ಆಪರೇಷನ್ ಕಮಲ ಎಂಬುದು ಪ್ರಜಾಸತ್ತಾತ್ಮಕ ವಿರೋಧಿ ಕೆಲಸ: ಬಿಜೆಪಿ ವಿರುದ್ಧ ಎಂ.ಬಿ. ಪಾಟೀಲ್ ಆಕ್ರೋಶ

| Updated By: ವಿವೇಕ ಬಿರಾದಾರ

Updated on: Jun 25, 2022 | 3:53 PM

ಆಪರೇಷನ್ ಕಮಲ ಎಂಬುದು ಪ್ರಜಾಸತ್ತಾತ್ಮಕ ವಿರೋಧಿ ಕೆಲಸವಾಗಿದೆ ಎಂದು ಜಿಲ್ಲೆಯ ಬಬಲೇಶ್ವರ ತಾಲೂಕಿನ ಸಾರವಾಡ ಗ್ರಾಮದಲ್ಲಿ ನಡೆದ ಸ್ವಾತಂತ್ರ್ಯ ಅಮೃತ ಮಹೋತ್ಸವದ ಭಾರತ ಮಾತೆಗೆ ಕನ್ನಡದ ಆರತಿ ಕಾರ್ಯಕ್ರಮದಲ್ಲಿ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್ ಹೇಳಿದ್ದಾರೆ.

ಆಪರೇಷನ್ ಕಮಲ ಎಂಬುದು ಪ್ರಜಾಸತ್ತಾತ್ಮಕ ವಿರೋಧಿ ಕೆಲಸ: ಬಿಜೆಪಿ ವಿರುದ್ಧ ಎಂ.ಬಿ. ಪಾಟೀಲ್ ಆಕ್ರೋಶ
ಎಮ್ ಬಿ ಪಾಟೀಲ, ಕಾಂಗ್ರೆಸ್ ಶಾಸಕ
Follow us on

ವಿಜಯಪುರ: ಆಪರೇಷನ್ ಕಮಲ ಎಂಬುದು ಪ್ರಜಾಸತ್ತಾತ್ಮಕ ವಿರೋಧಿ ಕೆಲಸವಾಗಿದೆ ಎಂದು ಜಿಲ್ಲೆಯ ಬಬಲೇಶ್ವರ ತಾಲೂಕಿನ ಸಾರವಾಡ ಗ್ರಾಮದಲ್ಲಿ ನಡೆದ ಸ್ವಾತಂತ್ರ್ಯ ಅಮೃತ ಮಹೋತ್ಸವದ ಭಾರತ ಮಾತೆಗೆ ಕನ್ನಡದ ಆರತಿ ಕಾರ್ಯಕ್ರಮದಲ್ಲಿ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್ ಹೇಳಿದ್ದಾರೆ. ಶಾಸಕರನ್ನು ಖರೀದಿಸಿ ರಾಜೀನಾಮೆ ಕೊಡಿಸಿ ಚುನಾವಣೆ ನಿಲ್ಲಿಸಿ ಅವರ ಸಹಾಯದಿಂದ ಸರ್ಕಾರ ರಚಿಸುವುದು ಬಿಜೆಪಿಯ ಕೆಲಸವಾಗಿದೆ. ಕರ್ನಾಟಕದ ಬಳಿಕ ಈಗ ಮಹಾರಾಷ್ಟ್ರದಲ್ಲಿ ನಡೆಯುತ್ತಿದೆ. ಬಿಜೆಪಿ ತಾನು ಮಾಡಿದೆಲ್ಲ ನಡೆಯುತ್ತೆ ಎಂದು ತಿಳಿದುಕೊಂಡಿದೆ. ಎಲ್ಲಾ ಸಮಯದಲ್ಲಿ ಜನರನ್ನು ಮೂರ್ಖರನ್ನಾಗಿ ಮಾಡಲಾಗಲ್ಲ. ಬಿಜೆಪಿಗೆ ಜನರು ತಕ್ಕ ಪಾಠ ಕಲಿಸಲಿದ್ದಾರೆ ಎಂದರು.

ಇದು ಪ್ರಜಾಸತ್ತಾತ್ಮಕ ವಿರೋಧದ ಕೆಲಸವಾಗಿದೆ. ಚುನಾವಣೆಯಲ್ಲಿ ನೇರವಾಗಿ ಆಯ್ಕೆಯಾಗಿ ಸರ್ಕಾರ ರಚಿಸಲಿ. ಇಂಥದೇ ಸರ್ಕಾರ ಕರ್ನಾಟಕದಲ್ಲಿ‌ ರಚನೆಯಾಗಿದೆ. 17 ಜನ ಕಾಂಗ್ರೆಸ್ ಶಾಸಕರನ್ನು ಆಪರೇಶನ್ ಕಮಲದ ಮೂಲಕ ತೆಗೆದುಕೊಂಡು 40% ಕಮಿಷನ್ ಸರ್ಕಾರವನ್ನು ರಚನೆ ಮಾಡಿದ್ದಾರೆ. ಇದನ್ನ ನಾನು ಹೇಳುತ್ತಿಲ್ಲ ಗುತ್ತಿಗೆದಾರರ ಸಂಘ ಹೇಳುತ್ತಿದೆ ಎಂದರು.

