ಅರಬ್ಬೀ ಸಮುದ್ರದಲ್ಲಿ ಭಾರೀ ಮತ್ಸ್ಯ ಕ್ಷಾಮ: ಮೀನುಗಾರಿಕೆ ನಿಷೇಧದ ಅವಧಿಗೂ ಮೊದಲೇ ಬಂದರಿನಲ್ಲಿ ಲಂಗರು ಹಾಕಿದ ಬೋಟ್‌ಗಳು
ದಕ್ಷಿಣಕನ್ನಡ ಜಿಲ್ಲೆಯಲ್ಲಿ 30 ಸಾವಿರಕ್ಕೂ ಹೆಚ್ಚು ವೃತ್ತಿನಿರತ ಮೀನುಗಾರರಿದ್ದಾರೆ. 1134 ಪರ್ಸೀನ್ ಮತ್ತು ಟ್ರಾಲ್, 1396 ಗಿಲ್‌ನೆಟ್, 531 ಸಾಂಪ್ರದಾಯಿಕ ಬೋಟ್‌ಗಳಿವೆ. ಮೀನುಗಾರಿಕೆ ನಷ್ಟದ ಹಾದಿಯಲ್ಲಿರುವುದರಿಂದ ಅನಿವಾರ್ಯವಾಗಿ ಸಾವಿರಾರು ಬೋಟುಗಳು ಬಂದರು ಸೇರುತ್ತಿವೆ.
ಮಂಗಳೂರು, ಮೇ 10: ಕರಾವಳಿಯ ಆರ್ಥಿಕತೆಯ ಜೀವನಾಡಿ ಮತ್ಸೋದ್ಯಮ (Fishing) ಪಾತಾಳಕ್ಕೆ ಕುಸಿದಿದೆ. ಜೂನ್‌ನಲ್ಲಿ ಲಂಗರು ಹಾಕಬೇಕಾದ ಮೀನುಗಾರಿಕಾ ಬೋಟ್‌ಗಳು ಮೇ ತಿಂಗಳಲ್ಲೇ ಬಂದರಿನಲ್ಲಿ ಲಂಗರು ಹಾಕಿವೆ. ಅವೈಜ್ಞಾನಿಕ ಮೀನುಗಾರಿಕೆ, ಸಮುದ್ರದ (Arabian Sea) ನೀರಿನ ಉಷ್ಣಾಂಶ ಏರಿಕೆಯಿಂದ ಮೀನಿನ (Fish) ಕೊರತೆಯಾಗಿ ಮೀನುಗಾರರ ಹೊಟ್ಟೆಗೆ ತಣ್ಣೀರಿನ ಬಟ್ಟೆ ಕಟ್ಟುವಂತಾಗಿದೆ.
ಸಾಮಾನ್ಯವಾಗಿ ಬೋಟುಗಳು ಮಳೆಗಾಲದ ಮೀನುಗಾರಿಕಾ ನಿಷೇಧದ ಅವಧಿಯಾದ ಜೂನ್ ತಿಂಗಳಲ್ಲಿ ಲಂಗರು ಹಾಕುತ್ತವೆ. ಆದರೆ ಈ ಬಾರಿ ಮೇ ಪ್ರಾರಂಭದಲ್ಲೇ 80 ಶೇಕಡಾ ಬೋಟ್‌ಗಳು ದಡದಲ್ಲಿ ಬಂದು ಲಂಗರು ಹಾಕಿವೆ. ಇದಕ್ಕೆ ಮುಖ್ಯ ಕಾರಣ ಕಡಲಲ್ಲಿ ಭಾರೀ ಮತ್ಸ್ಯ ಕ್ಷಾಮ ಉಂಟಾಗಿರುವುದು. ಅವೈಜ್ಞಾನಿಕವಾಗಿ ನಡೆಸಿದ ಮೀನುಗಾರಿಕೆಯಿಂದ ಮೀನಿನ ಸಂತತಿಯೆಲ್ಲಾ ನಾಶವಾಗಿದೆ. ಸಣ್ಣ ಪುಟ್ಟ ಮರಿ ಮೀನುಗಳನ್ನು ಹಿಡಿದು ತಂದಿರುವುದರಿಂದ ಮೀನುಗಳ ಸಂಖ್ಯೆ ಕಡಿಮೆಯಾಗಿದೆ. ಇದರ ಜೊತೆ ಸಮುದ್ರದಲ್ಲಿ ನೀರಿನ ಉಷ್ಣಾಂಶ ಏರಿಕೆಯಾಗಿರುವುದರಿಂದ ಮೀನುಗಳೆಲ್ಲಾ ತಳ ಸೇರಿದೆ. ಹೀಗಾಗಿ ದೊಡ್ಡ ಮಟ್ಟದ ಮತ್ಸ್ಯ ಕ್ಷಾಮ ಎದುರಾಗಿದೆ.
