಿತ್ತು. ಸುಮಾರು ಐದು ವರ್ಷಗಳಿಂದ ನಿತ್ಯ 32 ಕಿಮೀ ಸಂಚರಿಸಿ ಬರಬೇಕಿರುವ ಗೊಳು ಈ ಗ್ರಾಮಸ್ಥರದ್ದಾಗಿದೆ.

ಯಾಕಂದರೆ, ನದಿಯ ಈ ಬದಿಯಲ್ಲಿರುವ ಬಂಗಣಿ, ಮೊರ್ಸೆ, ಮೂಡಗಿ, ಚಿಂಬೊಳ್ಳಿ, ಕಲವೆ, ಹಲಬಳ್ಳಿ, ಉಪ್ಲೆ ಹೀಗೆ ಒಟ್ಟು ಏಳು ಚಿಕ್ಕ ಚಿಕ್ಕ ಗ್ರಾಮಗಳಿಗೆ ಸಂಬಂಧಿಸಿದ ಗ್ರಾಮ ಪಂಚಾಯತಿ ನದಿಯ ಆ ಬದಿಯಲ್ಲಿರುವ ಸೊಪ್ಪಿನ ಹೊಸಳ್ಳಿ ಯಲ್ಲಿದೆ. ಹಾಗಾಗಿ ಪಡಿತರ ಅಂಗಡಿ, ಆಸ್ಪತ್ರೆ, ಶಾಲೆ, ಅಂಚೆ ಕಚೇರಿ, ಬ್ಯಾಂಕ್ ಹಾಗೂ ಪ್ರಮುಖ ಸಂತೆ ಪೆಟೆ ಎಲ್ಲ ಅದೆ ಗ್ರಾಮದಲ್ಲಿವೆ. ಹಾಗಾಗಿ ನಿತ್ಯ ಹೊಗದೆ ಇದ್ದರೂ ತಿಂಗಳಿಗೆ ಎರಡು ಬಾರಿಯಾದರೂ ರೇಶನ್ ಹಾಗೂ ಅಂಚೆ ಕೇಚೇರಿಗೆ ಬರುವ ಪಿಂಚಣಿ ತರಲು ಹೊಗಬೇಕಾದ ಅನಿವಾರ್ಯ ಪರಿಸ್ಥಿತಿ ಇದೆ. ಗ್ರಾಮದಿಂದ ಸರಿಯಾದ ಬಸ್ ವ್ಯವಸ್ಥೆಯೂ ಇಲ್ಲದ ಹಿನ್ನೆಲೆ, ಅನೇಕ ವೃದ್ಧರು ತಮ್ಮ ತಿಂಗಳ ಪಿಂಚಣಿ ತರಲು ಪರದಾಡುವಂತಾಗಿದೆ.

Kumta: Five years after the suspension bridge collapsed, no alternative system, people of seven villages are living in hell

ಅಘನಾಶಿನಿ ನದಿ

ತೂಗು ಸೇತುವೆ ನಿರ್ಮಾಣ ವಿಚಾರವಾಗಿ ಪ್ರಾರಂಭದಲ್ಲಿ ಇಲ್ಲಿನ ಜನಪ್ರತಿನಿಧಿಗಳು ಭಾರಿ ಆಸಕ್ತಿ ತೊರಿಸಿದ್ದರು ಎನ್ನಲಾಗಿದೆ. ಕಳಚಿ ಬಿದ್ದರುವ ತೂಗು ಸೇತುವೆಯ ಬಿಡಿ ಭಾಗಗಳನ್ನು ನದಿಯಿಂದ ಹೊರ ತೆಗೆಯಲು ನಾಲ್ಕು ಲಕ್ಷ ರೂ. ಮಂಜೂರಾತಿ ಆಗಿದೆ. ಆದರೆ ಅದು ತಕ್ಷಣಕ್ಕೆ ಸಿಗುವುದು ಕಷ್ಟ, ನೀವು ಗ್ರಾಮಸ್ಥರೆಲ್ಲ ಸೇರಿ ಅದನ್ನು ತೆರವು ಮಾಡಿದರೆ ನಿರ್ಮಾಣ ಮಾಡುವ ಕೆಲಸ ನಾವು ಮಾಡುತ್ತೇವೆ ಎಂದು ಮಗ್ರಾಮಸ್ಥರಿಗೆ ಹೇಳಿದ್ದಾರೆ ಎನ್ನುತ್ತಾರೆ ಸ್ಥಳೀಯರು.

