Veeraloka Books: ‘ಉತ್ತರ ಪರ್ವ’ದಲ್ಲಿ ಟಿವಿ9 ರವೀಂದ್ರ ಮುದ್ದಿ ಪುಸ್ತಕ ಟಾಪ್-10ಗೆ ಆಯ್ಕೆ

| Updated By: ಗಂಗಾಧರ​ ಬ. ಸಾಬೋಜಿ

Updated on: Apr 18, 2024 | 11:59 AM

Varada Teerada Kathegalu: ವೀರಲೋಕದ ಪ್ರತಿಷ್ಠಿತ ಉತ್ತರ ಪರ್ವಕ್ಕೆ ಬಂದಿದ್ದ ನೂರಾರು ಕೃತಿಗಳನ್ನು ಕನ್ನಡದ ಶ್ರೇಷ್ಠ ಬರಹಗಾರರಾದ ರಾಗಂ ಎಂದೇ ಖ್ಯಾತರಾದ ರಾಜಶೇಖರ ಮಠಪತಿ ಹಾಗೂ ವೀರಕಪುತ್ರ ಎಂ ಶ್ರೀನಿವಾಸ್ ಅವರ ತಂಡವು ಲೇಖಕರ ಕೃತಿಗಳ ಗುಣಮಟ್ಟ ಹಾಗೂ ಬರವಣಿಗೆಯ ಶೈಲಿಯನ್ನು ಗುರುತಿಸಿ ಅಂತಿಮ ಹಂತದಲ್ಲಿ ಪ್ರಕಟಿಸಲು ಯೋಗ್ಯವಾದಂಥ, ಕಥಾಸಂಕಲನ, ಕಾದಂಬರಿ, ಕವನ ಸಂಕಲನ ಸೇರಿದಂತೆ ಟಾಪ್ 10 ಬರಹಗಾರರ ಕೃತಿಗಳನ್ನು ಆಯ್ಕೆ ಮಾಡಿದೆ.

Veeraloka Books: ಉತ್ತರ ಪರ್ವದಲ್ಲಿ ಟಿವಿ9 ರವೀಂದ್ರ ಮುದ್ದಿ ಪುಸ್ತಕ ಟಾಪ್-10ಗೆ ಆಯ್ಕೆ
ರವೀಂದ್ರ ಮುದ್ದಿ
Follow us on

ಬೆಂಗಳೂರು, ಏಪ್ರಿಲ್​ 18: ಕರ್ನಾಟಕದ ಪ್ರಮುಖ ಪ್ರಕಾಶನ ಸಂಸ್ಥೆ ವೀರಲೋಕದ (Veeraloka Books) ಮಹತ್ವದ “ಉತ್ತರ ಪರ್ವ” ಯೋಜನೆಗೆ ಬಂದಿದ್ದ ನೂರಾರು ಕೃತಿಗಳಲ್ಲಿ ಪ್ರಕಟಣೆಗೆ ಆಯ್ಕೆಯಾದ ಟಾಪ್ ಹತ್ತು ಕೃತಿಗಳಲ್ಲಿ ಪತ್ರಕರ್ತ ರವೀಂದ್ರ ಮುದ್ದಿ (Ravindra Muddi TV9 Senior Producer) ಅವರ “ವರದಾ ತೀರದ ಕತೆಗಳು” (Varada Teerada Kathegalu) ಕೃತಿ ಆಯ್ಕೆ ಆಗಿದೆ.

