ಬೆಂಗಳೂರು: ವೀರಶೈವ ಲಿಂಗಾಯತ ಸಮುದಾಯದ ಒಳಪಂಗಡಗಳಿಗೆ ಮೀಸಲಾತಿ ನೀಡುವಂತೆ ಆಗ್ರಹಿಸಿ ವಿಜಯಪುರ ಜಿಲ್ಲೆಯ ಸ್ವಾಮೀಜಿಗಳ ನಿಯೋಗವೊಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ಮನವಿ ಮಾಡಿದರು. ಸಿಎಂ ನಿವಾಸ ಕಾವೇರಿಯಲ್ಲಿ ಮುಖ್ಯಮಂತ್ರಿಯನ್ನು ಸುಮಾರು 40ಕ್ಕೂ ಹೆಚ್ಚು ಶ್ರೀಗಳು ಭೇಟಿಯಾಗಿ ಮನವಿ ಸಲ್ಲಿಸಿದರು. ವೀರಶೈವ ಲಿಂಗಾಯತ ಸಮುದಾಯದಲ್ಲಿ 106 ಒಳಪಂಗಡಗಳಿವೆ. 32 ಒಳಪಂಗಡಗಳು ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಸೇರಿವೆ. ಉಳಿದ 74 ಒಳಪಂಗಡಗಳನ್ನು ಮೀಸಲಾತಿಗೆ ಸೇರಿಸಬೇಕೆಂದು ಮನವಿ ಮಾಡಿದರು. ಜೊತೆಗೆ, ವಿಜಯಪುರ ಜಿಲ್ಲೆಯನ್ನು ಸಮಗ್ರ ನೀರಾವರಿಗೆ ಒಳಪಡಿಸಲು ಮನವಿ ಸಹ ಮಾಡಿದರು. (Veerashaiva Lingayat Reservation Quota)
ಇನ್ನು, ಸಿಎಂ ಭೇಟಿ ಬಳಿಕ ಮಾತನಾಡಿದು ಸಾರಂಗದೇವ ಶಿವಾಚಾರ್ಯಶ್ರೀಗಳು ವೀರಶೈವ ಲಿಂಗಾಯತ ಒಳಪಂಗಡದಲ್ಲಿ ಜನ ಹಿಂದುಳಿದಿದ್ದಾರೆ. ಸಿಎಂ ಬಳಿ ಒಳಪಂಗಡಗಳ ಎಲ್ಲರಿಗೂ ಮೀಸಲಾತಿ ಕೇಳ್ತಿದ್ದೇವೆ. ಆದರೆ, ಇದೇ ಮೀಸಲಾತಿ ಕೊಡಿ ಎಂದು ಕೇಳ್ತಿಲ್ಲ ಎಂದು ಹೇಳಿದರು.
ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಹಿಂದುಳಿದವರಿಗೆ ಮೀಸಲಾತಿ ಕೊಡಿ. ಪಂಚಮಸಾಲಿ ಲಿಂಗಾಯತರಿಗೆ 2A ಮೀಸಲಾತಿಗೆ ವಿರೋಧವಿಲ್ಲ. ನಮ್ಮದು ನಿಗದಿತ ಡಿಮ್ಯಾಂಡ್ ಇಲ್ಲ ಎಂದ ಶಿವಾಚಾರ್ಯ ಶ್ರೀಗಳು ಹೇಳಿದರು. ಈ ನಡುವೆ, ಮೀಸಲಾತಿ ವಿಚಾರವಾಗಿ ಪರಿಶೀಲಿಸುವುದಾಗಿ ಸಿಎಂ ಹೇಳಿದ್ದಾರೆ ಎಂದು ಯಡಿಯೂರಪ್ಪ ಭೇಟಿ ಬಳಿಕ ಸಾರಂಗದೇವ ಶಿವಾಚಾರ್ಯಶ್ರೀಗಳ ಹೇಳಿದರು.