ವಿಜಯಪುರ, ಡಿಸೆಂಬರ್ 03: ವಿಜಯಪುರ (Vijayapura) ನಗರದ ಓರ್ವ ಯುವತಿ ಅತ್ಯಂತ ಚಿಕ್ಕ ವಯಸ್ಸಿನಲ್ಲೆ ಪೈಲಟ್ (Pilot) ಆಗಿದ್ದಾರೆ. ಈ ಮೂಲಕ ಕರ್ನಾಟಕದ ಹಿರಿಮೆಯನ್ನು ಹೆಚ್ಚಿಸಿದ್ದಾರೆ. ಉದ್ಯಮಿ ಅಮೀನ್ ಹುಲ್ಲೂರ್ ಅವರ ಪುತ್ರಿ 18 ವರ್ಷದ ಸಮೈರಾ ಹುಲ್ಲೂರ್ (Samaira Hullur) ಇದೀಗ ಕಮರ್ಷಿಯಲ್ ಪೈಲಟ್ ಲೈಸೆನ್ಸ್ (ಸಿಪಿಎಲ್) ಪಡೆಯುವ ಮೂಲಕ ಸಾಧನೆ ಮಾಡಿದ್ದಾರೆ. ಕಮರ್ಷಿಯಲ್ ಪೈಲಟ್ ಲೈಸೆನ್ಸ್ ಪಡೆದ ಭಾರತದ ಅತ್ಯಂತ ಕಿರಿಯ ಪೈಲಟ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ರಾಜ್ಯದ ಕೀರ್ತಿ ಪತಾಕೆಯನ್ನು ಹಾರಿಸಿದ್ದಾರೆ.
ಸಮೀರಾ ಅವರು ಆರು ತಿಂಗಳ ಕಾಲ ವಾಯುಯಾನ ತರಬೇತಿಯನ್ನು ವಿನೋದ್ ಯಾದವ್ ಏವಿಯೇಷನ್ ಅಕಾಡೆಮಿಯಲ್ಲಿ ಪಡೆದರು. ಅಕಾಡೆಮಿ ಸಂಸ್ಥಾಪಕರಾದ ವಿನೋದ್ ಯಾದವ್ ಮತ್ತು ಕ್ಯಾಪ್ಟನ್ ತಪೇಶ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ಮೊದಲ ಪ್ರಯತ್ನದಲ್ಲೇ ಎಲ್ಲ ಸಿಪಿಎಲ್ ಪರೀಕ್ಷೆಗಳಲ್ಲಿ ಉತ್ತೀರ್ಣರಾದರು.
“ತರಬೇತಿ ಕಠಿಣವಾಗಿತ್ತು. ಆದರೆ, ಭೋದಕರ ನಿರಂತರ ಬೆಂಬಲದಿಂದ ಅದು ಸುಲಭವಾಯಿತು. ನನ್ನ ಸಾಧನೆಯ ಎಲ್ಲಾ ಶ್ರೇಯಸ್ಸು ಕ್ಯಾಪ್ಟನ್ ತಪೇಶ್ ಕುಮಾರ್ ಮತ್ತು ವಿನೋದ್ ಯಾದವ್ ಅವರಿಗೆ ಸಲ್ಲುತ್ತದೆ” ಎಂದು ಸಮೈರಾ ಹೇಳಿದರು.
