AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನ್ಯೂ ಇಯರ್ ದಿನ ಎಣ್ಣೆ ಪಾರ್ಟಿ ಮಾಡಿ ಅಪ್ಪ ಬೈತಾರೆ ಅಂತ ಕಿಡ್ನಾಪ್ ಕಥೆ ಕಟ್ಟಿದ ಬಾಲಕ

ಡಿ.31 ರಂದು ಮನೆಯಲ್ಲಿ‌ ಯಾರು ಇರದಿದ್ದಾಗ ನ್ಯೂ ಇಯರ್ ಅಂತ ಫುಲ್ ಎಣ್ಣೆ ಪಾರ್ಟಿ ಮಾಡಿ ಟೈಟ್​ ಆಗಿದ್ದ. ಇದೇ ವೇಳೆಗೆ ಕೊಚ್ಚಿಯಿಂದ ಅಪ್ಪ ಸ್ಯಾಮುಯೆಲ್ ನಿನಾನ್ ಕರೆ ಬರುತ್ತೆ. ಅಪ್ಪನ ಕಾಲ್ ನೋಡಿ ಎಲ್ಲಿ ತಾನು ಕುಡಿದಿರೋದು ಗೊತ್ತಾದ್ರೆ ಬೈತಾರೋ ಎಂಬ ಭಯಕ್ಕೆ ಮದ್ಯದ ಅಮಲಿನಲ್ಲೇ ತಂದೆಯ ಮುಂದೆ ಕಿಡ್ನಾಪ್ ಕಥೆ ಕಟ್ಟಿದ್ದ.

ನ್ಯೂ ಇಯರ್ ದಿನ ಎಣ್ಣೆ ಪಾರ್ಟಿ ಮಾಡಿ ಅಪ್ಪ ಬೈತಾರೆ ಅಂತ ಕಿಡ್ನಾಪ್ ಕಥೆ ಕಟ್ಟಿದ ಬಾಲಕ
ಕಿಡ್ನಾಪ್ ಕಥೆ ಕಟ್ಟಿದ ಬಾಲಕ
ಆಯೇಷಾ ಬಾನು
ಆಯೇಷಾ ಬಾನು|

Updated on: Jan 08, 2021 | 7:58 AM

Share

ಬೆಂಗಳೂರು: ನ್ಯೂ ಇಯರ್ ದಿನ ಫುಲ್ ಎಣ್ಣೆ ಪಾರ್ಟಿ ಮಾಡಿ ಅಪ್ಪನಿಗೆ ಗೊತ್ತಾದ್ರೆ ಬೈತಾರೆ ಎಂದು ಬಾಲಕ ಕಿಡ್ನಾಪ್ ಕಥೆ ಕಟ್ಟಿರುವ ಘಟನೆ ಜೀವನ್ ಭೀಮಾ ನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

16 ವರ್ಷದ ಈ ಬಾಲಕ ಹುಟ್ಟಿನಿಂದಲೇ ಶ್ರೀಮಂತ. ಹೀಗಾಗಿ ಆತನಿಗೆ ಹೇಳಿದನ್ನೆಲ್ಲ ಕೊಡಿಸಿ ಪ್ರೀತಿಯಿಂದ ಸಾಕಿರ್ತಾರೆ. ಈತ, ಮದುವೆ ಸಮಾರಂಭಕ್ಕಾಗಿ ಕೊಚ್ಚಿಯಿಂದ ಬೆಂಗಳೂರಿನ ತಾತನ ಮನೆಗೆ ಬಂದಿರ್ತಾನೆ. ಡಿ.31 ರಂದು ಮನೆಯಲ್ಲಿ‌ ಯಾರು ಇರದಿದ್ದಾಗ ನ್ಯೂ ಇಯರ್ ಅಂತ ಫುಲ್ ಎಣ್ಣೆ ಪಾರ್ಟಿ ಮಾಡಿ ಟೈಟ್​ ಆಗಿದ್ದ. ಇದೇ ವೇಳೆಗೆ ಕೊಚ್ಚಿಯಿಂದ ಅಪ್ಪ ಸ್ಯಾಮುಯೆಲ್ ನಿನಾನ್ ಕರೆ ಬರುತ್ತೆ. ಅಪ್ಪನ ಕಾಲ್ ನೋಡಿ ಎಲ್ಲಿ ತಾನು ಕುಡಿದಿರೋದು ಗೊತ್ತಾದ್ರೆ ಬೈತಾರೋ ಎಂಬ ಭಯಕ್ಕೆ ಮದ್ಯದ ಅಮಲಿನಲ್ಲೇ ತಂದೆಯ ಮುಂದೆ ಕಿಡ್ನಾಪ್ ಕಥೆ ಕಟ್ಟಿದ್ದ.

