ವಿಜಯಪುರದ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ಬಾಯ್ಲರ್​ ಸ್ಫೋಟ; ನಾಲ್ವರಿಗೆ ಗಂಭೀರ ಗಾಯ

|

Updated on: Mar 04, 2023 | 3:54 PM

ವಿಜಯಪುರ ಜಿಲ್ಲೆಯ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ಇತ್ತೀಚೆಗಷ್ಟೇ ಸ್ಥಾಪಿಸಿದ್ದ ನೂತನ ಬಾಯ್ಲರ್ ಸ್ಫೋಟಗೊಂಡಿದ್ದು, ಪ್ರಾಯೋಗಿಕವಾಗಿ ಪರೀಕ್ಷೆ ಮಾಡುವ ವೇಳೆ ಈ ಅವಘಡ ಸಂಭವಿಸಿದೆ. ಘಟನೆಯಲ್ಲಿ ನಾಲ್ವರಿಗೆ ಗಾಯಗಳಾಗಿವೆ.

ವಿಜಯಪುರದ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ಬಾಯ್ಲರ್​ ಸ್ಫೋಟ; ನಾಲ್ವರಿಗೆ ಗಂಭೀರ ಗಾಯ
ವಿಜಯಪುರದ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ಬಾಯ್ಲರ್​ ಸ್ಫೋಟ
Follow us on

ವಿಜಯಪುರ: ಜಿಲ್ಲೆಯ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ (Nandi Co-operative Sugar Factory Vijayapura) ಇತ್ತೀಚೆಗಷ್ಟೇ ಸ್ಥಾಪಿಸಿದ್ದ ನೂತನ ಬಾಯ್ಲರ್ ಸ್ಫೋಟಗೊಂಡು (Boiler explosion) ನಾಲ್ವರು ಕಾರ್ಮಿಕರು ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ. ವಿಜಯಪುರ ಜಿಲ್ಲೆ ಬಬಲೇಶ್ವರ ತಾಲೂಕಿನ ಕೃಷ್ಣಾನಗರದಲ್ಲಿರುವ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ಇತ್ತೀಚೆಗೆ ನೂತನವಾಗಿ ಬಾಯ್ಲರ್ ಸ್ಥಾಪನೆ ಮಾಡಲಾಗಿತ್ತು. ಈ ಬಾಯ್ಲರ್​ ಅನ್ನು ಪ್ರಾಯೋಗಿಕವಾಗಿ ಪರೀಕ್ಷೆ ಮಾಡುವ ವೇಳೆ ಸ್ಫೋಟಗೊಂಡಿದೆ. ಈ ದುರ್ಘಟನೆಯಲ್ಲಿ ನಾಲ್ವರಿಗೆ ಗಂಭೀರ ಗಾಯಗಳಾಗಿದ್ದು, ಸ್ಥಳದಲ್ಲಿ ಆತಂಕದ ವಾತಾವರಣ ಮನೆ ಮಾಡಿದೆ.

ನಂದಿ ಸಹಕಾರಿ ಸಕ್ಕರೆ ಕಾರ್ಖಾನೆಗೆ ಪೂನಾದ ಎಸ್​ಎಸ್ ಇಂಜೀನಿಯರ್ಸ್ ನೂತನ ಬಾಯ್ಲರ್ ಅನ್ನು ಅಳವಡಿಸಿತ್ತು. 220 ಟನ್ ಕೆಪಾಸಿಟಿ ಹೊಂದಿದ್ದ ಬಾಯ್ಲರ್ ಅನ್ನು 51 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿತ್ತು. ಆದರೆ ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿದ್ದ ಈ ಬಾಯ್ಲರ್ ಇದೀಗ ಸ್ಫೋಟಗೊಂಡಿದ್ದು, ಆಧ್ಯಕ್ಷ ಶಶಿಕಾಂತ ಪಾಟೀಲ್ ನೇತೃತ್ವದ ಆಡಳಿತ ಮಂಡಳಿಯಿಂದ ಆಧಿಕಾರ ದುರುಪಯೋಗ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ. ಘಟನೆ ಕುರಿತು ತನಿಖೆ ನಡೆಸಬೇಕೆಂದು ರೈತರು ಪಟ್ಟು ಹಿಡಿದಿದ್ದಾರೆ.

ಇದನ್ನೂ ಓದಿ: ಭೋಪಾಲ್ – ಉಜ್ಜೈನ್ ರೈಲು ಸ್ಫೋಟ, 7 ಅಪರಾಧಿಗಳಿಗೆ ಮರಣದಂಡನೆ; ಮೋದಿ ರ‍್ಯಾಲಿಯಲ್ಲಿಯೂ ಸ್ಫೋಟಕ್ಕೆ ಸಂಚು ಹೂಡಿದ್ದ ಉಗ್ರರು

ನಂದಿ ಸಹಕಾರಿ ಸಕ್ಕರೆ ಕಾರ್ಖಾನೆಗೆ ಬಾಯ್ಲರ್ ಅಳವಡಿಸಲು ದೆಹಲಿಯ ಐಎಸ್​ಜಿಸಿ ಕಂಪನಿಗೆ ಗುತ್ತಿಗೆ ನೀಡಲಾಗಿತ್ತು. ತದನಂತರದ ದಿನಗಳಲ್ಲಿ ಈ ಗುತ್ತಿಗೆಯನ್ನು ರದ್ದು ಪಡಿಸಿದ್ದ ಸಕ್ಕರೆ ಕಾರ್ಖಾನ್ ಆಡಳಿತ ಮಂಡಳಿ, ಐಎಸ್​ಜಿಸಿ ಕಂಪನಿಗೆ 5 ಕೋಟಿ ರೂಪಾಯಿ ದಂಡ ತೆರಬೇಕಾಯಿತು. ಬಳಿಕ ಬಾಯ್ಲರ್ ನಿರ್ಮಾಣ ಹಾಗೂ ಅಳವಡಿಸಲು ಪೂನಾದ ಎಸ್​ಎಸ್ ಇಂಜೀನಿಯರ್ಸ್​​ಗೆ ಗುತ್ತಿಗೆ ನೀಡಲಾಗಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:53 pm, Sat, 4 March 23