Vegetable Price Hike: ಖರೀದಿದಾರರಿಗೆ ಶಾಕ್! ತರಕಾರಿ ಬೆಲೆ ಮತ್ತೆ ಏರಿಕೆ

ಸುಮಾರು ಒಂದು ತಿಂಗಳಿನಿಂದ ಖರೀದಿದಾರರಿಗೆ ತರಕಾರಿ ಬೆಲೆ ಏರಿಕೆ ಬಿಸಿ ತಟ್ಟಿದೆ. ಒಂದು ತಿಂಗಳ ಹಿಂದೆ ಇದ್ದ ದರ ಇಂದು ಇಲ್ಲ ಅಂತ ಖರೀದಿರಾರರು ಹೇಳುತ್ತಿದ್ದಾರೆ. ಅಕಾಲಿಕ ಮಳೆಯಿಂದ ಬೆಲೆ ಡಬಲ್ ಆಗಿದೆ.

Vegetable Price Hike: ಖರೀದಿದಾರರಿಗೆ ಶಾಕ್! ತರಕಾರಿ ಬೆಲೆ ಮತ್ತೆ ಏರಿಕೆ
ತರಕಾರಿಗಳು (ಸಾಂದರ್ಭಿಕ ಚಿತ್ರ)
TV9kannada Web Team

| Edited By: sandhya thejappa

Dec 22, 2021 | 12:58 PM

ಬೆಂಗಳೂರು: ರಾಜ್ಯದಲ್ಲಿ ಸುರಿದ ಅಕಾಲಿಕ ಮಳೆಯಿಂದ ರೈತರು ಕಂಗಾಲಾಗಿದ್ದಾರೆ. ಫಸಲು ರೈತನ ಕೈ ಸೇರುವ ಮೊದಲೇ ಬೆಳೆ ನಾಶವಾಗಿ ಹೋಗಿದೆ. ಹೆಚ್ಚು ಆದಾಯದ ನಿರೀಕ್ಷೆಯಲ್ಲಿದ್ದ ರೈತರು ಮುಂದಿನ ಜೀವನ ಹೇಗೆ ಅಂತ ಚಿಂತಿಸುತ್ತಿದ್ದಾರೆ. ಈ ನಡುವೆ ತರಕಾರಿ ಬೆಲೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಖರೀದಿದಾರರು ಶಾಕ್ ಆಗಿದ್ದಾರೆ. ಮಾರುಕಟ್ಟೆಗೆ ಬರುವ ಖರೀದಿದಾರರು ತರಕಾರಿ ಬೆಲೆ ಕಂಡು ವಾಪಸ್ಸಾಗುತ್ತಿದ್ದಾರೆ. ರಾಜ್ಯದಲ್ಲಿ ಸುಮಾರು 15 ದಿನಗಳ ಕಾಲ ಸುರಿದ ನಿರಂತರ ಮಳೆಗೆ ತರಕಾರಿ ಹೊಲದಲ್ಲೇ ಕೊಳೆತು ಹೋಗಿವೆ. ಹೀಗಾಗಿ ಮಾರುಕಟ್ಟೆಗೆ ತರಕಾರಿ ಬರುವ ಪ್ರಮಾಣ ಕಡಿಮೆಯಾಗಿದೆ.

ಯಾವ ಯಾವ ತರಕಾರಿಗೆ ಬೆಲೆ ಎಷ್ಟಿದೆ? ಒಂದು ಕೆಜಿ ನವೀಲುಕೋಸು- 100 ರೂ. ಬೀನ್ಸ್- 90 ರೂ. ಮೂಲಂಗಿ- 80 ರೂ. ಕ್ಯಾಪ್ಸಿಕಂ- 80 ರೂ. ಕ್ಯಾರೆಟ್- 80 ರೂ. ಬದನೆಕಾಯಿ- 80 ರೂ. ಹೀರೆಕಾಯಿ- 80 ರೂ. ಸೋರೆಕಾಯಿ- 80 ರೂ. ಟೊಮ್ಯಾಟೋ- 120 ರೂ. ಆಗಿದೆ.

ಟೊಮ್ಯಾಟೋ ದರ ಕೇಳಿ ಗ್ರಾಹಕರು  ಕಂಗಾಲಾಗಿದ್ದಾರೆ. ಎಲ್ಲಾ ಅಡುಗೆಗೆ ಸಾಮಾನ್ಯವಾಗಿ ಟೊಮ್ಯಾಟೋ ಬಳಸುತ್ತಾರೆ. ಹೀಗಾಗಿ ಇದರ ಬಳಕೆ ಹೆಚ್ಚಾಗಿರುತ್ತದೆ. ಆದರೆ ಟೊಮ್ಯಾಟೋ ದರ ಕೇಳಿದ ಖರೀದಿದಾರರು ಮಾರುಕಟ್ಟೆಯಿಂದ ವಾಪಸ್ಸಾಗುತ್ತಿದ್ದಾರೆ.

ಸುಮಾರು ಒಂದು ತಿಂಗಳಿನಿಂದ ಖರೀದಿದಾರರಿಗೆ ತರಕಾರಿ ಬೆಲೆ ಏರಿಕೆ ಬಿಸಿ ತಟ್ಟಿದೆ. ಒಂದು ತಿಂಗಳ ಹಿಂದೆ ಇದ್ದ ದರ ಇಂದು ಇಲ್ಲ ಅಂತ ಖರೀದಿರಾರರು ಹೇಳುತ್ತಿದ್ದಾರೆ. ಅಕಾಲಿಕ ಮಳೆಯಿಂದ ಬೆಲೆ ಡಬಲ್ ಆಗಿದೆ. ಹೊಸದಾಗಿ ತರಕಾರಿ ಬೆಳೆ ರೈತರ ಕೈ ಸೇರುವವರೆಗೂ ರಾಜ್ಯದ ಜನರು ಇದೇ ಸ್ಥಿತಿಯನ್ನು ಎದುರಿಸಬೇಕು.

ಇದನ್ನೂ ಓದಿ

Anti-conversion laws ಭಾರತದಲ್ಲಿ ಧಾರ್ಮಿಕ ಮತಾಂತರವನ್ನು ರಾಜ್ಯಗಳು ಹೇಗೆ ಎದುರಿಸುತ್ತವೆ? ಯಾವ ರಾಜ್ಯಗಳಲ್ಲಿ ಮತಾಂತರ ನಿಷೇಧ ಕಾನೂನು ಇದೆ?

ವರ್ಷದ ಕೊನೆಯ ದಿನ ಕರ್ನಾಟಕ ಬಂದ್: ಕನ್ನಡ ಪರ ಸಂಘಟನೆಗಳ ಘೋಷಣೆ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada