Shikaripura: ತಾಯಿಯ ಜೊತೆ ಅನೈತಿಕ ಸಂಬಂಧ ಹೊಂದಿದ್ದ ವಿವಾಹಿತ ಯುವಕನ ಕಥೆ ಮುಗಿಸಿದ ಮಗ

ಸೋಮಪ್ಪನ ಜೊತೆ ಸ್ನೇಹಿತ ಹನುಮಂತಪ್ಪ ಕೂಡಾ ಹೋಗಿದ್ದ. ಈ ಇಬ್ಬರಿಗೂ ಗಂಗಮ್ಮ ಮತ್ತು ಆತನ ಮಗ ಸುದೀಪ್ ಹಾಗೂ ನಾಗರಾಜ್ - ರಮೇಶ್ ಎಂಬಿಬ್ಬರು ಸೇರಿ ಸಮೀಪದ ಅರಣ್ಯಕ್ಕೆ ಕರೆದೊಯ್ದು, ಅಲ್ಲಿಯೇ ಹಿಗ್ಗಾಮುಗ್ಗಾ ಥಳಿಸಿದ್ದಾರೆ.

Shikaripura: ತಾಯಿಯ ಜೊತೆ ಅನೈತಿಕ ಸಂಬಂಧ ಹೊಂದಿದ್ದ ವಿವಾಹಿತ ಯುವಕನ ಕಥೆ ಮುಗಿಸಿದ ಮಗ
ತಾಯಿಯ ಜೊತೆ ಅನೈತಿಕ ಸಂಬಂಧ ಹೊಂದಿದ್ದ ವಿವಾಹಿತ ಯುವಕನ ಕಥೆ ಮುಗಿಸಿದ ಮಗ
Follow us
TV9 Web
| Updated By: ಸಾಧು ಶ್ರೀನಾಥ್​

Updated on: Mar 04, 2023 | 4:17 PM

ಪತ್ನಿ ತನ್ನೊಂದಿಗೆ ಸಂಸಾರ ಮಾಡದೇ ಆಕೆಯ ತವರು ಮನೆ ಸೇರಿದ್ದಳು. ಈ ನಡುವೆ ಈ ವ್ಯಕ್ತಿಗೆ ಓರ್ವ ಮಹಿಳೆಯ ಪರಿಚಯವಾಗಿತ್ತು. ಇದೇ ಪರಿಚಯ ಇಬ್ಬರ ನಡುವೆ ಅನೈತಿಕ ಸಂಬಂಧಕ್ಕೆ ದಾರಿ ಮಾಡಿಕೊಟ್ಟಿತ್ತು. ಹೀಗೆ ಮಹಿಳೆಯ ಹಿಂದೆ ಬಿದ್ದಿದ್ದ ವ್ಯಕ್ತಿ ಕೊನೆಗೆ ಹೆಣವಾಗಿದ್ದಾನೆ. ಅಷ್ಟಕ್ಕೂ ಮರ್ಡರ್ ಮಾಡಿದ್ದು ಯಾರು, ಯಾಕೆ ಅಂತೀರಾ ಈ ಸ್ಟೋರಿ ಓದಿ. ಗುರುವಾರ ಶಿಕಾರಿಪುರ ತಾಲೂಕಿನ ಇನಾಮ್ ಮುತ್ತಳ್ಳಿಯ ಗ್ರಾಮದಲ್ಲಿ 30 ವರ್ಷದ ವಿವಾಹಿತ ಸೋಮಪ್ಪ ಎನ್ನುವ ವ್ಯಕ್ತಿ ಮೃತಪಟ್ಟಿದ್ದಾನೆ. ಸೋಮಪ್ಪ ಮತ್ತು ಆತನ ಸ್ನೇಹಿತ ಹನುಮಂತಪ್ಪ ಇಬ್ಬರಿಗೂ ಹಿಗ್ಗಾಮುಗ್ಗಾ ಥಳಿಸಿದ್ದ ದುಷ್ಕರ್ಮಿಗಳು, ಇನಾಮ್ ಮುತ್ತಳ್ಳಿ ಗ್ರಾಮದಲ್ಲಿ ಇಬ್ಬರನ್ನೂ ಬಿಟ್ಟು ಹೋಗಿದ್ದರು. ಥಳಿತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಸೋಮಪ್ಪನನ್ನು ಗ್ರಾಮಸ್ಥರು ಶಿಕಾರಿಪುರ ಆಸ್ಪತ್ರೆಗೆ ದಾಖಲಿಸಿದ್ದರು. ಆದ್ರೆ ಅಷ್ಟರಲ್ಲೇ ಸೋಮಪ್ಪ ಮೃತಪಟ್ಟಿದ್ದನು. ಇನ್ನು ಹನುಮಂತಪ್ಪನಿಗೆ ಗಂಭೀರವಾಗಿ ಗಾಯಗಳಾಗಿದ್ದು, ಆತ ಮೆಗ್ಗಾನ್ ಜಿಲ್ಲಾಸ್ಪತ್ರೆಯಲ್ಲಿ ದಾಖಲು ಆಗಿದ್ದಾನೆ. ಅಷ್ಟಕ್ಕೂ ಒಂದು ಸಾವು ಮತ್ತು ಓರ್ವ ವ್ಯಕ್ತಿಯನ್ನು ಥಳಿಸಿದ್ದು ಯಾರು, ಯಾಕೆ ಅಂತಾ ನೋಡಿದ್ರೆ… ಅಲ್ಲೊಂದು ಅನೈತಿಕ ಸಂಬಂಧದ ಕಹಾನಿ ಶುರುವಾಗಿತ್ತು.

