ರಾಜಕೀಯದಲ್ಲಿ ಬಿಡಿ ಯಾರೂ ಶತ್ರುಗಳಲ್ಲ. ಯಾರೂ ಪರಮ ಮಿತ್ರರಲ್ಲ. ರಾಜಕಾರಣದಲ್ಲಿ ಅಣ್ಣನ ವಿರುದ್ದ ತಮ್ಮ. ಸಹೋದರನ ವಿರುದ್ದ ಸಹೋದರಿಯರು ಸ್ಪರ್ಧೆ ಮಾಡಿರೋದನ್ನ ನೋಡಿದ್ದೇವೆ. ಇದೀಗ ಅದೇ ರೀತಿ ಅಪ್ಪನ ಬದಲಾಗಿ ಪುತ್ರ ಸ್ಪರ್ಧೆಗೆ ಸಿದ್ದವಾಗಿದ್ರೆ, ಅಣ್ಣನಿಗೆ (Anand Singh) ತಂಗಿಯೇ ಅಡ್ಡಿಯಾಗಿದ್ದಾಳೆ. ಅಷ್ಟಕ್ಕೂ ಅದ್ಯಾವ ಕ್ಷೇತ್ರದಲ್ಲಿ ಸಹೋದರನ ವಿರುದ್ಧ ಸಹೋದರಿ ತೊಡೆ ತಟ್ಟಿದ್ದಾಳೆ ಅನ್ನೋ ಸ್ಟೋರಿ ಇಲ್ಲಿದೆ ನೋಡಿ. ಅಣ್ಣನಿಗೆ ಎದುರಾಳಿಯಾಗಿ ನಿಂತ ತಂಗಿ. ಪುತ್ರನಿಗೆ ಪಟ್ಟ ಕಟ್ಟಲು ಮುಂದಾದ ಸಹೋದರನ ವಿರುದ್ಧ ತೊಡೆ ತಟ್ಟಿ ನಿಂತ ಸಹೋದರಿ (Sister). ಇಷ್ಟಕ್ಕೂ ಮತದಾರ ಪ್ರಭು ಅಣ್ಣ-ತಂಗಿ-ಪುತ್ರನ ರಾಜಕೀಯ ಆಟದಲ್ಲಿ (Hospet Assembly constituency) ಗೆಲ್ಲಿಸುವುದು ಯಾರನ್ನು? ಅಷ್ಟಕ್ಕೂ ಕಣಕ್ಕೆ ಇಳಿಯೋದ್ಯಾರು? ಏನೇ ಆದರೂ ಇಂತಹ ವಿಶಿಷ್ಟ ಸನ್ನಿವೇಶಕ್ಕೆ ಸಾಕ್ಷಿಯಾಗಿರುವುದು ವಿಜಯನಗರ ಜಿಲ್ಲೆಯ ಹೊಸಪೇಟೆ ಕ್ಷೇತ್ರ (Hospet Assembly constituency).
ಬಿಜೆಪಿ ಟಿಕೇಟ್ ಗೆ ಒಳಬೇಗುದಿ ಶುರುವಾಗಿದೆ. ವಿಜಯನಗರ ಜಿಲ್ಲೆಯ ಹೊಸಪೇಟೆ ಕ್ಷೇತ್ರದ ಟಿಕೇಟ್ ಗೆ ಈಗ ಪೈಪೋಟಿ ಜೋರಾಗಿದೆ. ಹಾಲಿ ಸಚಿವ, ಶಾಸಕ ಆನಂದಸಿಂಗ್ ಸ್ಪರ್ಧೆಯಿಂದ ಹಿಂದೆ ಸರಿದು ಪುತ್ರನಿಗೆ ರಾಜಕೀಯ ಭವಿಷ್ಯ ಕಲ್ಪಿಸಲು ಮುಂದಾಗಿದ್ದಾರೆ. ಪುತ್ರ ಸಿದ್ದಾರ್ಥ ಸಿಂಗ್ ಠಾಕೂರ್ ಗೆ ಟಿಕೇಟ್ ಕೊಡಿ ಅಂತಾ ಸಚಿವ ಆನಂದಸಿಂಗ್ ಪಕ್ಷದ ಮುಂದೆ ಬೇಡಿಕೆಯಿಟ್ಟಿದ್ದಾರೆ. ಪುತ್ರನಿಗೆ ಟಿಕೇಟ್ ಕೊಡಲಿಲ್ಲವಾದ್ರೆ ಸ್ವತಃ ತಾವೇ ಸ್ಪರ್ಧೆಗೆ ಸಿದ್ದ ಅಂತಾನೂ ಸಚಿವ ಆನಂದಸಿಂಗ್ ಹೊಸ ವರಸೆ ತೆಗೆದಿರುವುದು ಪಕ್ಷದ ನಾಯಕರನ್ನ ಇಕ್ಕಟ್ಟಿಗೆ ಸಿಲುಕಿಸಿದೆ. ಪುತ್ರ ಸಿದ್ದಾರ್ಥ ಸಿಂಗ್ ಹಾಗೂ ತಂದೆ ಆನಂದಸಿಂಗ್ ಟಿಕೇಟ್ ಗಾಗಿ ಬೇಡಿಕೆಯಿಟ್ಟಿರುವುದು ವಿಶೇಷವಾಗಿದೆ.