30 ಸಾವಿರಕ್ಕೂ ಹೆಚ್ಚು ಮೀನುಗಾರರಿಗೆ ಸಂಕಷ್ಟ
ದಕ್ಷಿಣಕನ್ನಡ ಜಿಲ್ಲೆಯಲ್ಲಿ 30 ಸಾವಿರಕ್ಕೂ ಹೆಚ್ಚು ವೃತ್ತಿನಿರತ ಮೀನುಗಾರರಿದ್ದಾರೆ. 1134 ಪರ್ಸೀನ್ ಮತ್ತು ಟ್ರಾಲ್, 1396 ಗಿಲ್‌ನೆಟ್, 531 ಸಾಂಪ್ರದಾಯಿಕ ಬೋಟ್‌ಗಳಿವೆ. ಮೀನುಗಾರಿಕೆ ನಷ್ಟದ ಹಾದಿಯಲ್ಲಿರುವುದರಿಂದ ಅನಿವಾರ್ಯವಾಗಿ ಸಾವಿರಾರು ಬೋಟುಗಳು ಬಂದರು ಸೇರುತ್ತಿವೆ. ಇನ್ನು ಆಗಸ್ಟ್, ಸೆಪ್ಟೆಂಬರ್, ನವೆಂಬರ್ ತಿಂಗಳಿನಲ್ಲಿ ಮೀನಿನ ಇಳುವರಿ ಉತ್ತಮವಾಗಿತ್ತು.
ಜನವರಿ, ಫೆಬ್ರವರಿ, ಮಾರ್ಚ್ ತಿಂಗಳಲ್ಲಿ ಸಾಮಾನ್ಯವಾಗಿ ಮೀನುಗಾರಿಕೆ ಕಡಿಮೆಯೇ ಇರುತ್ತೆ. ಈ ಸಂದರ್ಭ ಬೋಟ್ ರಿಪೇರಿ, ಪೈಟಿಂಗ್ ಕಾರ್ಯಗಳೆಲ್ಲಾ ನಡೆಯುತ್ತವೆ. ಆದರೆ, ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ಉತ್ತಮ ಮೀನುಗಾರಿಕೆ ನಡೆಯುತ್ತವೆ. ಈ ಬಾರಿ ಈ ಎರಡು ತಿಂಗಳಲ್ಲೂ ನಿರೀಕ್ಷಿತ ಪ್ರಮಾಣದ ಮೀನುಗಳು ಸಿಕ್ಕಿಲ್ಲ. ಹೀಗಾಗಿ ಮೀನುಗಾರಿಕೆ ನಷ್ಟದ ಹಾದಿಯಲ್ಲಿರುವುದರಿಂದ ಅನಿವಾರ್ಯವಾಗಿ ಸಾವಿರಾರು ಬೋಟುಗಳು ಅವಧಿಗಿಂತ ಮೊದಲೇ ಬಂದರು ಸೇರುತ್ತಿವೆ.
ಇದನ್ನೂ ಓದಿ: ಪ್ರವೀಣ ನೆಟ್ಟಾರು ಕೊಲೆ ಪ್ರಕರಣದ ನಾಲ್ಕನೇ ಆರೋಪಿ ಬಂಧನ
ಪ್ರತಿ ವರ್ಷ ಮಳೆಗಾಲದ ಸಂದರ್ಭ ಏಕರೂಪವಾಗಿ ಕರಾವಳಿಯಲ್ಲಿ ಮೀನುಗಾರಿಕೆ ನಿಷೇಧ ಮಾಡಲಾಗುತ್ತದೆ. ಅದರಂತೆ ಈ ಬಾರೀಯು ಜೂನ್ 1ರಿಂದ ಜುಲೈ 31ರವರೆಗೆ 61 ದಿನಗಳ ಕಾಲ ಮೀನುಗಾರಿಕೆ ನಿಷೇಧವಾಗಲಿದೆ. ಈ ಮೂಲಕ ಮತ್ಸ್ಯಸಂಪತ್ತಿನ ಬರದ ಜೊತೆ ಈ ಬಾರೀಯ ಮೀನುಗಾರಿಕ ಋತು ಅಂತ್ಯ ಕಾಣುತ್ತಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