ಇದೇ ಗ್ರಾಮದ ಗಂಗಮ್ಮ ಎನ್ನುವ 45 ವಯಸ್ಸಿನ ಅಂಟಿ ಮತ್ತು 30ರ ಹರೆಯದ ಸೋಮಪ್ಪ ನಡುವೆ ಅನೈತಿಕ ಸಂಬಂಧವಿತ್ತು. ಕಳೆದ ವರ್ಷ ಗಂಗಮ್ಮ ಮತ್ತು ಸೋಮಪ್ಪ ವಿಚಾರವಾಗಿ ಗಲಾಟೆ ಆಗಿತ್ತು. ಭೋವಿ ಸಮಾಜದವರು ಸೋಮಪ್ಪಗೆ 19 ಸಾವಿರ ದಂಡ ಹಾಕುವ ಮೂಲಕ ರಾಜೀ ಪಂಚಾಯಿತಿ ಮಾಡಿದ್ದರು.

ಈ ಘಟನೆ ಬಳಿಕ ಗಂಗಮ್ಮ ತನ್ನ ಮಕ್ಕಳೊಂದಿಗೆ ಹಿರೇಕೆರೂರು ತಾಲೂಕಿನ ಬಲ್ಡೆಕಟ್ಟೆ ಗ್ರಾಮದಲ್ಲಿ ಮನೆ ಮಾಡಿಕೊಂಡು ವಾಸವಾಗಿದ್ದಳು. ಆದರೂ ಸೋಮಪ್ಪ ಮತ್ತು ಗಂಗಮ್ಮನ ನಡುವೆ ಅನೈತಿಕ ಸಂಬಂಧ ಮುಂದುವರೆದಿತ್ತು. ಮೊನ್ನೆ ರಾತ್ರಿ ಸೋಮಪ್ಪಗೆ ಅಂಟಿ ಗಂಗಮ್ಮ ಚಿಕನ್ ಊಟಕ್ಕೆ ಆಹ್ವಾನ ಕೊಟ್ಟಿದ್ದಳು. ರಾತ್ರಿ ಬೆಳಗಾಗುವುದರಲ್ಲಿ ಇಬ್ಬರ ನಡುವೆ ಗಲಾಟೆ ಆಗಿತ್ತು.

