AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಸಲಿನ ತಾಪಕ್ಕೆ ಹೊಂಡದಲ್ಲಿ ಸಾಕಿದ್ದ 17 ಸಾವಿರ ಮೀನುಗಳು ಸಾವು; ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದ ಯುವ ರೈತ ಕಂಗಾಲು

ಆತ ಬಿಇ ಪದವೀಧರ, ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಆದರೂ ಆತನಿಗೆ ಕೃಷಿ ಹಾಗೂ ಕೃಷಿ ಸಂಬಂಧಿ ಉಪ ಕಸಬುಗಳ ಬಗ್ಗೆ ಆಸಕ್ತಿಯಿತ್ತು. ಈ ನಿಟ್ಟಿನಲ್ಲಿ ಪ್ರಧಾನ ಮಂತ್ರಿ ಮತ್ಸ್ಯ ಯೋಜನೆಯಡಿ ಮೀನು ಕೃಷಿಗೆ ಕೈ ಹಾಕಿದ್ದ. ತಮ್ಮದೇ ಜಮೀನಿನಲ್ಲಿ ದೊಡ್ಡ ಹೊಂಡವನ್ನು ನಿರ್ಮಾಣ ಮಾಡಿ ಮತ್ಸ್ಯ ಕೃಷಿ ಮಾಡುತ್ತಿದ್ದ. ಕಳೆದ ವರ್ಷ ಉತ್ತಮ ಇಳುವರಿ ಬಂದಿತ್ತು. ಈ ವರ್ಷವೂ ಲಕ್ಷಾಂತರ ರೂಪಾಯಿ ಹಣ ಖರ್ಚು ಮಾಡಿ ಮೀನುಗಳ ಸಾಕಾಣಿಕೆ ಮಾಡಿದ್ದ. ಆದರೆ ದಿಢೀರ್​ ಹೊಂಡದಲ್ಲಿದ್ದ ಎಲ್ಲಾ ಮೀನುಗಳು ಸಾವನ್ನಪ್ಪಿವೆ. 

ಬಿಸಲಿನ ತಾಪಕ್ಕೆ ಹೊಂಡದಲ್ಲಿ ಸಾಕಿದ್ದ 17 ಸಾವಿರ ಮೀನುಗಳು ಸಾವು; ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದ ಯುವ ರೈತ ಕಂಗಾಲು
ವಿಜಯಪುರದಲ್ಲಿ ಸಾಕಿದ್ದ 17 ಸಾವಿರ ಮೀನುಗಳು ಸಾವು
ಅಶೋಕ ಯಡಳ್ಳಿ, ವಿಜಯಪುರ
| Edited By: |

Updated on:May 12, 2024 | 2:58 PM

Share

ವಿಜಯಪುರ, ಮೇ. 12: ಜಿಲ್ಲೆಯಲ್ಲಿ ಬಿಸಿಲಿನ ಕಾಟ ಮುಂದುವರೆದಿದ್ದು, ಹಿಂದೆಂದಿಗಿಂತ ಹೆಚ್ಚಿನ ತಾಪಮಾನದ ಬಿಸಿಲು ಅಂದರೆ 42 ರಿಂದ 45 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ಇಂತಹ ಬಿರು ಬಿಸಿಲಿಗೆ ಮೀನು ಕೃಷಿ ಮಾಡಿದ ಯುವಕ ಬಾರೀ ನಷ್ಟವನ್ನು ಅನುಭವಿಸುವಂತಾಗಿದೆ. ವಿಜಯಪುರ(Vijayapur) ನಗರದ ನಿವಾಸಿ ವಿಜಯಕುಮಾರ ಕವಟಗಿ ಬಿಇ ಪದವೀಧರ. ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರೂ ವಿಜಯಪುರ ತಾಲೂಕಿನ ಮದಭಾವಿ ತಾಂಡಾ 2 ರ ಬಳಿಯಿರುವ ಸ್ವಂತ ಜಮೀನಿನಲ್ಲಿ ಮೀನು ಕೃಷಿ(Fish farming) ಮಾಡುತ್ತಿದ್ದಾರೆ. ಪ್ರಧಾನ ಮಂತ್ರಿ ಮತ್ಸ್ಯ ಯೋಜನೆಯಡಿ ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿ ತಮ್ಮದೇ ಜಮೀನಿನಲ್ಲಿ ದೊಡ್ಡದಾದ ಹೊಂಡವನ್ನು ನಿರ್ಮಾಣ ಮಾಡಿರೋ ವಿಜಯಕುಮಾರ್​, ಸ್ನೇಕ್ ಹೆಡ್ ಮುರೆಲ್ ತಳಿಯ ಮೀನುಗಳನ್ನು ಸಾಕಿ ಕಳೆದ ವರ್ಷ 8 ರಿಂದ 10 ಲಕ್ಷ ರೂಪಾಯಿ ನಿವ್ವಳ ಲಾಭ ಮಾಡಿಕೊಂಡಿದ್ದರು.

17 ಸಾವಿರ ಮೀನುಗಳು ಸಾವು

ಈ ಬಾರಿ ಕೂಡ ಮೀನು ಸಾಕಾಣಿಕೆಯಲ್ಲಿ ಮತ್ತಷ್ಟು ಪರಿಣಿತಿ ಪಡೆದು 18 ರಿಂದ 20 ಲಕ್ಷ ರೂಪಾಯಿ ಖರ್ಚು ಮಾಡಿ 17000 ಕ್ಕೂ ಆಧಿಕ ಸ್ನೇಕ್ ಹೆಡ್ ಮುರೆಲ್ ತಳಿಯ ಮೀನುಗಳನ್ನು ಸಾಕಾಣಿಕೆ ಮಾಡಿದ್ದರು. ಇನ್ನೇನು ಮೀನುಗಳು ಬೆಳೆದಿದ್ದು ಮಾರಾಟಕ್ಕೆ ಬಂದಿದೆ. ಅದರಂತೆ ಮಾರಾಟ ಮಾಡಲು ತಯಾರಿ ನಡೆಸುತ್ತಿರೋವಾಗಲೇ ಹೊಂಡದಲ್ಲಿದ್ದ 17 ಸಾವಿರ ಮೀನುಗಳು ಸಾವನ್ನಪ್ಪಿದ್ದು ವಿಜಯಕುಮಾರ್​ ಕವಟಗಿಗೆ ಆಕಾಶವೇ ತಲೆ ಮೇಲೆ ಬಿದ್ದಂತ ಅನುಭವ ಆಗಿದೆ.

ಇದನ್ನೂ ಓದಿ:ಅರಬ್ಬೀ ಸಮುದ್ರದಲ್ಲಿ ಭಾರೀ ಮತ್ಸ್ಯ ಕ್ಷಾಮ: ಮೀನುಗಾರಿಕೆ ನಿಷೇಧದ ಅವಧಿಗೂ ಮೊದಲೇ ಬಂದರಿನಲ್ಲಿ ಲಂಗರು ಹಾಕಿದ ಬೋಟ್‌ಗಳು

ಇನ್ನು ವಿಜಯಕುಮಾರ್​,​ ಕಳೆದ ವರ್ಷ ಹೈದರಾಬಾದ್ ಹಾಗೂ ಇತರೆ ನಗರದ ಮಾರುಕಟ್ಟೆಗಳಲ್ಲಿ ಮೀನುಗಳನ್ನು ಮಾರಾಟ ಮಾಡಿದ್ದರು. ಮೊದಲ ವರ್ಷದ ಮೀನು ಕೃಷಿಯಲ್ಲಿ 8 ರಿಂದ 10 ಲಕ್ಷ ರೂಪಾಯಿ ಲಾಭ ಮಾಡಿಕೊಂಡಿದ್ದರು. ಒಂದು ವರ್ಷದ ಅನುಭವದಲ್ಲಿ ಮತ್ತಷ್ಟು ಉತ್ತಮ ಇಳುವರಿ ಪಡೆಯಲು ಮುಂದಾಗಿದ್ದ ಬಿಇ ಇಂಜಿನೀಯರ್. ಈ ವರ್ಷ 18 ರಿಂದ 20 ಲಕ್ಷ ರೂಪಾಯಿ ಖರ್ಚು ಮಾಡಿ ಉತ್ತಮವಾಗಿ ಮೀನುಗಳನ್ನು ಸಾಕಾಣಿಕೆ ಮಾಡಿದ್ದರು. ಅವುಗಳನ್ನು ಮಾರಾಟ ಮಾಡಲು ಹೈದರಾಬಾದ್ ಹಾಗೂ ಇತರ ಕಡೆಗಳಲ್ಲಿ ವ್ಯಾಪಾರಸ್ಥರನ್ನು ಸಂಪರ್ಕ ಮಾಡಿ ಮಾರಾಟ ಮಾಡಲು ಮುಂದಾಗಿದ್ದ. ಇಷ್ಟರ ಮದ್ಯೆಯೇ ಇವರ ಹೊಂಡದಲ್ಲಿದ್ದ 17000 ಮೀನುಗಳು ಸಾವನ್ನಪ್ಪಿವೆ. ಇದಕ್ಕೆ ಪ್ರಮುಖ ಕಾರಣ ಉಷ್ಣಾಂಶ ಏರಿಕೆ ಎಂದು ವಿಜಯಕುಮಾರ್​ ಮಾಹಿತಿ ನೀಡಿದ್ದಾರೆ.

