ವಿಜಯಪುರ: ಆನ್ಲೈನ್ ಮೂಲಕ ಲಕ್ಷಾಂತರ ರೂಪಾಯಿ ವಂಚನೆ ಮಾಡಿರುವ ಆರೋಪ ಕೇಳಿಬಂದಿದ್ದು, ವಿಜಯಪುರ ಸಿಇಎನ್ ಪೊಲೀಸರು ನೈಜೀರಿಯಾ ಪ್ರಜೆಯನ್ನು ಬಂಧಿಸಿದ್ದಾರೆ. ಆಂಥೋನಿ ಎಂಬ ನೈಜೀರಿಯಾ ಪ್ರಜೆ ಬಂಧನಕ್ಕೊಳಗಾಗಿದ್ದಾನೆ. ಈತ ಆನ್ಲೈನ್ ಮೂಲಕ ಕೊಲ್ಹಾರ ಪಟ್ಟಣದ ಕಿರಣ ಕಲ್ಲಪ್ಪ ದೇಸಾಯಿಗೆ ವಂಚನೆ ಮಾಡಿದ್ದಾನಂತೆ. ಸುಮಾರು 16 ಲಕ್ಷ ರೂ. ಹಣ ವಂಚನೆ ಮಾಡಿದ್ದಾನೆ ಎಂದು ಆರೋಪಿಸಿದ್ದಾರೆ. ಔಷಧ ನೀಡುವ ವಿಚಾರದಲ್ಲಿ ವಂಚನೆ ಮಾಡಿದ್ದಾಗಿ ಕಿರಣ ದೇಸಾಯಿ ಸಿಇಎನ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಆಂಥೋನಿ ಗುಜರಾತಿನಲ್ಲಿ ಕೆಲಸದ ನಿಮಿತ್ಯ ವಾಸವಿದ್ದ. ಔಷಧ ನೀಡುವ ವಿಚಾರದಲ್ಲಿ ನಂಬಿಸಿ ಮೋಸ ಮಾಡಿದ್ದಾನಂತೆ. ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಗುಜರಾತಿನಲ್ಲಿ ಪೊಲೀಸರು ಆರೋಪಿಯನ್ನು ಹೆಡೆಮುರಿ ಕಟ್ಟಿ ತಂದಿದ್ದಾರೆ.
10 ಕುರಿ ಕಳ್ಳತನ
ಕೋಲಾರ ತಾಲೂಕಿನ ಯಾನಾದಹಳ್ಳಿಯ ಶೆಡ್ನಲ್ಲಿದ್ದ 10 ಕುರಿ ಕಳ್ಳತನವಾಗಿದೆ. ಸತೀಶ್ ಎಂಬುವವರಿಗೆ ಸೇರಿದ ಕುರಿಗಳು ಕಳ್ಳತನವಾಗಿದ್ದು, ಈ ಘಟನೆ ಕೋಲಾರ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸುಮಾರು ಒಂದೂವರೆ ಲಕ್ಷ ರೂಪಾಯಿ ಬೆಲೆ ಬಾಳುವ ಕುರಿಗಳು ಕಳ್ಳತನವಾಗಿದ್ದು, ಸತೀಶ್ ಕಂಗಾಲಾಗಿದ್ದಾರೆ.
ಕಳವು ಮಾಲು ವಾಪಸ್
ಚಿತ್ರದುರ್ಗ ಪೊಲೀಸರು ವಶಪಡಿಸಿಕೊಂಡಿದ್ದ ಕಳವು ವಸ್ತುಗಳನ್ನು ಮಾಲೀಕರಿಗೆ ವಾಪಸ್ ನೀಡಿದ್ದಾರೆ. ಪೊಲೀಸ್ ಮೈದಾನದಲ್ಲಿ ಹಸ್ತಾಂತರ ಮಾಡಿದ್ದಾರೆ. ಚಿತ್ರದುರ್ಗ ಎಸ್ಪಿ ಜಿ.ರಾಧಿಕಾ ನೇತೃತ್ವದಲ್ಲಿ ಹಸ್ತಾಂತರ ಮಾಡಲಾಯಿತು. 2 ಕೋಟಿ ರೂ.ಗೂ ಹೆಚ್ಚು ಮೌಲ್ಯದ ವಸ್ತುಗಳನ್ನ ಮಾಲೀಕರಿಗೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ
ತಾಯಿ ಆಗುತ್ತಿದ್ದಾರೆ ನಟಿ ಅಮೂಲ್ಯ; ವಿಶೇಷ ಫೋಟೋ ಮೂಲಕವೇ ಗುಡ್ ನ್ಯೂಸ್ ನೀಡಿದ ದಂಪತಿ
KBC 13: ₹ 1 ಕೋಟಿ ಮೊತ್ತದ ಚೆಸ್ ಕುರಿತ ಪ್ರಶ್ನೆಗೆ ಉತ್ತರ ತಿಳಿಯದೇ ಕ್ವಿಟ್ ಮಾಡಿದ ಬಾಲಕಿ; ನೀವು ಉತ್ತರಿಸಬಲ್ಲಿರಾ?