ಸೋಮಪ್ಪನ ಜೊತೆ ಸ್ನೇಹಿತ ಹನುಮಂತಪ್ಪ ಕೂಡಾ ಹೋಗಿದ್ದ. ಈ ಇಬ್ಬರಿಗೂ ಗಂಗಮ್ಮ ಮತ್ತು ಆತನ ಮಗ ಸುದೀಪ್ ಹಾಗೂ ನಾಗರಾಜ್ – ರಮೇಶ್ ಎಂಬಿಬ್ಬರು ಸೇರಿ ಸಮೀಪದ ಅರಣ್ಯಕ್ಕೆ ಕರೆದೊಯ್ದು, ಅಲ್ಲಿಯೇ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಇನ್ನೇನು ಸೋಮಪ್ಪನ ಕಥೆ ಮುಗಿಯಿತು ಎನ್ನುವುದು ಗೊತ್ತಾಗುತ್ತಿದ್ದಂತೆ ನಿನ್ನೆ ಬೆಳಗ್ಗೆ ಸೋಮಪ್ಪ ಮತ್ತು ಹನುಮಂತಪ್ಪನನ್ನು ಗ್ರಾಮಕ್ಕೆ ಬಿಟ್ಟು ಹೋಗಿದ್ದರು. ಈ ದಾಳಿಯಲ್ಲಿ ಸೋಮಪ್ಪ ಮೃತಪಟ್ಟಿದ್ದಾನೆ. ಸದ್ಯ ಹಲ್ಲೆ ಮಾಡಿದ ಆಂಟಿ ಮತ್ತು ಇತರೆ ಮೂವರ ವಿರುದ್ದ ಶಿರಾಳಕೊಪ್ಪ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು ಆಗಿದೆ.

ಚಿಕನ್ ಊಟಕ್ಕೆ ಕರೆದ ಅಂಟಿಯು ತನ್ನ ಮಗ ಮತ್ತು ಇತರೆ ಇಬ್ಬರ ಜೊತೆ ಸೇರಿಕೊಂಡು ಸೋಮಪ್ಪನ ಕಥೆ ಮುಗಿಸಿದ್ದಾಳೆ. ತಾಯಿ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡ ಸೋಮಪ್ಪನ ಕಥೆ ಮುಗಿಸುವುದಕ್ಕೆ ಮಗ ಸುದೀಪ್ ಹವಣಿಸುತ್ತಿದ್ದ. ಕೊನೆಗೂ ಸಮಯಕ್ಕೆ ಕಾದು ಕುಳಿತಿದ್ದ ಸುದೀಪ್ ಗೆ ಮೊನ್ನೆ ಅವಕಾಶ ಸಿಕ್ಕಿದೆ. ಮಹಿಳೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಎಂಬ ಆರೋಪ ಹೊತ್ತಿರುವ ಇನಾಮ್ ಮುತ್ತಳ್ಳಿ ಗ್ರಾಮದ ಯುವಕ ಸೋಮಪ್ಪನನ್ನ ಕರೆಯಿಸಿ ಥಳಿಸಿ ಆತನ ಹತ್ಯೆಗೆ ಕಾರಣರಾದ ರಮೇಶ್ ಮತ್ತು ನಾಗರಾಜ್ ಎಂಬ ಇಬ್ಬರನ್ನೂ ಶಿರಾಳಕೊಪ್ಪ ಪೊಲೀಸರು ಬಂಧಿಸಿದ್ದಾರೆ.

ಸೋಮಪ್ಪನ ಬಳಿ ಮೊಬೈಲ್ ಇಲ್ಲದ ಕಾರಣ ಸ್ನೇಹಿತ ಹನುಮಂತಪ್ಪನಿಗೆ ಕರೆ ಮಾಡಿದ ಗಂಗಮ್ಮ ಚಿಕನ್ ಊಟ ತಯಾರಿಸಿದ್ದೇನೆ, ಬಂದು ಊಟ ಮಾಡಿಕೊಂಡು ಹೋಗಿ ಎಂದು ಕರೆ ಮಾಡಿದ್ದಳು. ಅದರಂತೆ ಹನುಮಂತಪ್ಪ ಮತ್ತು ಸೋಮಪ್ಪ ಬುಲ್ಡಿಕಟ್ಟೆ ಗ್ರಾಮಕ್ಕೆ ಹೋದಾಗ ರಮೇಶ್, ಸುದೀಪ್ ಮತ್ತು ನಾಗರಾಜ್ ಪ್ಲ್ಯಾನ್ ಮಾಡಿ ಇಬ್ಬರ ಮೇಲೆ ದಾಳಿ ಮಾಡಿದ್ದಾರೆ. ಕಬ್ಬಿಣದ ಸಲಾಕೆಯಿಂದ ದಾಳಿ ನಡೆಸಿರುವ ಬಗ್ಗೆ ಶಂಕೆ ವ್ಯಕ್ತಪಡಿಸಲಾಗಿದೆ.