ಸಾಲ ಸೋಲ ಮಾಡಿ ಹಾಕಿದ್ದ ಬಂಡವಾಳ, ನೀರಲ್ಲಿ ಹಾಕಿದಂತಾಗಿದೆ. ವಾಟರ್ ಟೆಂಪ್ರೇಚರ್ ಅಂಡರ್ ವಾಟರ್ 35 ಕ್ಕೂ ಆಧಿಕವಾಗಿತ್ತು. ಹೊರಗಡೆ 42 ರಿಂದ 45 ಡಿಗ್ರಿ ಸೆಲ್ಸಿಯಸ್​ಗೆ ಹೋಗಿದೆ. ನೀರನ್ನು ತೆಗೆದು ಹೊಸ ನೀರು ಬಿಡಲು ಕೊಳವೆ ಬಾವಿಗಳಲ್ಲಿ ನೀರು ಬರುತ್ತಿಲ್ಲ. ಹೀಗಾಗಿ ಒಂದೆಡೆ ಉಷ್ಣಾಂಶ ಏರಿಕೆ, ನೀರಲ್ಲಿ ಆಮ್ಲಜನಕ ಕೊರತೆ ಕಾರಣದಿಂದ ಮೀನುಗಳು ಒಮ್ಮೇಲೆ ಸಾವನ್ನಪ್ಪಿವೆ. ಮೀನುಗಳ ಮಾರಾಟದಿಂದ 35 ಲಕ್ಷಕ್ಕೂ ಆಧಿಕ ಹಣ ಬರುತ್ತಿತ್ತು. 20 ಲಕ್ಷ ರೂಪಾಯಿ ಖರ್ಚು ತೆಗೆದರೂ 15 ಲಕ್ಷಕ್ಕೂ ಆಧಿಕ ಲಾಭ ನಮಗೆ ಸಿಗುತ್ತಿತ್ತು. ಮೀನುಗಳ ಸಾವಿನಿಂದ ನಮಗೆ ನಷ್ಟವಾಗಿದೆ ಎಂದು ನೋವನ್ನು ಹೊರ ಹಾಕಿದ್ದಾರೆ.

ಜಿಲ್ಲೆಯಲ್ಲಿನ ಬಿಸಿಲಿನ ತಾಪಕ್ಕೆ ಮೀನು ಕೃಷಿ ಮಾಡಿದ ಯುವ ರೈತ ನಷ್ಟವನ್ನು ಅನುಭವಿಸುಂತಾಗಿದೆ. ಮಾರಾಟದ ಹಂತಕ್ಕೆ ಬಂದ ಮೀನುಗಳು ಬಿಸಿಗೆ ಹಾಗೂ ನೀರಲ್ಲಿ ಆಮ್ಲಜನಕ ಕೊರತೆಯಿಂದ ಅಸುನೀಗಿವೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದು ಕೈಗೆ ಬಾರದಂತಾಗಿದೆ. ಇತ್ತ ಮೀನುಗಾರಿಕಾ ಇಲಾಖೆಯಿಂದ ಯಾವುದೇ ವಿಮೆ ಸೌಲಭ್ಯವಿಲ್ಲ ಎಂದು ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದು, ಮೀನು ಕೃಷಿ ಮಾಡಿದ್ದ ಬಿಇ ಇಂಜಿನೀಯರ್​ಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಕಾರಣ ಸರ್ಕಾರ ಹಾಗೂ ಸಂಬಂಧಿಸಿದ ಸಚಿವರು ನಮಗೆ ಸೂಕ್ತ ಪರಿಹಾರ ನೀಡಬೇಕೆಂದು ಮನವಿ ಮಾಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:56 pm, Sun, 12 May 24

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್