ಬೆಂಗಳೂರು: ನಿಯಮಬಾಹಿರವಾಗಿ ಸ್ಫೋಟಕ ಸಾಗಿಸುತ್ತಿದ್ದ ವಾಹನ ಜಪ್ತಿ

|

Updated on: Mar 12, 2021 | 12:40 PM

ಬೆಂಗಳೂರಿನಲ್ಲಿ ನಿಯಮ ಬಾಹಿರವಾಗಿ ಜಿಲೆಟಿನ್ ಹಾಗೂ ಡಿಟೋನೇಟರ್​ಅನ್ನು ಸಾಗಟ ನಡೆಸುತ್ತಿದ್ದ ವಾಹನವನ್ನು ವಶಕ್ಕೆ ಪಡೆಯಲಾಗಿದೆ.

ಬೆಂಗಳೂರು: ನಿಯಮಬಾಹಿರವಾಗಿ ಸ್ಫೋಟಕ ಸಾಗಿಸುತ್ತಿದ್ದ ವಾಹನ ಜಪ್ತಿ
ನಿಯಮ ಬಾಹಿರವಾಗಿ ಜಿಲೆಟಿನ್ ಹಾಗೂ ಡಿಟೋನೇಟರ್ ಸಾಗಟ ನಡೆಸುತ್ತಿದ್ದ ವಾಹನ ವಶ
Follow us on

ನೆಲಮಂಗಲ: ನಿಯಮ ಬಾಹಿರವಾಗಿ ಜಿಲೆಟಿನ್ ಹಾಗೂ ಡಿಟೋನೇಟರ್​ನ್ನು ಸಾಗಟ ನಡೆಸುತ್ತಿದ್ದ ವಾಹನವನ್ನು ವಶಕ್ಕೆ ಪಡೆಯಲಾಗಿದೆ. ವಾಹನ ಸಮೇತ ಒಟ್ಟು 739 ಸ್ಪೋಟಕ ಜಪ್ತಿ ಮಾಡಲಾಗಿದೆ. ಮಾಕೇನಹಳ್ಳಿ ಕಲ್ಲು ಗಣಿಗಾರಿಕೆ ಪ್ರದೇಶಕ್ಕೆ ಸಾಗಿಸಲಾಗುತ್ತಿತ್ತು ಎಂಬುದು ಪೊಲೀಸರ ಕಾರ್ಯಾಚರಣೆಯಿಂದ ತಿಳಿದು ಬಂದಿದೆ.

ದಾಬಸ್ ಪೇಟೆ ಪೋಲಿಸರಿಂದ ಸ್ಪೋಟಕ ತುಂಬಿದ ಬುಲೆರೋ ವಾಹನ ವಶಕ್ಕೆ ಪಡೆಯಲಾಗಿದೆ. ಜಿಲೆಟಿನ್ ಹಾಗೂ ಡಿಟೋನೇಟರ್ ಬೇರ್ಪಡಿಸಿ ಎರಡು ವಾಹನಗಳಲ್ಲಿ ಸಾಗಿಸಬೇಕಿತ್ತು. ವಾಹನವನ್ನ ಅಡ್ಡಗಟ್ಟಿ ಪೊಲೀಸರು ತನಿಖೆ ನಡೆಸಿದಾಗ ನಿಯಮಬಾಹಿರವಾಗಿ ಸ್ಫೋಟಕ ಸಾಗಿಸುತ್ತಿರುವುದು ಕಂಡು ಬಂದಿದೆ.

ಪೊಲೀಸರು ವಾಹನ ಅಡ್ಡಗಟ್ಟುತ್ತಲೇ ವಾಹನ ನಿಲ್ಲಿಸಿ ಚಾಲಕ ಪರಾರಿಯಾಗಿದ್ದಾನೆ. ತನಿಖೆ ವೇಳೆ ಎಂ.ಎಸ್.ವೆಂಕಟೇಶ್ವರ ಎಂಟರ್​ ಪ್ರೈಸಸ್​​ಗೆ ಸೇರಿದ ಸ್ಪೋಟಕಗಳು ಎಂದು ತಿಳಿದು ಬಂದಿದೆ. ಆಸ್ತಿ, ಪಾಸ್ತಿ ಜೊತೆ ಜೀವಕ್ಕೆ ನಷ್ಟ ಉಂಟಾಗದಂತೆ ಕ್ರಮ ಕೈಗೊಳ್ಳಲಾಗಿದೆ. ನಿರ್ಜನ ಪ್ರದೇಶದಲ್ಲಿ ವಾಹನ ಇಟ್ಟು ಪೋಲಿಸರು ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಜಿಲೆಟಿನ್ ಸ್ಪೋಟಕ್ಕೆ ರಾಜ್ಯ ಸರ್ಕಾರವೇ ನೇರ ಹೊಣೆ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್

ಇದನ್ನೂ ಓದಿ: ಅಂಬಾನಿ ಮನೆ ಮುಂದೆ ಕಾರಿನಲ್ಲಿ ಜಿಲೆಟಿನ್ ಪ್ರಕರಣ; ಶವವಾಗಿ ಪತ್ತೆಯಾದ ಮನಸುಖ್ ಹಿರೇನ್

Published On - 12:35 pm, Fri, 12 March 21