ವಿಜಯಪುರ: ಸಾಲ ಬಾಧೆ ತಾಳಲಾರದೆ ರೈತ ಮಹಿಳೆ ಆತ್ಮಹತ್ಯೆ

| Updated By: ಕಿರಣ್ ಹನುಮಂತ್​ ಮಾದಾರ್

Updated on: May 12, 2024 | 7:24 PM

ರೈತರ ಗೋಳು ಕೇಳುವವರಾರು ಎಂಬಂತಾಗಿದೆ. ಹೌದು, ಭೀಕರ ಬರಗಾಲಕ್ಕೆ ರೈತರು ನಲುಗಿದ್ದಾರೆ. ಅದರಂತೆ ಇಂದು (ಮೇ.12) ಬಬಲೇಶ್ವರ (Babaleshwar) ತಾಲೂಕಿನ ಅರ್ಜುಣಗಿ ಗ್ರಾಮದಲ್ಲಿ ಸಾಲ ಬಾಧೆ ತಾಳಲಾರದೇ ರೈತ ಮಹಿಳೆಯೊಬ್ಬರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ವಿಜಯಪುರ: ಸಾಲ ಬಾಧೆ ತಾಳಲಾರದೆ ರೈತ ಮಹಿಳೆ ಆತ್ಮಹತ್ಯೆ
ಮೃತ ಮಹಿಳೆ
Follow us on

ವಿಜಯಪುರ, ಮೇ.12: ಸಾಲ ಬಾಧೆ ತಾಳಲಾರದೇ ರೈತ ಮಹಿಳೆಯೊಬ್ಬರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ವಿಜಯಪುರ ಜಿಲ್ಲೆಯ ಬಬಲೇಶ್ವರ(Babaleshwar) ತಾಲೂಕಿನ ಅರ್ಜುಣಗಿ ಗ್ರಾಮದಲ್ಲಿ ನಡೆದಿದೆ. ರುಕ್ಮವ್ವ ದುಂಡಪ್ಪ ಬಾಡಿಗಿ ಆತ್ಮಹತ್ಯೆಗೆ ಶರಣಾದ ರೈತ ಮಹಿಳೆ. ಇನ್ನು ಈ ಮಹಿಳೆ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಗದ್ಯಾಳ ಗ್ರಾಮದಲ್ಲಿ ಜಮೀನು ಹೊಂದಿದ್ದರು.

ಗದ್ಯಾಳ ಪ್ರಾಥಮಿಕ ಕೃಷಿ ಸಹಕಾರಿ ಬ್ಯಾಂಕಿನಲ್ಲಿ 1 ಲಕ್ಷ,  ವಿಜಯಪುರ ಎಚ್​ಡಿಎಫ್​ಸಿ ಬ್ಯಾಂಕಿನಲ್ಲಿ 2.5 ಲಕ್ಷ,
ಬಬಲೇಶ್ವರದ ಚೈತನ್ಯ ಪೈನಾನ್ಸ್​ನಲ್ಲಿ 50‌ ಸಾವಿರ ಹಾಗೂ ಖಾಸಗಿಯಾಗಿ 6 ಲಕ್ಷ ಸಾಲ ಸೇರಿ 10 ಲಕ್ಷ ಸಾಲ ಮಾಡಿಕೊಂಡಿದ್ದರು.
ಸ್ಥಳಕ್ಕೆ ಬಬಲೇಶ್ವರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಸರ್ಕಾರದಿಂದ ಸೂಕ್ತ ಪರಿಹಾರ ನೀಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ:ಫೇಲ್ ಆದ ವಿಚಾರ ಅಪ್ಪನಿಗೆ ತಿಳಿಯುತ್ತೆ ಎಂದು ಹೆದರಿ ಆತ್ಮಹತ್ಯೆ ಮಾಡಿಕೊಂಡ ಇಂಜಿನಿಯರಿಂಗ್ ವಿದ್ಯಾರ್ಥಿ

ಸಿಡಿಲು ಬಡಿದು ಬೈಕ್ ಸವಾರ ಯುವಕ ಸಾವು

ಬಾಗಲಕೋಟೆ: ತಾಲೂಕಿನ ಹಳ್ಳೂರು ಗ್ರಾಮದ ಬಳಿ ಸಿಡಿಲು ಬಡಿದು ಬೈಕ್​ ಸವಾರ ಸಾವನ್ನಪ್ಪಿದ ಘಟನೆ ನಡೆದಿದೆ. ಬೇವೂರು ಗ್ರಾಮದ ನಿವಾಸಿ ಪ್ರಕಾಶ್ ವಗ್ಗರ್(21) ಮೃತ ರ್ದುದೈವಿ. ಮತ್ತೊಬ್ಬನಿಗೆ ಗಾಯವಾಗಿದ್ದು, ಬಾಗಲಕೋಟೆ ‌ಸರಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮೂಲತಃ ವಿಜಯಪುರ ಜಿಲ್ಲೆಯ ಗೋನಾಳ ಗ್ರಾಮದವನಾದ ಪ್ರಕಾಶ್​, ಬೇವೂರು ಗ್ರಾಮದಲ್ಲಿ ವಾಸವಿದ್ದ. ಇನ್ನು ಗಾಯಾಳು ಶ್ರೀಶೈಲ ಕಲಗುಡಿಗೆ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