ಬೆಂಗಳೂರು: ಇಂದು ಎಲ್ಲೆಡೆ ವೈಕುಂಠ ಏಕಾದಶಿ ಸಂಭ್ರಮ ಮನೆ ಮಾಡಿದೆ. ನಗರದ ವಿಷ್ಣು, ವೆಂಕಟೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಗುತ್ತಿದೆ. ರಾಜಾಜಿನಗರದ ಇಸ್ಕಾನ್ ದೇವಾಲಯದಲ್ಲಿ ವೈಕುಂಠ ದ್ವಾರ ನಿರ್ಮಾಣ ಮಾಡಲಾಗಿದ್ದು, ಬರುವ ಭಕ್ತಾದಿಗಳಿಗೆ ವೈಕುಂಠ ದ್ವಾರದ ಮೂಲಕ ದೇವರ ದರ್ಶನಕ್ಕೆ ಅನುವು ಮಾಡಿಕೊಡಲಾಗಿದೆ.
ಸಾವಿರಾರು ಭಕ್ತರು ಮುಂಜಾನೆಯೇ ದೇವರ ದರ್ಶನಕ್ಕೆ ಆಗಮಿಸುತ್ತಿದ್ದಾರೆ. ಇಂದು ಸ್ವರ್ಗದ ಬಾಗಿಲು ತೆರೆದಿರುತ್ತೆ, ವೈಕುಂಠ ದ್ವಾರ ಪ್ರವೇಶ ಮಾಡಿದ್ರೆ ಸ್ವರ್ಗ ಪ್ರಾಪ್ತಿಯಾಗುತ್ತೆ. ಇಷ್ಟಾರ್ಥಗಳು ಸಿದ್ಧಿಯಾಗುತ್ತೆ ಅನ್ನೋ ನಂಬಿಕೆ ಇದೆ ಹೀಗಾಗಿ ವೈಕುಂಠ ದ್ವಾರದ ಬಾಗಿಲು ತೆರೆಯಲು ಭಕ್ತ ವೃಂದ ಕಾಯುತ್ತಿದೆ. ಇನ್ನೇನು ಕೆಲವೇ ಕ್ಷಣದಲ್ಲಿ ವೈಕುಂಠ ದ್ವಾರ ತೆರೆಯಲಿದೆ. ನಂತರ ಭಕ್ತರಿಗೆ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಮುಂಜಾನೆಯಿಂದ ರಾತ್ರಿವರೆಗೂ ದೇವರಿಗೆ ವಿಶೇಷ ಸೇವೆ ನಡೆಯಲಿದೆ. ಜತೆಗೆ ಎಲ್ಲಾ ದೇವಾಲಯಗಳಲ್ಲೂ ಲಡ್ಡು ವಿತರಣೆ ಮಾಡಲಾಗುತ್ತದೆ.
ತಿಮ್ಮಪ್ಪನಿಗಿಂದು ವಿಷೇಶ ಪೂಜೆ:
ಗೋವಿಂದನಿಗೆ ಹಾಲು, ತುಪ್ಪ, ಮೊಸರು, ಹಣ್ಣಿನ ರಸದಿಂದ ವಿಷೇಶ ಅಭಿಷೇಕ ನಡೆಯುತ್ತದೆ. ವಜ್ರಾಲಂಕಾರದಲ್ಲಿ ವೆಂಕಟೇಶ್ವರ ಕಂಗೊಳಿಸುತ್ತಾನೆ. ಕೃಷ್ಣ ಬಲರಾಮ ಸೇವೆ, ಕಲ್ಯಾಣೋತ್ಸವ, ವೆಂಕಟೇಶ್ವರ ನಾಮ ಸೇರಿದಂತೆ ಇಡೀ ದಿನ ಹಲವು ಪೂಜಾ ಕೈಂಕರ್ಯ ನೆರವೇರಿಸಲಾಗುತ್ತದೆ. ಬರುವ ಭಕ್ತರಿಗೆ ವಿಶೇಷ ಪ್ರಸಾದ ವ್ಯವಸ್ಥೆ ಮಾಡಲಾಗಿದ್ದು, ಒಂದು ಲಕ್ಷ ಲಡ್ಡು, ಒಂದು ಟನ್ ಸಿಹಿ ಪೊಂಗಲ್ ವಿತರಣೆ ಮಾಡಲಾಗುತ್ತದೆ.
Published On - 7:40 am, Mon, 6 January 20