ಜಾನುವಾರು ಉಣ್ಣೆಗೆ ಔಷಧಿ ಹಚ್ಚೋವಾಗ ವಿಷ ಬಾಯಲ್ಲಿ ಹೋಗಿ ಆಸ್ಪತ್ರೆ ಸೇರಿದ್ದ ಯುವಕ ಸಾವು; ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಆಕ್ರೋಶ

| Updated By: ಆಯೇಷಾ ಬಾನು

Updated on: Jul 01, 2022 | 5:34 PM

ನಮ್ಮ ಮಗಾ ವಿಷ ಸೇವಿಸಿಲ್ಲಾ. ಜಾನುವಾರುಗಳ ಉಣ್ಣೆಗೆ ಔಷಧಿ ಹಚ್ಚೋವಾಗ ವಿಷ ಬಾಯಲ್ಲಿ ಹೋಗಿತ್ತು. ಜೂನ್ 27 ರಂದು ಜಿಲ್ಲಾಸ್ಪತ್ರೆಗೆ ದಾಖಲು ಮಾಡಿದ್ದೇವೆ. ಇಂದು ವೈದ್ಯರು ಇಂಜೆಕ್ಷನ್ ಮಾಡಿದ ಕೂಡಲೇ ಉಮೇಶ ಮೃತಪಟ್ಟಿದ್ದಾನೆ.

ಜಾನುವಾರು ಉಣ್ಣೆಗೆ ಔಷಧಿ ಹಚ್ಚೋವಾಗ ವಿಷ ಬಾಯಲ್ಲಿ ಹೋಗಿ ಆಸ್ಪತ್ರೆ ಸೇರಿದ್ದ ಯುವಕ ಸಾವು; ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಆಕ್ರೋಶ
ಸಾಂದರ್ಭಿಕ ಚಿತ್ರ
Follow us on

ವಿಜಯಪುರ: ವಿಷ ಸೇವಿಸಿ(Poison) ಆಸ್ಪತ್ರೆಗೆ ದಾಖಲಾಗಿದ್ದ ಯುವಕ ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟ ಘಟನೆ ನಡೆದಿದೆ. ಉಮೇಶ ನಿಂಗಪ್ಪ ಹುಲಸೂರ (24) ಮೃತ ಯುವಕ. ಆದ್ರೆ ವೈದ್ಯರ ಹಾಗೂ ಸಿಬ್ಬಂದಿ ನಿರ್ಲಕ್ಷ್ಯವೇ(Doctors Negligence) ಸಾವಿಗೆ ಕಾರಣವೆಂದು ಮೃತ ಯುವಕನ ಪೋಷಕರು ಆರೋಪ ಮಾಡಿದ್ದಾರೆ. ವೈದ್ಯರು ಮತ್ತು ಪೋಷಕರ ನಡುವೆ ವಾಗ್ವಾದ ನಡೆದಿದೆ.

ಬಸವಬಾಗೇವಾಡಿ ತಾಲೂಕಿನ ಹುಲಿಬೆಂಚಿ ಗ್ರಾಮದ ನಿವಾಸಿ ಮೃತ ಯುವಕ ಉಮೇಶ ನಿಂಗಪ್ಪ ಹುಲಸೂರ, ವಿಷ ಸೇವಿಸಿದ ಕಾರಣ ಕಳೆದ ಜೂನ್ 27 ರಂದು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಉಮೇಶ್ ಇಂದು ಮೃತಪಟ್ಟಿದ್ದು ವೈದ್ಯರ ನಿರ್ಲಕ್ಷ್ಯವೇ ಘಟನೆಗೆ ಕಾರಣ ಎಂದು ಪೋಷಕರು ಆರೋಪಿಸಿದ್ದಾರೆ. ವೈದ್ಯರು ಮತ್ತು ಮೃತನ ಸಂಬಂಧಿಗಳ ನಡುವೆ ವಾಗ್ವಾದ ನಡೆದಿದೆ. ಇದನ್ನೂ ಓದಿ: ವ್ಲಾಡಿಮಿರ್ ಪುಟಿನ್ ಜತೆ ಮೋದಿ ಮಾತು; ರಷ್ಯಾ-ಉಕ್ರೇನ್ ಯುದ್ಧದ ಬಗ್ಗೆ ಭಾರತದ ನಿಲುವು ಪುನರುಚ್ಚರಿಸಿದ ಪ್ರಧಾನಿ

ನಮ್ಮ ಮಗಾ ವಿಷ ಸೇವಿಸಿಲ್ಲಾ. ಜಾನುವಾರುಗಳ ಉಣ್ಣೆಗೆ ಔಷಧಿ ಹಚ್ಚೋವಾಗ ವಿಷ ಬಾಯಲ್ಲಿ ಹೋಗಿತ್ತು. ಜೂನ್ 27 ರಂದು ಜಿಲ್ಲಾಸ್ಪತ್ರೆಗೆ ದಾಖಲು ಮಾಡಿದ್ದೇವೆ. ಇಂದು ವೈದ್ಯರು ಇಂಜೆಕ್ಷನ್ ಮಾಡಿದ ಕೂಡಲೇ ಉಮೇಶ ಮೃತಪಟ್ಟಿದ್ದಾನೆ. ಇದಕ್ಕೆ ವೈದ್ಯರೇ ಕಾರಣವೆಂದು ಪೋಷಕರು ಆರೋಪ ಮಾಡಿದ್ದಾರೆ. ಆದ್ರೆ ಪೋಷಕರ ಆರೋಪವನ್ನು ಜಿಲ್ಲಾಸ್ಪತ್ರೆ ಅಲ್ಲಗಳೆದಿದ್ದಾರೆ. ಇಂಥ ಪ್ರಕರಣಗಳಲ್ಲಿ ರೋಗಿ ಚಿಕಿತ್ಸೆ ವೇಳೆ ನಡೆದಾಡಲು ಆರಂಭಿಸಿದಾಗಲೂ ದೇಹದಲ್ಲಿ ಉಳಿದ ವಿಷವೇರಿ ಮೃತಪಡುವ ಸಾಧ್ಯತೆ ಇದೆ. ಮರಣೋತ್ತರ ಪರೀಕ್ಷೆಯಲ್ಲಿ ಸಾವಿಗೆ ನಿಖರ ಮಾಹಿತಿ ಲಭ್ಯವಾಗಲಿದೆ. ಘಟನೆಯ ಕುರಿತು ತನಿಖೆ ನಡೆಸಲಾಗುತ್ತದೆ. ಅದಕ್ಕಾಗಿ ತನಿಖಾ ತಂಡ‌ ರಚನೆ ಮಾಡಲಾಗುತ್ತದೆ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ ಎಸ್‌.ಎಲ್. ಲಕ್ಕಣ್ಣವರ ಮಾಹಿತಿ ನೀಡಿದ್ದಾರೆ. ಜಿಲ್ಲಾಸ್ಪತ್ರೆಯಲ್ಲಿ ಪೊಲೀಸರ ನಿಯೋಜನೆ ಮಾಡಲಾಗಿದ್ದು ಬಿಗಿ ಭದ್ರತೆ ಕೈಗೊಳ್ಳಲಾಗಿದೆ.