ವಿಜಯಪುರ: ಮುಳ್ಳಿನ ಕಂಟಿಯಲ್ಲಿ ಹೆಣ್ಣು ಮಗು ಪತ್ತೆ; ಮಗುವಿನ ತಾಯಿಯನ್ನು ಪತ್ತೆ ಹಚ್ಚಲು ಮುಂದಾದ ಪೊಲೀಸ್​​​

| Updated By: ವಿವೇಕ ಬಿರಾದಾರ

Updated on: Jun 26, 2022 | 10:34 PM

ಜನಿಸಿದ ಕೂಡಲೇ ಹೆಣ್ಣುಮಗುವನ್ನು ಮುಳ್ಳಿನ ಕಂಟಿಯಲ್ಲಿ ಬಿಸಾಕಿ ಹೋಗಿರುವ ಘಟನೆ ಜಿಲ್ಲೆಯ ಇಂಡಿ ಚಡಚಣ ತಾಲೂಕಿನ ಹಲಸಂಗಿ ಗ್ರಾಮದ ಹೊರ ಭಾಗದಲ್ಲಿ ನಡೆದಿದೆ.

ವಿಜಯಪುರ: ಮುಳ್ಳಿನ ಕಂಟಿಯಲ್ಲಿ ಹೆಣ್ಣು ಮಗು ಪತ್ತೆ; ಮಗುವಿನ ತಾಯಿಯನ್ನು ಪತ್ತೆ ಹಚ್ಚಲು ಮುಂದಾದ ಪೊಲೀಸ್​​​
ಮುಳ್ಳು ಕಂಟಿಯಲ್ಲಿ ನವಜಾತ ಶಿಶು ಪತ್ತೆ
Follow us on

ವಿಜಯಪುರ: ಜನಿಸಿದ ಕೂಡಲೇ ಹೆಣ್ಣುಮಗುವನ್ನು (Baby) ಮುಳ್ಳಿನ ಕಂಟಿಯಲ್ಲಿ ಬಿಸಾಕಿ ಹೋಗಿರುವ ಘಟನೆ ಜಿಲ್ಲೆಯ ಇಂಡಿ (Indi) ಚಡಚಣ (Chadachan) ತಾಲೂಕಿನ ಹಲಸಂಗಿ ಗ್ರಾಮದ ಹೊರ ಭಾಗದಲ್ಲಿ ನಡೆದಿದೆ. ಮುಳ್ಳಿನ ಕಂಟಿಯಲ್ಲಿ ಬಿದ್ದ ಮಗುವನ್ನು ಸಿದ್ದರಾಮ ಕೊಟ್ಟಲಗಿ ಹಾಗೂ ಗ್ರಾಮದ ಜನರು ಕಂಡು ರಕ್ಷಣೆ ಮಾಡಿದ್ದಾರೆ. ಸದ್ಯ ಮಗುವಿಗೆ ಹಲಸಂಗಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ (Primary health center) ಚಿಕಿತ್ಸೆ ನೀಡಲಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ‌ ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ. ಮಗು ಅನೈತಿಕ ಸಂಬಂಧದಿಂದ ಹುಟ್ಟಿರೋ ಶಂಕೆ ಅಥವಾ ಹೆಣ್ಣು ಮಗುವೆಂಬ ಕಾರಣಕ್ಕಾಗಿ ಮಗುವನ್ನು ತಾಯಿ ಎಸೆದಿರೋ ಶಂಕೆ ವ್ಯಕ್ತವಾಗಿದೆ. ಝಳಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಮಗುವಿನ ತಾಯಿಯನ್ನು ಪತ್ತೆ ಹಚ್ಚಲು ಪೊಲೀಸರು ಮುಂದಾಗಿದ್ಧಾರೆ.