ಇದನ್ನು ಓದಿ: ನದಿಯಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದ ತನ್ನ ಮಗುವನ್ನು ಕಾಪಾಡಿದ ಆನೆ

ಅಭಿವೃದ್ಧಿ ಶೂನ್ಯವಾಗಿ ದಿಕ್ಕು ದೆಸೆಯಿಲ್ಲದೆ ಸರ್ಕಾರ ನಡೆಯುತ್ತಿದೆ ಇದಕ್ಕೆ ಜನರು ಮತದಾನದ ಮೂಲಕ ಇತಿಶ್ರೀ ಹಾಡಲಿದ್ದಾರೆ. ಮಹಾರಾಷ್ಟ್ರ ಬೆಳವಣಿಗೆ ಕುರಿತು ನಾವೇನು ರಾಜಕೀಯ ಸನ್ಯಾಸಿಗಳಲ್ಲ.ಹಿಂಬಾಗಿಲಿನಿಂದ ಪ್ರಜಾತಂತ್ರವನ್ನ ಕಗ್ಗೊಲೆ ಮಾಡಿ ಬರುವ ಬದಲಾಗಿ, ಜನರಿಂದ ನೇರವಾಗಿ ಆಯ್ಕೆಯಾಗಿ ಬನ್ನಿ. ಈ ರೀತಿ ಅಧಿಕಾರಕ್ಕೆ ಬರುವುದು ಸರಿಯಾ..? ನಿಮ್ಮ ಸನ್ಯಾಸತ್ವಾನಾ…? ಎಂದು ಪ್ರಶ್ನಸಿದ್ದಾರೆ.

ಉತ್ತರ ಕರ್ನಾಟಕ‌ ಪ್ರತ್ಯೇಕ ರಾಜ್ಯ ರಚನೆ ಸಚಿವ ಉಮೇಶ ಕತ್ತಿ ಹೇಳಿಕೆ ವಿಚಾರವಾಗಿ ಮಾತನಾಡಿದ ಎಂ ಬಿ ಪಾಟೀಲ್​​ ನನಗೆ ಉಮೇಶ ಕತ್ತಿ ಹೇಳಿಕೆ ಬಗ್ಗೆ ಗೊತ್ತಿಲ್ಲ. ನಮ್ಮ ದೇಶ ನಮ್ಮ ರಾಜ್ಯ ಅಖಂಡ ಭಾರತ ಅಖಂಡ ಕರ್ನಾಟಕ. ನಮ್ಮ ಹಿರಿಯರ ತ್ಯಾಗ ಬಲಿದಾನ ಎಲ್ಲವೂ ಇದೆ. ಉತ್ತರ ಕರ್ನಾಟಕ ಸಮಗ್ರ ಅಭಿವೃದ್ಧಿ ಮಾತಲ್ಲಿ ಎರಡು ಮಾತಿಲ್ಲ. ಆದರೆ ಪ್ರತ್ಯೆಕ ರಾಜ್ಯ ಎನ್ನುವುದು ಸೂಕ್ತ ವಿಚಾರವಲ್ಲ. ಹಿಂದೊಮ್ಮೆ ಹೇಳಿದ್ದರು, ಈಗಿನ ಹೇಳಿಕೆ ಬಗ್ಗೆ ಗೊತ್ತಿಲ್ಲ ಎಂದರು.

ಇದನ್ನು ಓದಿ: ಗರ್ಭಪಾತ ಮಾಡಿ ಶಿಶುಗಳ ದೇಹವನ್ನು ಹಳ್ಳಕ್ಕೆ ಎಸೆದಿದ್ದ ಮೂಡಲಗಿ ವೆಂಕಟೇಶ್ ಹೆರಿಗೆ ಆಸ್ಪತ್ರೆಯನ್ನು ಸೀಜ್ ಮಾಡಿದ ಬೆಳಗಾವಿ ಡಿಹೆಚ್ಒ

ಈ ಕಾರ್ಯಕ್ರಮದಲ್ಲಿ ಶಾಸಕ ಎಂ.ಬಿ. ಪಾಟೀಲ್​​ ಬೆಂಬಲಿಗ  ಎಂ.ಬಿ.ಪಾಟೀಲ್ ಮುಂದಿನ ಸಿಎಂ ಎಂದು ಘೋಷಣೆ ಕೂಗಿದ್ದಾರೆ.  ನಿನ್ನೆ (ಜೂನ್​​ 24) ರಂದು  ಸಿದ್ದರಾಮಯ್ಯ, ಇಂದು ಎಂಬಿಪಿ (ಜೂನ್​​ 25) ಮುಂದಿನ ಸಿಎಂ ಘೋಷಣೆ ಕೂಗಿದ್ದಾರೆ. ಘೋಷಣೆ ಕೂಗಿದ ಬೆಂಬಲಿಗನಿಗೆ ಹಾಗೆ ಕೂಗದಂತೆ ಎಂ.ಬಿ.ಪಾಟೀಲ್  ಕೈಸನ್ನೆ ಮೂಲಕ ಸೂಚನೆ ನೀಡಿದರು. ಬಳಿಕ ಘೋಷಣೆ ಕೂಗದೇ ಅಭಿಮಾನಿ ಸುಮ್ಮನಾಗಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.