ಚಾರ್ ಧಾಮ್ ಯಾತ್ರೆ ಕೈಗೊಂಡ ಯಾತ್ರಿಕರು ಸಹಾಯಧನಕ್ಕಾಗಿ ಏನೆಲ್ಲ ದಾಖಲಾತಿಗಳನ್ನು ಸಲ್ಲಿಸಬೇಕು ಗೊತ್ತಾ? ಯಾತ್ರೆಯ ಮಹತ್ವ, ಪ್ರಯೋಜನಗಳು ಇಲ್ಲಿವೆ
ಚಾರ್ ಧಾಮ್ ಯಾತ್ರೆ ಕೈಗೊಂಡ ಯಾತ್ರಿಕರು ಸರ್ಕಾರದಿಂದ ಸಿಗುವ ಸಹಾಯಧನಕ್ಕಾಗಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಏನೆಲ್ಲ ದಾಖಲಾತಿಗಳು ಬೇಕು ಎಂಬುದರ ಮಾಹಿತಿ ಇಲ್ಲಿದೆ.

ಉತ್ತರಾಖಂಡದಲ್ಲಿರುವ ಚಾರ್ ಧಾಮ್ ಯಾತ್ರೆ (Chardham Yatra) ಧಾರ್ಮಿಕ ಮಹತ್ವವನ್ನು ಹೊಂದಿದ್ದು, ನಾಲ್ಕು ಪವಿತ್ರ ದೇವಾಲಗಳಿಗೆ ಯಾತ್ರೆ ಕೈಗೊಳ್ಳುವುದನ್ನು ಹಿಂದಿಯಲ್ಲಿ ಚಾರ್ ಧಾಮ್ ಯಾತ್ರೆ ಎಂದು ಕರೆಯಲಾಗುತ್ತದೆ. ಈ ಯಾತ್ರೆ ಕೈಗೊಳ್ಳಬೇಕು ಎಂಬುದು ಪ್ರತಿಯೊಬ್ಬ ಹಿಂದೂವಿಕ ಕನಸಾಗಿರುತ್ತದೆ. ಈ ಯಾತ್ರೆ ಇಷ್ಟೊಂದು ಪ್ರಾಮುಖ್ಯತೆ ಪಡೆಯಲು ಕಾರಣ, ನಾಲ್ಕು ಹಿಮಾಲಯದ ದೇವಾಲಯಗಳಾದ ಯಮುನೋತ್ರಿ (Yamunotri), ಗಂಗೋತ್ರಿ (Gangotri), ಕೇದಾರನಾಥ (Kedarnath) ಮತ್ತು ಬದರಿನಾಥ (Badrinath)ವನ್ನು ಒಂದೇ ಸಮಯದಲ್ಲಿ ತೆರೆಯಲಾಗುತ್ತದೆ. ಈ ದೇವಾಲಯವನ್ನು ಜೀವನದಲ್ಲಿ ಒಮ್ಮೆ ದರ್ಶನ ಮಾಡಿದರೆ ಮೋಕ್ಷ ಲಭಿಸುತ್ತದೆ ಎಂಬ ನಂಬಿಕೆಯಿದೆ. ಇದೀಗ ಇಲ್ಲಿಗೆ ಯಾತ್ರೆ ಕೈಗೊಂಡ ಯಾತ್ರಿಕರು ಸರ್ಕಾರದಿಂದ ಸಿಗುವ ಸಹಾಯಧನವನ್ನು ಇಚ್ಚಿಸುತ್ತಿದ್ದೀರಿ ಎಂದಾದರೆ ಕೂಡಲೇ ಅರ್ಜಿ ಸಲ್ಲಿಸಬಹುದು. ಏನೆಲ್ಲಾ ದಾಖಲಾತಿಗಳು ಬೇಕು ಎಂಬುದನ್ನು ಈ ಕೆಳಗೆ ನೀಡಲಾಗಿದೆ.
