ಮಚ್ಚು ಹಿಡಿದು ಆವಾಜ್​ ಹಾಕಿದ KGF ಯುವಕನ ಬೆದರಿಕೆ ವಿಡಿಯೋ ಆಯ್ತು ಫುಲ್​ ವೈರಲ್​

ಜಿಲ್ಲೆಯ KGF ತಾಲೂಕಿನ ಉದಯನಗರದಲ್ಲಿ ನಡೆದ ಘಟನೆಯೊಂದರ ವಿಡಿಯೋ ಸಹ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಮಚ್ಚು ಹಿಡಿದು ಆವಾಜ್​ ಹಾಕಿದ KGF ಯುವಕನ ಬೆದರಿಕೆ ವಿಡಿಯೋ ಆಯ್ತು ಫುಲ್​ ವೈರಲ್​
ಮಚ್ಚು ಹಿಡಿದು ಬೆದರಿಕೆ ಒಡ್ಡುತ್ತಿರುವ ಯುವಕ

Updated on: Jan 07, 2021 | 11:51 PM

ಕೋಲಾರ: ರಾಕಿಂಗ್ ಸ್ಟಾರ್ ಯಶ್​ ಅಭಿನಯದ KGF ಚಾಪ್ಟರ್​ 2ನ ಟೀಸರ್ ನಿಗದಿತ ಸಮಯಕ್ಕಿಂತ ಮುಂಚೆಯೇ ರಿಲೀಸ್​​ ಆಗಿದ್ದು ಸಿನಿರಸಿಕರು ಹಾಗೂ ಅಭಿಮಾನಿಗಳಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ. ಅಂತೆಯೇ, ಜಿಲ್ಲೆಯ KGF ತಾಲೂಕಿನ ಉದಯನಗರದಲ್ಲಿ ನಡೆದ ಘಟನೆಯೊಂದರ ವಿಡಿಯೋ ಸಹ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಜಮೀನು ವಿವಾದದ ಹಿನ್ನೆಲೆಯಲ್ಲಿ ಮಚ್ಚು ಹಿಡಿದು ಯುವಕನೊಬ್ಬ ಆವಾಜ್ ಹಾಕಿರುವ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್​ ಆಗಿದೆ. ನಡುರಸ್ತೆಯಲ್ಲಿ‌ ಮಚ್ಚು ಹಿಡಿದ ಯುವಕ ಎದುರು ನಿಂತವರಿಗೆ ಆವಾಜ್ ಹಾಕಿ ಬೆದರಿಕೆ ಒಡ್ಡುತ್ತಿರುವ ದೃಶ್ಯ ಸ್ಥಳೀಯರ ಮೊಬೈಲ್​ನಲ್ಲಿ ಸೆರೆಯಾಗಿದೆ.

ಗಲಾಟೆ ವೇಳೆ ಯುವಕ ಮಚ್ಚು ತೋರಿಸಿ ಬೆದರಿಸುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ರಾಬರ್ಟ್​​ಸನ್ ಪೇಟೆ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ನನ್ನ ತಂಗಿಯ ಮದುವೆ ಜೋರು ಜೋರು ಅಂತಾ.. ಸೋದರಿಯ ವಿವಾಹಕ್ಕೋಸ್ಕರ ಕಳ್ಳತನ ಮಾಡಿದ ಅಣ್ಣ ಜೈಲುಪಾಲು!