ಬುಲ್ಡಿಕಟ್ಟೆಯ ಗ್ರಾಮದಿಂದ ದೂರದಲ್ಲಿರುವ ಕಾಡಿನಲ್ಲಿ ರಮೇಶ್, ಗಂಗಮ್ಮನ ಮಗ ಸಂದೀಪ್ ಮತ್ತು ನಾಗರಾಜ್ ಹನುಮಂತಪ್ಪ ಮತ್ತು ಸೋಮಪ್ಪರಿಗೆ ಬಟ್ಟೆ ಬಿಚ್ಚಿ ಥಳಿಸಿದ್ದಾರೆ. ಹೊಡೆತ ತಾಳಲಾರದೆ ಸೋಮಪ್ಪ ಅಸುನೀಗಿದ್ದಾನೆ. ಸದ್ಯ ಹನುಮಂತಪ್ಪ ಮೆಗ್ಗಾನ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ತಾಯಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ ಹಿನ್ನೆಲೆಯಲ್ಲಿ ಸೋಮಪ್ಪನನ್ನು ಮಗ ಮತ್ತು ಆತನ ಸ್ನೇಹಿತರು ಥಳಿಸಿದ್ದರು.

ಹನುಮಂತಪ್ಪ ಯಾಕೆ ಹೊಡೆಯುತ್ತಿದ್ದೀರಾ ಎಂದು ಕೇಳಿದ್ದಕ್ಕೆ ಆತನನ್ನೂ ಥಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ರಮೇಶ್ ಮತ್ತು ನಾಗರಾಜ್ ಸೆರೆಯಾಗಿದ್ದಾರೆ.‌ ಸುದೀಪ್ ಕಣ್ಮರೆಯಾಗಿದ್ದಾನೆ. ಸಂದೀಪ್ ಗಾಗಿ ಬಲೆ ಬೀಸಲಾಗಿದೆ. ಮರಣೋತ್ತರ ಪರೀಕ್ಷೆ ಮುಗಿಸಿಕೊಂಡು ಸೋಮಪ್ಪನ ಮೃತದೇಹವನ್ನ ಇನಾಮ್ ಮುತ್ತಳ್ಳಿ ಗ್ರಾಮಕ್ಕೆ ತೆಗೆದುಕೊಂಡು ಹೋಗಿದ್ದಾರೆ.‌ ಮೃತನ ಕುಟುಂಬಸ್ಥರು ಆರೋಪಿಗಳನ್ನ ಬಂಧಿಸುವ ತನಕ ಅಂತ್ಯಕ್ರಿಯೆ ಮಾಡುವುದಿಲ್ಲವೆಂದು ಪಟ್ಟು ಹಿಡಿದಿದ್ದರು. ಪೊಲೀಸರು ಈಗಾಗಲೇ ಇಬ್ಬರ ಬಂಧನವಾಗಿದೆ ಎಂದು ಸಮಜಾಯಿಷಿ ಕೊಟ್ಟ ಬಳಿಕ ಮೃತನ ಅಂತ್ಯಕ್ರಿಯೆ ಮಾಡಿದ್ದಾರೆ.

ವಯಸ್ಸಿಗೆ ಬಂದ ಮಗ ಇದ್ದರೂ ತಾಯಿ ಮಾತ್ರ 30ರ ವಯಸ್ಸಿನ ವಿವಾಹಿತನ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದೇ ದೊಡ್ಡ ಯಡವಟ್ಟು ಆಗಿತ್ತು. ತಾಯಿ ಜೊತೆ ಅನೈತಿಕ ಸಂಬಂಧ ಹೊಂದಿದ್ದ ವ್ಯಕ್ತಿಯ ಕಥೆ ಮುಗಿಸುವ ಮೂಲಕ ಮಗ ಮತ್ತು ಆತನ ಸ್ನೇಹಿತರು ಸೇಡು ತೀರಿಸಿಕೊಂಡಿದ್ದಾರೆ.

ವರದಿ: ಬಸವರಾಜ್ ಯರಗಣವಿ, ಟವಿ9, ಶಿವಮೊಗ್ಗ

ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ
ಸಿದ್ದರಾಮಯ್ಯ ಬಹಳ ಸಲ ನನ್ನ ಮನೆಗೆ ಬಂದಿದ್ದಾರೆ: ಸತೀಶ್ ಜಾರಕಿಹೊಳಿ
ಸಿದ್ದರಾಮಯ್ಯ ಬಹಳ ಸಲ ನನ್ನ ಮನೆಗೆ ಬಂದಿದ್ದಾರೆ: ಸತೀಶ್ ಜಾರಕಿಹೊಳಿ