“ನಮಗೆ ಹೊಸ ಸೇತುವೆ ಬೇಕು”: 30 ವರ್ಷಗಳಿಂದ ಮನವಿ, ಕ್ಯಾರೆ ಎನ್ನದ ಅಧಿಕಾರಿಗಳು

ಉತ್ತರ ಕನ್ನಡದ ಯಲ್ಲಾಪುರ ತಾಲೂಕಿನ ಹುಲಿಮನೆ ಗ್ರಾಮಸ್ಥರು ಕಳೆದ 30 ವರ್ಷಗಳಿಂದ ಸೇತುವೆ ಸಮಸ್ಯೆಯಿಂದ ಕಷ್ಟಪಡುತ್ತಿದ್ದಾರೆ. ಹಳೆಯ ಸೇತುವೆ ಹಾಳಾಗಿದ್ದು, ಹೊಸ ಸೇತುವೆ ನಿರ್ಮಿಸುವಂತೆ ಪದೇ ಪದೇ ಮನವಿ ಮಾಡಿದರೂ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಸ್ಪಂದಿಸುತ್ತಿಲ್ಲ. ಶಾಲೆಗೆ ಹೋಗುವ ಮಕ್ಕಳು ಮತ್ತು ಮಹಿಳೆಯರು ವಿದ್ಯುತ್ ಕಂಬದ ಮೇಲೆ ಅಪಾಯಕಾರಿ ರೀತಿಯಲ್ಲಿ ಹಳ್ಳ ದಾಟುವ ಪರಿಸ್ಥಿತಿ ಬಂದಿದೆ. ಈ ಸಂಕಷ್ಟಕ್ಕೆ ಸೂಕ್ತ ಪರಿಹಾರ ಸಿಗಬೇಕಿದೆ ಎಂದು ಅಲ್ಲಿನ ಜನ ಹೇಳಿದ್ದಾರೆ.

ನಮಗೆ ಹೊಸ ಸೇತುವೆ ಬೇಕು: 30 ವರ್ಷಗಳಿಂದ ಮನವಿ, ಕ್ಯಾರೆ ಎನ್ನದ ಅಧಿಕಾರಿಗಳು
ವಿಡಿಯೋ
Edited By:

Updated on: Dec 16, 2025 | 3:26 PM

ಯಲ್ಲಾಪುರ , ಡಿ.16: ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಹುಲಿಮನೆ ಗ್ರಾಮದ (Yellapur Bridge) ಜನರ ಕಷ್ಟವನ್ನು ಕೇಳುವವರು ಇಲ್ಲ. ಈ ಗ್ರಾಮದಲ್ಲಿ ಹೊಸ ಸೇತುವೆ ನಿರ್ಮಿಸಿಕೊಡಿ ಎಂದು ಕಳೆದ 30 ವರ್ಷಗಳಿಂದ ಇಲ್ಲಿನ ಜನ ಕೇಳುತ್ತಿದ್ದಾರೆ. ಹಳೆಯ ಸೇತುವೆಯಲ್ಲಿ ಓಡಾಡಲು ಭಯ ಆಗುತ್ತಿದೆ. ಈ ಹಳೆಯ ಸೇತುವೆಯ ಕಾಮಗಾರಿ ಸಂಪೂರ್ಣ ಕಳಪೆಯಾಗಿದ್ದು, ಇದರ ನಿರ್ಮಾಣ ಸಂಪೂರ್ಣ ಅವೈಜ್ಞಾನಿಕವಾಗಿ ಮಾಡಲಾಗಿದೆ. ಕಳೆದ 30 ವರ್ಷದಿಂದ ಈ ಸೇತುವೆಯಲ್ಲಿ ಓಡಾಡಲು ಆಗುತ್ತಿಲ್ಲ. ಈ ಬಗ್ಗೆ ಅಧಿಕಾರಿಗಳು ಹಾಗೂ ಪ್ರತಿನಿಧಿಗಳು ಯಾವುದೇ ಪ್ರತಿಕ್ರಿಯೆಯಾಗಲಿ ಅಥವಾ ಇದರ ಬಗ್ಗೆ ಕಾಳಜಿ ವಹಿಸಿ ಕೆಲಸ ಮಾಡುವ ಆಸಕ್ತಿಯನ್ನು ತೋರಿಸುತ್ತಿಲ್ಲ. ಅದರೂ ಕೆಲವು ಸ್ಥಳೀಯರು ಈ ಸೇತುವೆಯಲ್ಲಿ ಪ್ರಾಣದ ಹಂಗು ತೊರೆದು ಹಳ್ಳದಾಟುವಂತಾಗಿದೆ.

