ವಿನೂತನ ಪ್ರತಿಭಟನೆ.. ಪೇಟ ಶೇರ್ವಾನಿ ಧರಿಸಿ, ಕತ್ತೆ ಮೇಲೆ ಸವಾರಿ ಮಾಡಿದರು ನೋಡಿ!

ಬೆಂಗಳೂರು: ಹಲವಾರು ವಿನೂತನ ಪ್ರತಿಭಟನೆಗಳ ರೂವಾರಿಯಾಗಿರುವ ಕನ್ನಡ ಪರ ಹೋರಾಟಗಾರ ಕರ್ನಾಟಕ ಬಂದ್ ವೇಳೆ ಡಿಫರೆಂಟ್​ ಆಗಿ ಪ್ರತಿಭಟನೆ ನಡೆಸಿದ್ದಾರೆ. ಈ ಸಲ ತಮ್ಮ ಕರಿ ಟೋಪಿ ಮತ್ತು ಬಿಳಿ ಅಂಗಿಯನ್ನು ಬಿಟ್ಟು ಮೈಸೂರು ಪೇಟ ಮತ್ತು ಶೇರ್ವಾನಿ ತೊಟ್ಟು ಪ್ರತಿಭಟನೆಗೆ ಇಳಿದರು. ಕತ್ತೆಯ ಮೇಲೆ ಏರಿ ಕೆಂಪೇಗೌಡ ಬಸ್ ನಿಲ್ದಾಣದ ಸುತ್ತಲೂ ಮೆರವಣಿಗೆ ಹೊರಟು ವಾಟಾಳ್ ನಾಗರಾಜ್​ ವಿನೂತನವಾಗಿ ಪ್ರತಿಭಟನೆ ಕೈಗೊಂಡರು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಾರಿಗೆ ತಂದಿರುವ ಭೂ ಸುಧಾರಣಾ ಕಾಯ್ದೆ ಹಾಗೂ […]

ವಿನೂತನ ಪ್ರತಿಭಟನೆ.. ಪೇಟ ಶೇರ್ವಾನಿ ಧರಿಸಿ, ಕತ್ತೆ ಮೇಲೆ ಸವಾರಿ ಮಾಡಿದರು ನೋಡಿ!
KUSHAL V

|

Sep 28, 2020 | 2:56 PM

ಬೆಂಗಳೂರು: ಹಲವಾರು ವಿನೂತನ ಪ್ರತಿಭಟನೆಗಳ ರೂವಾರಿಯಾಗಿರುವ ಕನ್ನಡ ಪರ ಹೋರಾಟಗಾರ ಕರ್ನಾಟಕ ಬಂದ್ ವೇಳೆ ಡಿಫರೆಂಟ್​ ಆಗಿ ಪ್ರತಿಭಟನೆ ನಡೆಸಿದ್ದಾರೆ. ಈ ಸಲ ತಮ್ಮ ಕರಿ ಟೋಪಿ ಮತ್ತು ಬಿಳಿ ಅಂಗಿಯನ್ನು ಬಿಟ್ಟು ಮೈಸೂರು ಪೇಟ ಮತ್ತು ಶೇರ್ವಾನಿ ತೊಟ್ಟು ಪ್ರತಿಭಟನೆಗೆ ಇಳಿದರು. ಕತ್ತೆಯ ಮೇಲೆ ಏರಿ ಕೆಂಪೇಗೌಡ ಬಸ್ ನಿಲ್ದಾಣದ ಸುತ್ತಲೂ ಮೆರವಣಿಗೆ ಹೊರಟು ವಾಟಾಳ್ ನಾಗರಾಜ್​ ವಿನೂತನವಾಗಿ ಪ್ರತಿಭಟನೆ ಕೈಗೊಂಡರು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಾರಿಗೆ ತಂದಿರುವ ಭೂ ಸುಧಾರಣಾ ಕಾಯ್ದೆ ಹಾಗೂ APMC ತಿದ್ದುಪಡಿ ಕಾಯ್ದೆಗಳನ್ನ ವಿರೋಧಿಸಿ ಇಂದು ಇದೇ ಗೆಟಪ್​ನಲ್ಲಿ ಪ್ರತಿಭಟನೆ ನಡೆಸಿದರು. ಎರಡು ಸರ್ಕಾರಗಳು ಜಾರಿಮಾಡಿರುವ ಕಾಯ್ದೆಗಳನ್ನು ಕೂಡಲೇ ರದ್ದುಗೊಳಿಸಬೇಕೆಂದು ಆಗ್ರಹಿಸಿದರು.

ವಾಟಾಳ್​ ನಾಗರಾಜ್​ರಿಗೆ ಕನ್ನಡ ಒಕ್ಕೂಟದ ಮುಖಂಡರಾದ ಸಾ.ರಾ ಗೋವಿಂದು, KR ಕುಮಾರ್ ಮತ್ತು ಗಿರೀಶ್ ಗೌಡ ಸಾಥ್​ ನೀಡಿದರು. ನಾಯಕರು ಹಾಗೂ ಅವರ ಬೆಂಬಲಿಗರು ಸರ್ಕಾರದ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು.

ತಾಜಾ ಸುದ್ದಿ

Follow us on

Most Read Stories

Click on your DTH Provider to Add TV9 Kannada