ಲೈಂಗಿಕವಾಗಿ ಬಳಸಿಕೊಂಡು ಮೋಸ: ಬಳ್ಳಾರಿ ಬಿಜೆಪಿ ಎಂಪಿ ಮಗನ ಮುಖವಾಡ ಬಿಚ್ಚಿಟ್ಟ ಯುವತಿ
ಮದುವೆ ಮಾಡಿಕೊಳ್ಳುವುದಾಗಿ ನಂಬಿಸಿ ಲೈಂಗಿಕವಾಗಿ ಬಳಸಿಕೊಂಡು ಕೈಕೊಟ್ಟಿದ್ದಾರೆ ಎಂದು ಯುವತಿಯೋರ್ವಳು ಸಂಸದ ದೇವೇಂದ್ರಪ್ಪ ಪುತ್ರ ಗಂಭೀರ ಆರೋಪ ಮಾಡಿದ್ದಾರೆ. ಅಲ್ಲದೇ ಈ ಬಗ್ಗೆ ಬೆಂಗಳೂರಿನ ದೂರು ದಾಖಲಿಸಿದ್ದಾರೆ. ಇದರ ಬೆನ್ನಲ್ಲೇ ಅತ್ತ ಮೈಸೂರಿನಲ್ಲಿ ಯುವತಿ ವಿರುದ್ಧ ದೇವೇಂದ್ರಪ್ಪ ಪುತ್ರ ರಂಗನಾಥ್ ಸಹ ಪ್ರತಿದೂರು ದಾಖಲಿಸಿದ್ದು, ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾಳೆ ಎಂದು ಆರೋಪಿಸಿದ್ದಾರೆ. ಇನ್ನು ಇದೀಗ ಯುವತಿಯೇ ಪ್ರತಿಕ್ರಿಯಿಸಿದ್ದು, ರಂಗನಾಥ್ ಪರಿಚಯ ಹೇಗೆ? ಎನ್ನುವುದನ್ನು ಬಿಚ್ಚಿಟ್ಟಿದ್ದಾರೆ.

ಬೆಂಗಳೂರು, (ನವೆಂಬರ್ 17): ಬಳ್ಳಾರಿ ಬಿಜೆಪಿ ಸಂಸದ ದೇವೇಂದ್ರಪ್ಪ(BJP MP Devendrappa) ಪುತ್ರ ರಂಗನಾಥ್ ವಿರುದ್ಧ ಲವ್, ಸೆಕ್ಸ್ ದೋಖಾ ಆರೋಪ ಕೇಳಿಬಂದಿದ್ದು, ಈ ಬಗ್ಗೆ ಸಂತ್ರಸ್ತೆ ಯುವತಿ ಬೆಂಗಳೂರಿನ ಬಸವನಗುಡಿ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ದೂರಿನ ಅನ್ವಯ ಎಫ್ಐಆರ್ ದಾಖಲಾಗಿದೆ. ಆದ್ರೆ, ಈ ಆರೋಪವನ್ನು ಖುದ್ದು ರಂಗನಾಥ್ ಹಾಗೂ ಸಂಸದ ದೇವೇಂದ್ರಪ್ಪ ಅಲ್ಲಗಳೆದಿದ್ದಾರೆ. ಇನ್ನು ಈ ಬಗ್ಗೆ ಯುವತಿ ಮಾದ್ಯಮಗಳಿಗೆ ಪ್ರತಿಕ್ರಿಯಿಸಿದ್ದು, 2022ರಿಂದ ಕಾಲೇಜು ಉಪನ್ಯಾಸಕ ರಂಗನಾಥ ನನಗೆ ಪರಿಚಯಸ್ಥರು. ನಿನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ ಎಂದು ದೈಹಿಕ ಸಂಪರ್ಕ ಬೆಳೆಸಿದ್ದಾರೆ. ಬಳಿಕ ನನ್ನನ್ನು ಮದುವೆಯಾಗಿ ಎಂದಾಗ ಅವೈಡ್ ಮಾಡಿದ್ದಾರೆ ಎಂದು ಸ್ಪಷ್ಟಪಡಿದ್ದಾರೆ.