ಸರಿಯಾದ ಸೇತುವೆ ಇಲ್ಲದ ಕಾರಣ ಮಕ್ಕಳು, ಮಹಿಳೆಯರು ವಿದ್ಯುತ್ ಕಂಬದ ಮೇಲಿಂದ ಹಳ್ಳ ದಾಟುತ್ತಿದ್ದಾರೆ. ಇನ್ನು ಈ ಹಳೆಯ ಸೇತುವೆ ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗಿದೆ. ಇದರ ಸರಿ ಮಾಡುವಂತೆ ಅಧಿಕಾರಿಗಳು ಹಾಗೂ ಸ್ಥಳೀಯ ನಾಯಕರನ್ನು ಒತ್ತಾಯ ಮಾಡಿದ್ರೆ ಬೇಜವಾಬ್ದಾರಿ ಉತ್ತರ ನೀಡುತ್ತಾರೆ . ಈ ವರ್ಷದ ಅಬ್ಬರದ ಮಳೆಯಿಂದ ಹುಲಿಮನೆ ಹಾಗೂ ಕುಚಗಾಂವ ಗ್ರಾಮದ ಮಧ್ಯೆ ಇರುವ ಹಳ್ಳ ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ. ಇಲ್ಲಿನ ಜನ ಸಣ್ಣ ಪುಟ್ಟ ಕೆಲಸಕ್ಕೆ ಹಾಗೂ ಮಕ್ಕಳ ಶಾಲೆಗೆ ಹೋಗಲು ಕುಚಗಾಂವ ಗ್ರಾಮವನ್ನೆ ಅವಲಂಬಿಸಿದ್ದಾರೆ. ಹೀಗಾಗಿ ಹಳ್ಳ ಜೋರಾಗಿ ಹರಿಯುತ್ತಿರುವ ಕಾರಣ ಕಣ್ಮುಂದಿನ ಗ್ರಾಮಕ್ಕೆ ಹೊಗಲು ಎಂಟು ಕಿ.ಮಿ ಸುತ್ತಾಕಿ ಬರಬೇಕು. ಇಲ್ಲವೆಂದರೆ ಸೇತುವೆ ಪಕ್ಕದಲ್ಲಿ ಹಾಕಿರುವ ವಿದ್ಯುತ್​​​​ ಕಂಬದಲ್ಲಿ ಭಯದಿಂದಲ್ಲೇ ಹೆಜ್ಜೆ ಹಾಕಿಕೊಂಡು ಬರಬೇಕು.

ಇದನ್ನೂ ಓದಿ: ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!

ಇಲ್ಲಿದೆ ನೋಡಿ ವಿಡಿಯೋ:

ಇದು ಈ ಗ್ರಾಮವೊಂದರ ಸಮಸ್ಯೆ ಮಾತ್ರವಲ್ಲ, ಹುಲಿಮನೆ ಗ್ರಾಮ ಸೇರಿದಂತೆ ಸುತ್ತಲ ಐದಕ್ಕೂ ಹೆಚ್ಚು ಗ್ರಾಮಗಳು ಈ ಸಮಸ್ಯೆಯನ್ನು ಎದುರಿಸುತ್ತಿದೆ. ನಿತ್ಯ ಪ್ರಾಣ ಭಯದಲೇ ಕಳೆದ ಮೂರು ದಶಕಗಳಿಂದ ಈ ಹಳ್ಳವನ್ನು ದಾಟುತ್ತಿದ್ದಾರೆ. ಈ ಹಿಂದೆ ಸೇತುವೆ ನಿರ್ಮಾಣ ಮಾಡಿಕೊಡುವಂತೆ ಗ್ರಾಮಸ್ಥರು ನಿರಂತರ ಮನವಿ ಮಾಡಿದ ಕಾರಣ 2019ರ ಚುನಾವಣೆಗೂ ಮುನ್ನ 7 ಲಕ್ಷ ರೂ. ವೆಚ್ಚದಲ್ಲಿ ಸೇತುವೆ ನಿರ್ಮಾಣ ಮಾಡಲಾಗಿತ್ತು. ಇದು ಸಂಪೂರ್ಣ ಅವೈಜ್ಞಾನಿಕ ಕಾಮಗಾರಿಯಾಗಿತ್ತು. ಅದೇ ವರ್ಷದಲ್ಲಿ ಬಂದ ಮಳೆಗೆ ಸೇತುವೆ ಮೇಲಿದ್ದ ರಸ್ತೆ ಕೊಚ್ಚಿ ಹೋಗಿದೆ. ಇದರ ಜತೆಗೆ ಹಳೆಯ ಕಾಲು ಸುಂಕದ ಎರಡು ಬದಿಯ ರಸ್ತೆಯ ಮಣ್ಣು ಕೂಡ ಕೊಚ್ಚಿ ಹೋಗಿದೆ. ಈಗ ಇಲ್ಲಿನ ಜನ ವಿದ್ಯುತ್ ಕಂಬದ ಮೇಲೆ ಓಡಾಡುವ ಪರಿಸ್ಥಿತಿ ಬಂದಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

 

Published On - 3:24 pm, Tue, 16 December 25