ರಾಮಮಂದಿರ ನಿಧಿ ಸಂಗ್ರಹ ಅಭಿಯಾನಕ್ಕೆ ಟೀಕೆ: ಎಚ್​.ಡಿ.ಕುಮಾರಸ್ವಾಮಿ ಟ್ವೀಟ್​ಗೆ ವಿಎಚ್​ಪಿ ಖಂಡನೆ

|

Updated on: Feb 16, 2021 | 6:49 PM

ದೇಣಿಗೆ ಸಂಗ್ರಹ ಅಭಿಯಾನಕ್ಕೆ ಸಂಬಂಧಿಸಿದಂತೆ ಟ್ವೀಟ್ ಮಾಡುವ ಮೊದಲು ಮಾಜಿ ಮುಖ್ಯಮಂತ್ರಿ ವಾಸ್ತವ ಸಂಗತಿಗಳನ್ನು ಅರ್ಥ ಮಾಡಿಕೊಳ್ಳಬೇಕಿತ್ತು ಎಂದು ವಿಎಚ್​ಪಿ ಹೇಳಿದೆ.

ರಾಮಮಂದಿರ ನಿಧಿ ಸಂಗ್ರಹ ಅಭಿಯಾನಕ್ಕೆ ಟೀಕೆ: ಎಚ್​.ಡಿ.ಕುಮಾರಸ್ವಾಮಿ ಟ್ವೀಟ್​ಗೆ ವಿಎಚ್​ಪಿ ಖಂಡನೆ
ಅಯೋಧ್ಯೆಯಲ್ಲಿ ರಾಮ ಮಂದಿರಕ್ಕೆಂದು ಸಂಗ್ರಹಿಸಿರುವ ಇಟ್ಟಿಗೆಗಳು (ಸಂಗ್ರಹ ಚಿತ್ರ)
Follow us on

ಬೆಂಗಳೂರು: ರಾಮಮಂದಿರ ನಿಧಿ ಸಮರ್ಪಣಾ ಅಭಿಯಾನಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬೇಜವಾಬ್ದಾರಿ ಟ್ವೀಟ್ ಮಾಡಿದ್ದಾರೆ ಎಂದು ವಿಶ್ವ ಹಿಂದೂ ಪರಿಷತ್​ನ (VHP) ಸಂಘಟನಾ ಕಾರ್ಯದರ್ಶಿ ಬಸವರಾಜ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಿಸಲು ವಿಎಚ್​ಪಿ ಸೇರಿದಂತೆ ಹಲವು ಸಂಘಟನೆಗಳು ಸಮಾಜದ ಎಲ್ಲ ವರ್ಗಗಳಿಂದಲೂ ದೇಣಿಗೆ ಸಂಗ್ರಹಿಸುತ್ತಿವೆ. ಜನರನ್ನು ಸಂಪರ್ಕಿಸುವ ಸ್ವಯಂಸೇವಕರು ಹಣ ನೀಡಲೇಬೇಕೆಂದು ಯಾರನ್ನೂ ಒತ್ತಾಯಿಸುತ್ತಿಲ್ಲ. ರಾಮಮಂದಿರ ನಿರ್ಮಾಣದಲ್ಲಿ ಇಡೀ ದೇಶ ಪಾಲ್ಗೊಳ್ಳಬೇಕೆಂಬ ಉದ್ದೇಶದಿಂದ ಈ ಕಾರ್ಯ ನಡೆಯುತ್ತಿದೆ ಎಂದು ಹೇಳಿದ್ದಾರೆ.

ರಾಮನು ಭಾರತದ ಅಸ್ಮಿತೆಯಾಗಿದ್ದಾನೆ. ರಾಮನನ್ನು ಬದುಕಿನ ಆದರ್ಶವಾಗಿ ಜನರು ಭಾವಿಸುತ್ತಾರೆ. ದೇಣಿಗೆ ಸಂಗ್ರಹ ಅಭಿಯಾನಕ್ಕೆ ಸಂಬಂಧಿಸಿದಂತೆ ಟ್ವೀಟ್ ಮಾಡುವ ಮೊದಲು ಮಾಜಿ ಮುಖ್ಯಮಂತ್ರಿ ವಾಸ್ತವ ಸಂಗತಿಗಳನ್ನು ಅರ್ಥ ಮಾಡಿಕೊಳ್ಳಬೇಕಿತ್ತು ಎಂದು ತಿಳಿಸಿದ್ದಾರೆ.