ಬೆಂಗಳೂರಿಗೆ ಬಂದಿದ್ದೇನೆ ಸಿಗುತ್ತಿಯಾ ಎಂದು ಒಂದು ದಿನ ಕರೆ ಮಾಡಿದ್ದರು. ನಂತರ ಭೇಟಿ ಮಾಡಿ ಉಪನ್ಯಾಸಕ ರಂಗನಾಥ ಮೈಸೂರಿಗೆ ಕರೆಸಿಕೊಂಡಿದ್ದ. ಅಲ್ಲದೇ ಖಾಸಗಿ ಹೋಟೆಲ್ನಲ್ಲಿ ನನ್ನ ಜೊತೆ ಲೈಂಗಿಕ ಸಂಪರ್ಕ ಬೆಳೆಸಿದ್ದರು. ಆದ್ರೆ, ನನ್ನನ್ನು ಮದುವೆಯಾಗಿ ಎಂದಾಗ ಅವೈಡ್ ಮಾಡಿದ್ದಾರೆ. ದುಡ್ಡು ಕೊಡುತ್ತೇನೆ ನನ್ನನ್ನು ಬಿಟ್ಟುಬಿಡು ಎಂದು ನನಗೆ ಹೇಳಿದ್ದಾರೆ. ಈಗ ನೋಡಿದ್ರೆ ನನ್ನ ವಿರುದ್ಧವೇ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ ಎಂದರು.
ಇದನ್ನೂ ಓದಿ: ಕರ್ನಾಟಕ ಬಿಜೆಪಿ ಎಂಪಿ ಪುತ್ರನ ವಿರುದ್ಧ ಲವ್, ಸೆಕ್ಸ್, ದೋಖಾ: ದೂರು ದಾಖಲಿಸಿದ ಯುವತಿ
ಯಾರೋ ಒಬ್ಬರ ಮೇಲೆ ಆರೋಪ ಮಾಡುವುದಕ್ಕೆ ನಾನು ಹುಚ್ಚಲ್ಲ. ನಾನು ಎಲ್ಲದಕ್ಕೂ ಸಿದ್ಧನಾಗಿದ್ದೇನೆ. ನಾನು ಡಿಮ್ಯಾಂಡ್ ಮಾಡಿರಲಿಲ್ಲ, ಆರು ತಿಂಗಳ ಆದ್ಮೇಲೆ ಬರುತ್ತೇನೆ ಎಂದು ಹೇಳಿದ್ದರು. ಮನೆ ಬಾಡಿಗೆ ಅವರೇ ಕಟ್ಟಿದ್ದಾರೆ. ಸಂಸದರ ಪುತ್ರ ರಂಗನಾಥಗೆ ನಾನು ಬ್ಲ್ಯಾಕ್ಮೇಲ್ ಮಾಡಿಲ್ಲ ಎಂದಿದ್ದಾರೆ.
ಪ್ರತ್ರನ ಮೇಲಿನ ಆರೋಪಕ್ಕೆ ಸಂಸದ ದೇವೇಂದ್ರಪ್ಪ ಹೇಳಿದ್ದೇನು?
ಇನ್ನು ಪುತ್ರನ ಮೇಲೆ ಕೇಳಿಬಂದಿರುವ ಆರೋಪಕ್ಕೆ ಸಂಬಂಧಿಸಿದಂತೆ ಖುದ್ದ ಸಂಸದ ದೇವೇಂದ್ರಪ್ಪ ಪ್ರತಿಕ್ರಿಯಿಸಿದ್ದು, ಪ್ರಕರಣದ ಬಗ್ಗೆ ಪೊಲೀಸ್ ಇಲಾಖೆಗೆ ಗೊತ್ತಾಗಿದೆ. ಮಹಿಳೆ ಬ್ಲ್ಯಾಕ್ಮೇಲ್ ಮಾಡುತ್ತಿದ್ದಾಳೆ ಎಂದು ಜನ ಹೇಳುತ್ತಿದ್ದಾರೆ. ಆ ಯುವತಿ ನನಗೆ ಒಂದು ಬಾರಿ ಫೋನ್ ಮಾಡಿದ್ದಳು . ನಾನು ನಿನ್ನ ಮುಖ ನೋಡಿಲ್ಲ, ನಗೆ ಯಾಕೆ ಕರೆ ಮಾಡ್ತೀಯಾ? ನನ್ನ ನಂಬರ್ ನಿನಗೆ ಯಾರು ಕೊಟ್ಟರು ಎಂದು ನಾನು ಕೇಳಿದ್ದೆ. ಮಹಿಳೆಗೆ ಅನ್ಯಾಯ ಆಗಿದ್ರೆ ಕಾನೂನು ಪ್ರಕಾರ ಹೋಗಲಿ. ತಪ್ಪು ಸರಿಯನ್ನು ಪೊಲೀಸರು ನಿರ್ಧಾರ ಮಾಡುತ್ತಾರೆ. ಮಹಿಳೆ ಸರ್ಪಾಸ್ತ್ರ ಹಾಕಿದ್ದಾಳೆ, ನನ್ನ ಮಗ ಗರುಡಾಸ್ತ್ರ ಹಾಕಿದ್ದಾನೆ ಎಂದರು.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