ಯಲ್ಲಾಪುರ: ಬಿಜೆಪಿ ಪದಾಧಿಕಾರಿಗಳ ಮರು ನೇಮಕಕ್ಕೆ ಶಿವರಾಮ್ ಹೆಬ್ಬಾರ್ ಅಭಿಮಾನಿ ಬಳಗದಿಂದ ಕಿಡಿ

| Updated By: Ganapathi Sharma

Updated on: Oct 24, 2023 | 4:39 PM

ಪಕ್ಷದ ಅಭ್ಯರ್ಥಿಯನ್ನೆ ಸೋಲಿಸ ಹೊರಟ ಪಕ್ಷ ದ್ರೋಹಿಗಳಿಗೆ ಮತ್ತೆ ಅದೇ ಸ್ಥಾನಗಳಿಗೆ ಮರು ಸೇರ್ಪಡೆ ಮಾಡುತ್ತಿರುವ ಸುದ್ದಿ ನೋಡಿ ನಿಷ್ಟಾವಂತ ಹೆಬ್ಬಾರ್ ಅಭಿಮಾನಿಗಳಾದ ನಮ್ಮಂತಹ ಸಹಸ್ರಾರು ಮಂದಿಗೆ ಅತೀವ ಬೇಸರವಾಗಿದೆ. ಈ ಧೋರಣೆ ಅತ್ಯಂತ ಖಂಡನೀಯ ಎಂದು ಶಿವಾನಂದ ನಾಯ್ಕ ಅಕ್ರೋಶ ಹೊರಹಾಕಿದರು.

ಯಲ್ಲಾಪುರ: ಬಿಜೆಪಿ ಪದಾಧಿಕಾರಿಗಳ ಮರು ನೇಮಕಕ್ಕೆ ಶಿವರಾಮ್ ಹೆಬ್ಬಾರ್ ಅಭಿಮಾನಿ ಬಳಗದಿಂದ ಕಿಡಿ
ಸತೀಶ್ ಶಿವಾನಂದ ನಾಯ್ಕ
Follow us on

ಕಾರವಾರ, ಅಕ್ಟೋಬರ್ 24: ಪಕ್ಷ ವಿರೋಧಿ ಚಟುವಟಿಕೆ ಹಿನ್ನಲೆಯಲ್ಲಿ ಯಲ್ಲಾಪುರದ ಐದು ಜನ ಬಿಜೆಪಿ (BJP) ಪದಾಧಿಕಾರಿಗಳನ್ನು ಜಿಲ್ಲಾ ಬಿಜೆಪಿ ಅಧ್ಯಕ್ಷ ವೆಂಕಟೇಶ್ ನಾಯ್ಕ ರವರು ಮರು ನೇಮಕ ಮಾಡಿರುವುದಕ್ಕೆ ಶಿವರಾಮ್ ಹೆಬ್ಬಾರ್ ರವರ (Arbail Shivaram Hebbar) ಅಭಿಮಾನಿ ಬಳಗ ಅಸಮಧಾನ ಹೊರಹಾಕಿದೆ. ಇಂದು ಯಲ್ಲಾಪುರದ ಖಾಸಗಿ ಹೋಟಲ್ ನಲ್ಲಿ ಸುದ್ದಿಗೋಷ್ಠಿ ನಡೆಸಿದ ಹೆಬ್ಬಾರ್ ಅಭಿಮಾನಿ ಬಳಗದ ಪಟ್ಟಣಪಂಚಾಯತ್ ಸದಸ್ಯ ಸತೀಶ್ ಶಿವಾನಂದ ನಾಯ್ಕ ಅಸಮದಾನ ಹೊರಹಾಕಿದ್ದಾರೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ವಿರೋಧಿಚಚಟುವಟಿಕೆ ನಡೆಸಿ ಯಲ್ಲಾಪುರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಶಿವರಾಮ್ ಹೆಬ್ಬಾರ್ ರವರು ಅತ್ಯಲ್ಪ ಮತಗಳಿಂದ ಗೆಲುವು ಕಾಣುವಂತಾಯ್ತು. ಹೀಗಾಗಿ ಇಂತವರ ವಿರುದ್ಧ ಕ್ರಮಕ್ಕಾಗಿ ಶಾಸಕ ಶಿವರಾಮ್ ಹೆಬ್ಬಾರ್ ರವರು ಪಕ್ಷದ ವರಿಷ್ಟರಿಗೆ ದೂರು ನೀಡಿದ್ದರು. ಇದಲ್ಲದೇ ಶಿರಸಿಯ ಮಾಜಿ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಸಹ ದೂರು ನೀಡಿದ್ದರು. ಇದರ ಅನ್ವಯ ಶಿರಸಿ ಯಲ್ಲಾಪುರದಲ್ಲಿ ಪದಾಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡ ಪಕ್ಷದ ಶಿಸ್ತುಪಾಲನಾ ಸಮಿತಿ ಯಲ್ಲಾಪುರ ಹಾಗೂ ಶಿರಸಿ ಭಾಗದಲ್ಲಿನ ಪಕ್ಷ ವಿರೋಧಿ ಕಾರ್ಯ ನಡೆಸಿದ ಪದಾಧಿಕಾರಿಗಳನ್ನು ಪಕ್ಷದ ಪದಾಧಿಕಾರಿ ಸ್ಥಾನ ದಿಂದ ವಿಮುಕ್ತಿ ಗೊಳಿಸಲಾಗಿತ್ತು. ಆದರೇ ಇದೀಗ ಯಲ್ಲಾಪುರದಲ್ಲಿ ಐದು ಜನರನ್ನು ಪುನಃ ಪದಾಧಿಕಾರಿ ಸ್ಥಾನಕ್ಕೆ ಅವರನ್ನು ಮರು ನೇಮಕ ಮಾಡಿಕೊಳ್ಳಲಾಗಿದೆ. ಆದ್ರೆ ಶಿರಸಿಯಲ್ಲಿ ವಿಶ್ವೇಶ್ವರ ಹೆಗಡೆ ಕಾಗೇರಿ ವಿರುದ್ಧ ಬಿದ್ದು ಪಕ್ಷ ವಿರೋಧಿ ಚಟುವಟಿಕೆ ನಡೆಸಿದವರ ವಿರುದ್ಧ ಕ್ರಮ ಕೈಗೊಳ್ಳಲಾಗಿತ್ತು. ಆದ್ರೆ ಯಲ್ಲಾಪುರದಲ್ಲಿ ಮರು ನೇಮಕ ಮಾಡಿದಂತೆ ಶಿರಸಿಯಲ್ಲಿ ಯಾಕೆ ಮಾಡಲಿಲ್ಲ? ಹೆಬ್ಬಾರ್ ಗೆ ಒಂದು ನ್ಯಾಯ, ಕಾಗೇರಿಯವರಿಗೆ ಒಂದು ನ್ಯಾಯ ಮಾಡಿದ್ದು ಎಷ್ಟು ಸರಿ ಎಂದು ಶಿವಾನಂದ ನಾಯ್ಕ ಅಕ್ರೋಶ ಹೊರಹಾಕಿದರು.