ಗ್ರಾಮಸ್ಥರಿಂದಲೇ ತೂಗು ಸೇತುವೆ ಅವಶೇಷ ತೆರವು

ಗ್ರಾಮಸ್ಥರೆಲ್ಲ ಸೇರಿ ಪ್ರತಿ ಮನೆಗೆ 12 ಆಳಿನಂತೆ ಕೂಲಿ ಮಾಡಿ ನದಿಯಲ್ಲಿ ಬಿದ್ದಿದ್ದ ತೂಗು ಸೇತುವೆಯ ಬಿಡಿ ಭಾಗ ತೆರವು ಮಾಡಿದ್ದರು. ಅದಾದ ಬಳಿಕ ಸೇತುವೆ ನಿರ್ಮಾಣಕ್ಕೆ ಆದಷ್ಟು ಬೇಗ ಟೆಂಡರ್ ಆಗುತ್ತದೆ ಎಂದು ಹೇಳಿ ಹೋದ ಜನಪ್ರತಿನಿಧಿಗಳು, ಇವತ್ತಿನವರೆಗೂ ಗ್ರಾಮದ ಕಡೆಗೆ ತಿರುಗಿಯೂ ನೊಡಿಲ್ಲ ಎಂದಿದ್ದಾರೆ ಈ ಗ್ರಾಮದ ಜನ.

ಜನಪ್ರತಿನಿಧಿಗಳ ಮನೆ ಬಳಿ ಹೋದಾಗ ಕುಂಟು ನೇಪ ಹೇಳಿ ಕಳಿಳುಹಿಸುತ್ತಾರೆಯೇ ಹೊರತು ಸೇತುವೆ ನಿರ್ಮಾಣದ ಬಗ್ಗೆ ಆಸಕ್ತಿ ತೊರಿಸಲ್ಲ ಎಂದು ಗ್ರಾಮಸ್ಥರು ಅಳಲು ತೊಡಿಕೊಂಡರು.

ಇದನ್ನೂ ಓದಿ: ಕುಮಟಾ- ಶಿರಸಿ ರಸ್ತೆ ಸಂಚಾರ ಡಿಸೆಂಬರ್ 2ರಿಂದ ಫೆಬ್ರವರಿ 25ರವರೆಗೆ ಬಂದ್

ಒಟ್ಟಾರೆಯಾಗಿ ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆಯಿಂದ, ಏಳು ಗ್ರಾಮಗಳ ಜನರು ಕಳೆದ ಐದು ವರ್ಷಗಳಿಂದ ನರಕ ಯಾತನೆ ಅನುಭವಿಸುತ್ತಿದ್ದಾರೆ. ಸಮಸ್ಯೆಗಳನ್ನು ಬಗೆಹರಿಸುವ ಬುದ್ಧಿ ಆದಷ್ಟು ಬೇಗ ಸಂಬಂಧಪಟ್ಟ ಜನಪ್ರತಿನಿಧಿಗಳಿಗೆ ಬರಲಿ ಎನ್ನುತ್ತಾರೆ ಸ್ಥಳೀಯರು.