ಚಾರ್ ಧಾಮ್ ಯಾತ್ರೆ ಕೈಗೊಂಡ ಯಾತ್ರಿಕರು ಸರ್ಕಾರದ ಸಹಾಯಧನಕ್ಕಾಗಿ ಅರ್ಜಿ ಸಲ್ಲಿಸಬಹುದು. ಇದಕ್ಕೆ ಒಂದಷ್ಟು ದಾಖಲಾತಿಗಳನ್ನು ನೀಡಬೇಕಾಗುತ್ತದೆ. ಅವುಗಳು ಯಾವುವು ಎಂದರೆ:
- ಒಂದು ಪಾಸ್ಪೋರ್ಟ್ ಸೈಜ್ ಫೋಟೋ
- ಆಧಾರ್ ಕಾರ್ಡ್, ರೇಷನ್ ಕಾರ್ಡ್, ಮತದಾರರ ಚೀಟಿ
- ರದ್ದುಪಡಿಸಿದ ಚೆಕ್ ಲೀಫ್ಪಾ
- ಸ್ಬುಕ್ನ ಮೊದಲ ಪುಟದ ಜೆರಾಕ್ಸ್ ಕಾಪಿ
- 20 ರೂ. ಛಾಪಾ ಕಾಗದದಲ್ಲಿ ಸ್ವ-ದೃಢೀಕರಣ
- ಯಾತ್ರೆ ಕೈಗೊಳ್ಳುವ ಮುನ್ನ ಯಾತ್ರೆಗೆ ನೋಂದಾಯಿಸಿಕೊಂಡ ಪ್ರತಿ
- ಯಾತ್ರೆ ಮುಗಿದ ನಂತರ ನೀಡಲಾಗುವಂತಹ ಪ್ರಮಾಣ ಪತ್ರ
ಹೆಚ್ಚಿನ ಮಾಹಿತಿಗಳಿಗಾಗಿ ದೂರವಾಣಿ ಸಂಖ್ಯೆ 08026709689 ಮತ್ತು 08026702271ಕ್ಕೆ ಕರೆ ಮಾಡಬಹುದು.
ಮಂಗಳಕರ ಚಾರ್ ಧಾಮ್ ಯಾತ್ರೆ
ದೇವಭೂಮಿ ಅಥವಾ ದೇವರ ನಾಡು ಎಂದೂ ಕರೆಯಲ್ಪಡುವ ಉತ್ತರಾಖಂಡವು ಹಲವಾರು ದೇವಾಲಯಗಳಿಗೆ ನೆಲೆಯಾಗಿದೆ. ಈ ಪೈಕಿ ಯಮುನೋತ್ರಿ, ಗಂಗೋತ್ರಿ, ಕೇದಾರನಾಥ ಮತ್ತು ಬದರಿನಾಥ ದೇವಾಲಯಗಳು ಹೆಚ್ಚು ಪ್ರಸಿದ್ಧಿ ಪಡೆದಿವೆ. ಈ ನಾಲ್ಕು ಕ್ಷೇತ್ರಗಳಿಗೆ ಯಾತ್ರೆ ಮಾಡಿದರೆ ಅದು ಮಂಗಳಕರ ಎಂದು ಹೇಳಲಾಗುತ್ತದೆ. ಈ ನಾಲ್ಕು ಪವಿತ್ರ ದೇವಾಲಯಗಳಿಗೆ ಭೇಟಿಕೊಟ್ಟರೆ ಎಲ್ಲಾ ಪಾಪಗಳು ನಾಶವಾಗುತ್ತವೆ ಮತ್ತು ವ್ಯಕ್ತಿಯು ಮುಕ್ತಿ ಹೊಂದುತ್ತಾನೆ ಎಂಬ ನಂಬಿಕೆ ಅಚಲವಾಗಿದೆ.ಇದರ ಹೊರತಾಗಿ ಯಾತ್ರೆ ಕೈಗೊಳ್ಳುವುದರಿಂದ ಕೆಲವೊಂದು ಪ್ರಯೋಜನಗಳು ಇವೆ, ಅವುಗಳು ಈ ಕೆಳಗಿನಂತಿವೆ:
ಯಾತ್ರೆ ಕೈಗೊಂಡರೆ ಆಗುವ ಪ್ರಯೋಜನಗಳು
ಈ ನಾಲ್ಕು ಪವಿತ್ರ ದೇವಾಲಯಗಳಿಗೆ ಯಾತ್ರೆ ಕೈಗೊಂಡರೆ ದೇಶ, ಸಂಸ್ಕೃತಿ, ಭಾಷೆ, ಆಹಾರ ಮತ್ತು ಧರ್ಮದ ಬಗ್ಗೆ ಅನೇಕ ವಿಚಾರಗಳನ್ನು ತಿಳಿದುಕೊಳ್ಳಬಹುದು. ನೆನಪುಗಳು, ಆಲೋಚನೆಗಳು, ಪ್ರಕೃತಿಯ ವಿಭಿನ್ನ ನೋಟಗಳು, ಹಳ್ಳಿಗಳು, ಪಟ್ಟಣಗಳನ್ನು ನೋಡಿ ತಿಳಿದುಕೊಳ್ಳುವ ಮೂಲಕ ಒಬ್ಬ ಯಾತ್ರಿಕನಲ್ಲಿನ ಜ್ಞಾನಭಂಡಾರ ಹೆಚ್ಚಿಸಲಿದೆ. ಇಂತಹ ಮಹತ್ವ ಹೊಂದಿರುವ ಹಾಗೂ ಪ್ರಯೋಜನಗಳನ್ನು ನೀವು ಪಡೆದುಕೊಳ್ಳಬೇಕೆಂದರೆ ಒಮ್ಮೆಯಾದರೂ ಚಾರ್ ಧಾಮ್ ಯಾತ್ರೆ ಮಾಡಬೇಕು.
Published On - 11:18 am, Mon, 18 July 22