ಹಣಕ್ಕಾಗಿ ಗೃಹಬಂಧನದಲ್ಲಿರಿಸಿ ಕಿರುಕುಳ ಕೊಟ್ಟಿದ್ದಾರೆ ಎಂದು ಬಡಬಡಿಸಿದ್ದ. ಅನ್ಸಾರಿ ಎಂಬ ಪರಿಚಿತನ ಮೇಲೆ ಆರೋಪ ಹೊರಿಸಿದ್ದ. ಒತ್ತಾಯ ಪೂರ್ವಕವಾಗಿ ಜ್ಯೂಸ್ ನಲ್ಲಿ‌ ಕೆಮಿಕಲ್ ಸೇರಿಸಿ ಕುಡಿಸಲಾಗಿದೆ ಎಂದು ಆರೋಪಿಸಿದ್ದ. ಇಷ್ಟೆಲ್ಲಾ ಆಗಿದೆಯಾ ಎಂದು ಕೊಚ್ಚಿಯಲ್ಲಿದ್ದ ಬಾಲಕನ ತಂದೆ ಗಾಬರಿ ಆಗಿದ್ದಾರೆ. ಬಳಿಕ ಬೆಂಗಳೂರಿನಲ್ಲಿರುವ ತನ್ನ ಪರಿಚಯಸ್ಥರಿಗೆ, ಸ್ನೇಹಿತರಿಗೆ ಕರೆ ಮಾಡಿ ವಿಷಯ ತಿಳಿಸಿ ಸಹಾಯ ಮಾಡುವಂತೆ ಕೇಳಿಕೊಂಡಿದ್ದಾರೆ.

ಬಳಿಕ ಅಪಾರ್ಟ್ಮೆಂಟ್ ಸೆಕ್ಯುರಿಟಿ ಸಹಾಯದಿಂದ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಬಾಲಕನ ತಂದೆ ಸ್ಯಾಮುಯೆಲ್ ನಿನಾನ್ ಜೀವನ್ ಭಿಮಾ ನಗರ ಠಾಣೆಗೆ ದೂರು ನೀಡಿದ್ರು. ಕೊನೆಗೆ ವೈದ್ಯಕೀಯ ತಪಾಸಣೆ ವೇಳೆ ಬಾಲಕನ ಕಳ್ಳಾಟ ಬಯಲಾಗಿದೆ. ಅಪ್ಪ ಬೈತಾರೆ ಅಂತ ಇಷ್ಟೆಲ್ಲಾ ಡ್ರಾಮಾ ಮಾಡಿರುವುದಾಗಿ ಪೊಲೀಸರ ಮುಂದೆ ಬಾಲಕ ತಪ್ಪೊಪ್ಪಿಕೊಂಡಿದ್ದಾನೆ.

ಕೋಟೆ ನಾಡಿನಲ್ಲಿ ಭೀಕರ ಘಟನೆ, ಹಳೇ ವೈಷಮ್ಯಕ್ಕೆ ಮಹಿಳೆಯನ್ನು ಕೊಚ್ಚಿ, ಕೊಚ್ಚಿ ಬರ್ಬರ ಹತ್ಯೆ

Follow Us
ಆಯೇಷಾ ಬಾನು
ಆಯೇಷಾ ಬಾನು

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.

ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
RSS ಕಚೇರಿಯಲ್ಲೇ ಫಾರ್ಮ್-7 ಮುದ್ರಣ: ತನ್ವೀರ್ ಸೇಠ್ ಆರೋಪ
RSS ಕಚೇರಿಯಲ್ಲೇ ಫಾರ್ಮ್-7 ಮುದ್ರಣ: ತನ್ವೀರ್ ಸೇಠ್ ಆರೋಪ