ಕರ್ನಾಟಕದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ಪ್ರವಾಹದ ನೀರಿಗಿಳಿದು 3 ಬೆಕ್ಕಿನ ಮರಿಗಳನ್ನು ರಕ್ಷಿಸಿದ ಪುಟ್ಟ ಬಾಲಕ
ಪ್ರವಾಹದ ನೀರಿಗಿಳಿದು 3 ಬೆಕ್ಕಿನ ಮರಿಗಳನ್ನು ರಕ್ಷಿಸಿದ ಪುಟ್ಟ ಬಾಲಕ
ಸಿಂಗಾಪುರ್ ವಿಮಾನ ನಿಲ್ದಾಣಕ್ಕೆ ನುಗ್ಗಿದ ಕೋತಿ; ಸಿಬ್ಬಂದಿ ಮಾಡಿದ್ದೇನು?
ಸಿಂಗಾಪುರ್ ವಿಮಾನ ನಿಲ್ದಾಣಕ್ಕೆ ನುಗ್ಗಿದ ಕೋತಿ; ಸಿಬ್ಬಂದಿ ಮಾಡಿದ್ದೇನು?
ಕ್ಲಿಯೋಪಾತ್ರ ಸ್ನಾನ ಮಾಡುತ್ತಿದ್ದ ಕತ್ತೆ ಹಾಲು ಕುಡಿದ ಬಾಬಾ ರಾಮದೇವ್
ಕ್ಲಿಯೋಪಾತ್ರ ಸ್ನಾನ ಮಾಡುತ್ತಿದ್ದ ಕತ್ತೆ ಹಾಲು ಕುಡಿದ ಬಾಬಾ ರಾಮದೇವ್
ಪಾರ್ಕ್​ನಲ್ಲಿ ಹಾಡಿನ ಶೂಟಿಂಗ್ ಮಾಡಿದ್ರೆ ನೋಡ್ತೀರಾ? ಉಪೇಂದ್ರ ಪ್ರಶ್ನೆ
ಪಾರ್ಕ್​ನಲ್ಲಿ ಹಾಡಿನ ಶೂಟಿಂಗ್ ಮಾಡಿದ್ರೆ ನೋಡ್ತೀರಾ? ಉಪೇಂದ್ರ ಪ್ರಶ್ನೆ
ಹಿಂದಿ ಹಾಡಿಗೆ ಸಖತ್ತಾಗಿ ಅಭಿನಯ ಮಾಡಿದ 5 ವರ್ಷದ ಪುಟ್ಟ ಬಾಲಕಿ
ಹಿಂದಿ ಹಾಡಿಗೆ ಸಖತ್ತಾಗಿ ಅಭಿನಯ ಮಾಡಿದ 5 ವರ್ಷದ ಪುಟ್ಟ ಬಾಲಕಿ
ಸುಳ್ಳು ಕೇಸಲ್ಲಿ ರೇವಣ್ಣನನ್ನು ಸಿಕ್ಕಿಸುವ ಪ್ರಯತ್ನ ಮಾಡಲಾಗಿತ್ತು:ಹೆಚ್ಡಿಕೆ
ಸುಳ್ಳು ಕೇಸಲ್ಲಿ ರೇವಣ್ಣನನ್ನು ಸಿಕ್ಕಿಸುವ ಪ್ರಯತ್ನ ಮಾಡಲಾಗಿತ್ತು:ಹೆಚ್ಡಿಕೆ
ವಕ್ಫ್ ಕಾಯ್ದೆಗೆ ತಿದ್ದುಪಡಿ ತರಲು ನಾವು ನೀಡಿದ ವರದಿ ನೆರವಾಗಲಿದೆ:ಬಂಗಾರಪ್ಪ
ವಕ್ಫ್ ಕಾಯ್ದೆಗೆ ತಿದ್ದುಪಡಿ ತರಲು ನಾವು ನೀಡಿದ ವರದಿ ನೆರವಾಗಲಿದೆ:ಬಂಗಾರಪ್ಪ
‘ಪುಷ್ಪ 2’ ಸಿನಿಮಾ ಮೊದಲ ದಿನ ಎಷ್ಟು ಗಳಿಸಲಿದೆ: ವಿತರಕರ ನಿರೀಕ್ಷೆ ಏನು?
‘ಪುಷ್ಪ 2’ ಸಿನಿಮಾ ಮೊದಲ ದಿನ ಎಷ್ಟು ಗಳಿಸಲಿದೆ: ವಿತರಕರ ನಿರೀಕ್ಷೆ ಏನು?
‘ಹೆಣ್ಮಕ್ಕಳ ಹಿಂದೆ ತಿರುಗುವ ಜೊಲ್ಲ’: ಶಿಶಿರ್ ಬಗ್ಗೆ ಚೈತ್ರಾ ಗಂಭೀರ ಆರೋಪ
‘ಹೆಣ್ಮಕ್ಕಳ ಹಿಂದೆ ತಿರುಗುವ ಜೊಲ್ಲ’: ಶಿಶಿರ್ ಬಗ್ಗೆ ಚೈತ್ರಾ ಗಂಭೀರ ಆರೋಪ
ಆಂತರಿಕ ವಿಷಯಗಳ ಬಗ್ಗೆ ಮಾತಾಡಬಾರದೆಂದು ಸಮಿತಿ ಹೇಳಿದೆ: ಬಸನಗೌಡ ಯತ್ನಾಳ್
ಆಂತರಿಕ ವಿಷಯಗಳ ಬಗ್ಗೆ ಮಾತಾಡಬಾರದೆಂದು ಸಮಿತಿ ಹೇಳಿದೆ: ಬಸನಗೌಡ ಯತ್ನಾಳ್