ಇದನ್ನೂ ಓದಿ: ದೆಹಲಿಯಲ್ಲಿ ಐಐಟಿಎಫ್ ಮೇಳ: ಮನ ಸೆಳೆಯುತ್ತಿರುವ ವಿಜಯಪುರದ ಬಂಜಾರ ಕಸೂತಿ
ವಿಮಾನ ಚಾಲನೆ ಒಳಗೊಂಡಂತೆ ಆರು ಕಡ್ಡಾಯ ಕೋರ್ಸ್‌ಗಳಿಗೆ ಸೇರಿಕೊಂಡೆ. ಲಿಖಿತ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ಮಾಡಿದ ನಂತರ ಮಹಾರಾಷ್ಟ್ರದ ಬಾರಾಮತಿಯಲ್ಲಿರುವ ಕಾರ್ವರ್ ಏವಿಯೇಷನ್ ಅಕಾಡೆಮಿಯಲ್ಲಿ ಏಳು ತಿಂಗಳ ವಿಮಾನ ತರಬೇತಿಯನ್ನು ಪಡದೆ. ಇಲ್ಲಿ, ಸಮೈರಾ ಹುಲ್ಲೂರ ಅವರು ವಾಯುಯಾನದಲ್ಲಿನ ಅನೇಕ ಸವಾಲುಗಳನ್ನು ಎದುರಿಸಿದೆ. ಕಾರ್ವರ್ ಏವಿಯೇಷನ್ ಅಕಾಡೆಮಿಯಲ್ಲಿ ತಾಂತ್ರಿಕ ಪರಿಣತಿಯನ್ನು ಪಡದೆ ಎಂದರು.
ನನ್ನ ಸಾಧನೆಗೆ ಸ್ಫೂರ್ತಿ ಕ್ಯಾಪ್ಟನ್ ತಪೇಶ್ ಕುಮಾರ್. ತಮ್ಮ 25ನೇ ವರ್ಷ ವಯಸ್ಸಿನಲ್ಲೇ ಪೈಲಟ್ ಆಗುವ ಮೂಲಕ ಸಾಧನೆ ಮಾಡಿದ್ದರು ಎಂದು ತಿಳಿಸಿದರು. “ಈಗ, ನಾನು ದೇಶದ ಅತ್ಯಂತ ಕಿರಿಯ ಕಮರ್ಷಿಯಲ್ ಪೈಲಟ್” ಎಂದು ಹೇಳಿದರು.
ನಮ್ಮ ಬಸವನಾಡು ಮತ್ತು ರಾಜ್ಯದ ಗೌರವವನ್ನು ರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿಸಿದ ದೇಶದ ಅತಿ ಕಿರಿಯ ವಯಸ್ಸಿನ ಪೈಲಟ್ ಕು|| ಸಮೈರಾ ಹುಲ್ಲೂರರಿಗೆ ಹಾರ್ದಿಕ ಅಭಿನಂದನೆಗಳು. ಕೇವಲ 18ನೇ ವಯಸ್ಸಿನಲ್ಲಿ ಇಂತಹ ಅಸಾಧಾರಣ ಸಾಧನೆ ಮಾಡುವ ಮೂಲಕ ಲಕ್ಷಾಂತರ ಯುವಕ-ಯುವತಿಯರಿಗೆ ಸ್ಫೂರ್ತಿಯಾಗಿರುವ ವಿಜಯಪುರದ ಈ ಯುವ ಪ್ರತಿಭೆಯ ಭವಿಷ್ಯ ಉಜ್ವಲವಾಗಿರಲಿ ಎಂದು… pic.twitter.com/a4No2jDOjH
— M B Patil (@MBPatil) December 2, 2024
“ನಮ್ಮ ಬಸವನಾಡು ಮತ್ತು ರಾಜ್ಯದ ಗೌರವವನ್ನು ರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿಸಿದ ದೇಶದ ಅತಿ ಕಿರಿಯ ವಯಸ್ಸಿನ ಪೈಲಟ್ ಸಮೈರಾ ಹುಲ್ಲೂರರಿಗೆ ಹಾರ್ದಿಕ ಅಭಿನಂದನೆಗಳು. ಕೇವಲ 18ನೇ ವಯಸ್ಸಿನಲ್ಲಿ ಇಂತಹ ಅಸಾಧಾರಣ ಸಾಧನೆ ಮಾಡುವ ಮೂಲಕ ಲಕ್ಷಾಂತರ ಯುವಕ-ಯುವತಿಯರಿಗೆ ಸ್ಫೂರ್ತಿಯಾಗಿರುವ ವಿಜಯಪುರದ ಈ ಯುವ ಪ್ರತಿಭೆಯ ಭವಿಷ್ಯ ಉಜ್ವಲವಾಗಿರಲಿ ಅಂತ ಹಾರೈಸುತ್ತೇನೆ” ಎಂದು ಟ್ವಿಟ್ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:48 am, Tue, 3 December 24