ಹೊಸಪೇಟೆ ಕ್ಷೇತ್ರಕ್ಕೆ ತಮ್ಮ ಬದಲಾಗಿ ಪುತ್ರನನ್ನ ಕಣಕ್ಕೆ ಇಳಿಸಿ ಗೆಲ್ಲಿಸುವುದು ಸಚಿವ ಆನಂದಸಿಂಗ್ ಪ್ಲ್ಯಾನ್ ಆಗಿದೆ. ಆದ್ರೆ ಸಚಿವ ಆನಂದಸಿಂಗ್ ಗೆ ಇದೀಗ ಸಹೋದರಿ. ರಾಜ್ಯ ಬಿಜೆಪಿ ಮಹಿಳಾ ರಾಜ್ಯ ಉಪಾಧ್ಯಕ್ಷೆ ರಾಣಿ ಸಂಯುಕ್ತಾ ಸಿಂಗ್ ಅವರೇ ಅಡ್ಡಿಯಾಗಿದ್ದಾರೆ. ಆನಂದಸಿಂಗ್ ಗೆ ಟಿಕೇಟ್ ಕೊಡಬೇಡಿ. ಈ ಬಾರಿ ನನಗೆ ಟಿಕೇಟ್ ಕೊಡಿ ಅಂತಾ ರಾಣಿ ಸಂಯುಕ್ತಾ ಸಿಂಗ್ ಸಹೋದರನಿಗೆ ಅಡ್ಡಲಾಗಿ ನಿಂತಿದ್ದಾರೆ. ಆನಂದಸಿಂಗ್ ವಿರುದ್ದ ಕ್ಷೇತ್ರದಲ್ಲಿ ವಿರೋಧಿ ಅಲೆಯಿದೆ. ಆನಂದಸಿಂಗ್ ಬದಲಾಗಿ ಪಕ್ಷದ ನಿಷ್ಠಾವಂತ ಕಾರ್ಯಕರ್ತೆಯಾಗಿರುವ ತಮಗೇ ಟಿಕೇಟ್ ಬೇಕೆಂದು ರಾಣಿ ಸಂಯುಕ್ತಾ ಸಿಂಗ್ ಪಟ್ಟು ಹಿಡಿದಿದ್ದಾರೆ.
ಇದನ್ನೂ ಓದಿ:
ಕಳೆದ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಪರ ನಿಂತು ಗೆದ್ದು ಆನಂತರ ಬಿಜೆಪಿಗೆ ಸೇರ್ಪಡೆಯಾಗಿ ಸಚಿವರಾಗಿದ್ದ ಆನಂದಸಿಂಗ್ ತಮ್ಮಿಂದಲೇ ಸರ್ಕಾರ ಬಂದಿದ್ದು. ಹೀಗಾಗಿ ತಮ್ಮ ಪುತ್ರನಿಗೆ ಟಿಕೇಟ್ ಕೊಡಬೇಕು ಅನ್ನೋ ಬೇಡಿಕೆಯಿಟ್ಟಿದ್ದಾರೆ. ಆದ್ರೆ ಪಕ್ಷದ ನಿಷ್ಠಾವಂತ ಕಾರ್ಯಕರ್ತೆಯಾಗಿರುವ ತಮಗೆ ಟಿಕೇಟ್ ಬೇಕೆಂದು ಆನಂದಸಿಂಗ್ ಸಹೋದರಿ ರಾಣಿ ಸಂಯುಕ್ತಾ ಸಿಂಗ್ ಸಹ ಟಿಕೇಟ್ ಗಾಗಿ ಪೈಪೋಟಿ ನಡೆಸಿದ್ದಾರೆ. ಹೀಗಾಗಿ ಹೊಸಪೇಟೆ ಕ್ಷೇತ್ರದ ಟಿಕೇಟ್ ಯಾರಿಗೆ ಒಲಿಯುತ್ತೆ ಅನ್ನೋದು ಇದೀಗ ಕುತೂಹಲ ಮೂಡಿಸಿದೆ.
ವರದಿ: ವೀರೇಶ್ ದಾನಿ, ಟಿವಿ9, ವಿಜಯನಗರ
ರಾಜ್ಯ ರಾಜಕಾರಣದ ಕ್ಷಣ ಕ್ಷಣದ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