ಇನ್ನು ಶಾಸಕರು ನೀಡಿದ ಲಿಖಿತ ದೂರಿಗೆ ಪಕ್ಷ ಮನ್ನಣೆ ನೀಡಿಲ್ಲ, ಪಕ್ಷವಿರೋಧಿಗಳನ್ನು ಪುನಃ ಸೇರ್ಪಡೆ ಮಾಡಿಕೊಂಡ ಪಕ್ಷದ ವರಿಷ್ಠರ ನಡೆ ಖಂಡನೀಯ. ಕೇವಲ ನಾಮಕಾವಸ್ತೆ ಕ್ರಮ ಜರುಗಿಸಿದಂತೆ ಪಕ್ಷದಲ್ಲಿದ್ದ ಪದವಿಗಳಿಂದ ವಿಮುಕ್ತಿಗೊಳಿಸಿ ತೇಪೆ ಹಚ್ಚುವ ಕೆಲಸವಾಗಿತ್ತು ಆದರೆ ಇದೀಗ ಪಕ್ಷದ ಅಭ್ಯರ್ಥಿಯನ್ನೆ ಸೋಲಿಸ ಹೊರಟ ಪಕ್ಷ ದ್ರೋಹಿಗಳಿಗೆ ಮತ್ತೆ ಅದೇ ಸ್ಥಾನಗಳಿಗೆ ಮರು ಸೇರ್ಪಡೆ ಮಾಡುತ್ತಿರುವ ಸುದ್ದಿ ನೋಡಿ ನಿಷ್ಟಾವಂತ ಹೆಬ್ಬಾರ್ ಅಭಿಮಾನಿಗಳಾದ ನಮ್ಮಂತಹ ಸಹಸ್ರಾರು ಮಂದಿಗೆ ಅತೀವ ಬೇಸರವಾಗಿದೆ. ನನ್ನನ್ನು ಸಹ ಹೆಸರಿಗೆ ಮಾತ್ರ ಶಕ್ತಿಕೇಂದ್ರದ ಅಧ್ಯಕ್ಷೆಯನ್ನಾಗಿಸಿ ಫೋನ್ ಕರೆ ಮಾಡುವ ಕೆಲಸಕ್ಕೆ ಮಾತ್ರ ಬಳಸಿಕೊಂಡು ನಿರ್ಲಕ್ಷಿಸಿದ ಧೋರಣೆ ಅತ್ಯಂತ ಖಂಡನೀಯ ಎಂದು ಅವರು ಹೇಳಿದ್ದಾರೆ.