ಮೂಲತ: ಹಾವೇರಿಯವರಾದ, ಪ್ರಸ್ತುತ ಟಿವಿ9 ಸಂಸ್ಥೆಯಲ್ಲಿ ಹಿರಿಯ ನಿರ್ಮಾಪಕರಾಗಿರುವ ರವೀಂದ್ರ ಮುದ್ದಿ ಅವರು ಬರೆದಿರುವ ವರದಾ ತೀರದ ಕಥೆಗಳು ಎನ್ನುವ ಕಥಾ ಸಂಕಲನ ಆಯ್ಕೆಯಾಗಿರುವುದು ಹೆಮ್ಮೆಯ ವಿಚಾರವಾಗಿದೆ. ಬರುವ ಅಗಸ್ಟ್ ತಿಂಗಳಲ್ಲಿ ಉತ್ತರ ಕರ್ನಾಟಕದ ಸಾಹಿತ್ಯ ಸುಗ್ಗಿಯಲ್ಲಿ ನಾಡಿನ ಶ್ರೇಷ್ಠ ಗಣ್ಯರ ಸಮ್ಮುಖದಲ್ಲಿ ಉತ್ತರ ಪರ್ವದಲ್ಲಿ ಆಯ್ಕೆಗೊಂಡ 10 ಕೃತಿಗಳನ್ನು ಪ್ರಕಟಿಸಲಿದ್ದಾರೆ.

ವೀರಲೋಕ ಸಂಸ್ಥೆಯು ಉತ್ತರ ಕರ್ನಾಟಕದ ಲೇಖಕರ ಕನಸುಗಳಿಗೆ ಜೀವ ತುಂಬುವ ಉದ್ದೇಶದಿಂದ ಈ ‘ಉತ್ತರ ಪರ್ವ’ ಎನ್ನುವಂಥ ವಿಶೇಷ ಯೋಜನೆಯೊಂದನ್ನು ರೂಪಿಸಿಕೊಂಡಿತ್ತು.

ಇದನ್ನೂ ಓದಿ: ವೀರಲೋಕದಲ್ಲಿ ಉತ್ತರ ಕರ್ನಾಟಕದ ಸಾಹಿತ್ಯ ಸುಗ್ಗಿ: ಟಿವಿ9 ಹಿರಿಯ ನಿರ್ಮಾಪಕ ರವೀಂದ್ರ ಮುದ್ದಿ ಕಥಾ ಸಂಕಲನ ಆಯ್ಕೆ

ವೀರಲೋಕದ ಈ ಯೋಜನೆಗೆ ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಸುಮಾರು 100 ಕ್ಕಿಂತ ಹೆಚ್ಚು ಬರಹಗಾರರು ತಮ್ಮ ತಮ್ಮ ಕೃತಿಗಳನ್ನು ಕಳುಹಿಸಿದ್ದರು.

ಆಯ್ಕೆ ನಡೆದಿದ್ದು ಹೇಗೆ?

ಉತ್ತರ ಪರ್ವಕ್ಕೆ ಬಂದಂಥ 100 ಕ್ಕಿಂತ ಹೆಚ್ಚು ಕೃತಿಗಾರರ ಕೃತಿಗಳನ್ನು ಕನ್ನಡದ ಶ್ರೇಷ್ಠ ಬರಹಗಾರರಾದ ರಾಗಂ ಎಂದೇ ಖ್ಯಾತರಾದ ರಾಜಶೇಖರ ಮಠಪತಿ ಹಾಗೂ ವೀರಕಪುತ್ರ ಎಂ ಶ್ರೀನಿವಾಸ್ ಅವರ ತಂಡವು ಲೇಖಕರ ಕೃತಿಗಳ ಗುಣಮಟ್ಟ ಹಾಗೂ ಬರವಣಿಗೆಯ ಶೈಲಿಯನ್ನು ಗುರುತಿಸಿ ಅಂತಿಮ ಹಂತದಲ್ಲಿ ಪ್ರಕಟಿಸಲು ಯೋಗ್ಯವಾದಂಥ, ಕಥಾಸಂಕಲನ, ಕಾದಂಬರಿ, ಕವನ ಸಂಕಲನ ಸೇರಿದಂತೆ ಟಾಪ್ 10 ಬರಹಗಾರರ ಕೃತಿಗಳನ್ನು ಆಯ್ಕೆ ಮಾಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 11:57 am, Thu, 18 April 24