ರಾಜ್ಯದ ಅತ್ಯುನ್ನತ ಹುದ್ದೆ ನಿರ್ವಹಿಸಿದ್ದ ವ್ಯಕ್ತಿಯಿಂದ ಹೊರಬಂದಿರುವ ಈ ಆಧಾರರಹಿತ ಆರೋಪವನ್ನು ವಿಎಚ್​ಪಿ ಗಂಭೀರವಾಗಿ ಪರಿಗಣಿಸಿದೆ. ದೇಶಭಕ್ತ ಸಂಘಟನೆ ಎನಿಸಿರುವ ಆರ್​ಎಸ್​ಎಸ್​ ಬಗ್ಗೆಯೂ ಕುಮಾರಸ್ವಾಮಿ ಹಗುವಾಗಿ ಮಾತನಾಡಿರುವುದನ್ನು ವಿಎಚ್​ಪಿ ಖಂಡಿಸುತ್ತದೆ. ಮಾಜಿ ಮುಖ್ಯಮಂತ್ರಿಯೊಬ್ಬರು ಸಾರ್ವಜನಿಕ ಸಂವಾದದ ಘನತೆಯನ್ನು ಕುಗ್ಗಿಸಿರುವುದು ವಿಷಾದದ ಸಂಗತಿಯಾಗಿದೆ ಎಂದು ಹೇಳಿದ್ದಾರೆ.

ಕುಮಾರಸ್ವಾಮಿ ಟ್ವೀಟ್​

‘ದೇಣಿಗೆ ನೀಡದವರ ಮನೆಗಳ ಮಾರ್ಕಿಂಗ್’

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸಲು ದೇಣಿಗೆ ಸಂಗ್ರಹಿಸಲಾಗಿದ್ದು, ದೇಣಿಗೆ ನೀಡದವರನ್ನು ಆರ್​ಎಸ್​ಎಸ್​ ಪ್ರತ್ಯೇಕವಾಗಿ ಗುರುತಿಸುತ್ತಿದೆ (Marking). ದೇಣಿಗೆ ನೀಡದವರ ಮನೆಗೆ ಪ್ರತ್ಯೇಕವಾಗಿ ಗುರುತು ಹಾಕುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ ಟ್ವೀಟ್ ಮಾಡಿ ಕಿಡಿಕಾರಿದ್ದರು.

ಜರ್ಮನಿಯಲ್ಲಿ ನಾಜಿಗಳು ಅನುಸರಿಸಿದ ನಡೆಯನ್ನೇ ಆರ್​ಎಸ್​ಎಸ್​ ಅನುಸರಿಸುತ್ತಿದೆ.  ಅಯೋಧ್ಯೆಯಲ್ಲಿ ನಿರ್ಮಾಣವಾಗಲಿರುವ ರಾಮ ಮಂದಿರಕ್ಕೆ ದೇಣಿಗೆ ನೀಡಿದ ಮತ್ತು ನೀಡದವರ ಮನೆಗಳನ್ನು ಪ್ರತ್ಯೇಕವಾಗಿ ಗುರುತು ಹಾಕುತ್ತಿದೆ ಎಂದು ಆರೋಪಿಸಿದ್ದರು.

ಇನ್ನಷ್ಟು..

ವಿವಾದಿತ ರಾಮ ಮಂದಿರಕ್ಕೆ ದೇಣಿಗೆ ಕೊಡುವುದಿಲ್ಲ: ಸಿದ್ದರಾಮಯ್ಯ!

ಹಿಟ್ಲರ್​ನ ನಾಜಿ ಪಡೆಯಂತೆಯೇ RSS ಕ್ರೂರವಾಗಿ ವರ್ತಿಸುತ್ತಿದೆ: ಎಚ್ ಡಿ ಕುಮಾರಸ್ವಾಮಿ

Published On - 6:31 pm, Tue, 16 February 21