ಪಕ್ಷದ ವರಿಷ್ಟರ ಈ ನಡೆ ಪಕ್ಷದ ನಿಷ್ಟಾವಂತ ಕಾರ್ಯಕರ್ತರಾದ ನಮ್ಮೆಲ್ಲರ ಚುನಾವಣೆ ಸಂದರ್ಭದ ಶ್ರಮಕ್ಕೆ ಅವಮಾನಿಸಿದಂತಾಗಿದೆ. ಈ ಸಂಬಂಧ ಪಕ್ಷದ ಜಿಲ್ಲಾ ವರಿಷ್ಟರು ಮತ್ತು ರಾಜ್ಯದ ವರಿಷ್ಟರು ಪಕ್ಷದ ಶಾಸಕರ ಗಮನಕ್ಕು ತರದೆ ಪಕ್ಷದ್ರೋಹಿಗಳನ್ನು ಮತ್ತೆ ಪಕ್ಷದ ಪದವಿಗಳಿಗೆ ಮರು ಸೇರ್ಪಡೆ ಮಾಡಿರುವುದು ಶಾಸಕರಿಗೆ ಮಾಡಿದ ಅಪಮಾನವಾಗಿದ್ದು ಇದನ್ನು ಹೆಬ್ಬಾರ್ ಅಭಿಮಾನಿ ಬಳಗ ಉಗ್ರವಾಗಿ ವಿರೋಧಿಸುತ್ತಿದೆ ಎಂದು ಅವರು ಹೇಳಿದ್ದಾರೆ.

ತಕ್ಷಣ ಪಕ್ಷದ ನಾಯಕರು ಶಾಸಕರೊಂದಿಗೆ ಮಾತನಾಡಿ ಅವರ ಒಪ್ಪಿಗೆ ಪಡೆದು ಈ ಕ್ರಮದ ಬಗ್ಗೆ ನಿರ್ಧರಿಸಬೇಕಿದೆ ಎಂದು ಅವರು ಆಗ್ರಹಿಸಿದ್ದಾರೆ. ಇಲ್ಲವಾದಲ್ಲಿ ಬರಲಿರುವ ಲೋಕ ಸಭಾ ಚುನಾವಣೆಯಲ್ಲಿ ಪಕ್ಷವೇ ಅಧಿಕೃತವಾಗಿ ಪಕ್ಷದ್ರೋಹಿಗಳಿಗೆ ಬಲ ತುಂಬಿ ಪಕ್ಷದಿಂದ ಸ್ಪರ್ಧಿಸುವ ಅಧಿಕೃತ ಅಭ್ಯರ್ಥಿ ವಿರುದ್ಧ ಪ್ರಚಾರಮಾಡಿ ಸೋಲಿಸುವಂತೆ ಪ್ರೇರಣೆ ನೀಡಿದಂತಾಗಲಿದೆ ಎಂದು ಶಿವಾನಂದ ನಾಯ್ಕ ಹೇಳಿದ್ದಾರೆ.

ಇದನ್ನೂ ಓದಿ: ಶೋಭಾ ಕರಂದ್ಲಾಜೆ ಜತೆ ತೇಲಿಬಂತು ಮತ್ತೊಂದು ಹೆಸರು: ಬಿಜೆಪಿ ರಾಜ್ಯಾಧ್ಯಕ್ಷ ಪಟ್ಟ ಒಕ್ಕಲಿಗರಿಗೋ, ಲಿಂಗಾಯತರಿಗೋ?

ಹಾಗೇನಾದರು ಆದಲ್ಲಿ ಪಕ್ಷ,ತತ್ವ,ಸಿದ್ದಾಂತ, ಶಿಸ್ತು ಎಲ್ಲವು ತೋರ್ಪಡಿಕೆಯ ಭಾಷಣದ ಪದಗಳೆಂದು ಕಾರ್ಯಕರ್ತರಾದ ನಾವುಭಾವಿಸುವಂತಾಗಲಿದೆ ದಯವಿಟ್ಟು ಅದಕ್ಕೆ ಆಸ್ಪದ ನೀಡದೆ ಕ್ರಮಜರುಗಿಸಬೇಕಿದೆ ಎಂದಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಪಟ್ಟಣ ಪಂಚಾಯತ್ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಅಮಿತ್ ಅಂಗಡಿ, ಸದಸ್ಯರಾದ ಪ್ರಶಾಂತ್ ತಳವಾರ, ಅಬ್ದುಲ್ ಅಲಿ ನೂತನ ನಗರ, ಹಲೀಮ ಕಕ್ಕೇರಿ, ಗೀತಾ ದೇಶ ಭಂಡಾರಿ, ನಾಗರಾಜ್ ಅಂಕೋಲೆಕರ್ ಉಪಸ್ಥಿತರಿದ್ದರು.

ಮತ್ತಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