ಅಮಿತಾಭ್ ಬಚ್ಚನ್ (Amitabh Bachcan) ನಡೆಸಿಕೊಡುವ ಕೌನ್ ಬನೇಗಾ ಕರೋಡ್ಪತಿಯ 13ನೇ (KBC 13) ಸಂಚಿಕೆ ವೀಕ್ಷಕರಿಗೆ ಪ್ರಿಯವಾಗುವಂತೆ ಮೂಡಿಬರುತ್ತಿದ್ದು, ಈಗಾಗಲೇ ಮೂರು ಜನ ಕೋಟ್ಯಧಿಪತಿಗಳು ಹೊರಹೊಮ್ಮಿದ್ದಾರೆ. ಆದರೆ ಇದುವರೆಗೆ ಯಾರೂ ಕೂಡ ₹ 7 ಕೋಟಿ ಮೊತ್ತದ ಪ್ರಶ್ನೆಗೆ ಉತ್ತರಿಸಲು ಸಾಧ್ಯವಾಗಿಲ್ಲ. ಇತ್ತೀಚಿನ ವಿಶೇಷ ವಿದ್ಯಾರ್ಥಿ ಸಂಚಿಕೆಯಲ್ಲಿ 14 ವರ್ಷದ ಬಾಲಕಿ ರಾಜ್ನಂದಿನಿ ಕಲಿತಾ (Rajnandini Kalita) ಭಾಗವಹಿಸಿದ್ದು, ₹ 1 ಕೋಟಿ ಮೊತ್ತದ ಪ್ರಶ್ನೆಯ ಹಂತದವರೆಗೆ ತಲುಪಿದ್ದಾಳೆ. ಆದರೆ ಚೆಸ್ (Chess) ಕುರಿತಾದ ಆ ಪ್ರಶ್ನೆಗೆ ಅವರಿಗೆ ಉತ್ತರ ತಿಳಿಯಲಿಲ್ಲ. ಅಂತಿಮವಾಗಿ ಅವರು ಕ್ವಿಟ್ ಮಾಡುವ ನಿರ್ಧಾರ ಕೈಗೊಂಡರು. ನೀವು ಆ ಪ್ರಶ್ನೆಗೆ ಉತ್ತರ ಊಹಿಸಬಲ್ಲಿರಾ? ಪ್ರಶ್ನೆ ಇಲ್ಲಿದೆ.
‘‘ಕೇವಲ 12 ವರ್ಷ, 4 ತಿಂಗಳು, 25 ದಿನ ತುಂಬಿದ ವ್ಯಕ್ತಿ, ಚೆಸ್ ಗ್ರಾಂಡ್ ಮಾಸ್ಟರ್ ಪಟ್ಟ ಅಲಂಕರಿಸುತ್ತಾರೆ. ಆ ಸ್ಥಾನ ಅಲಂಕರಿಸಿದ ವಿಶ್ವದ ಆ ಅತ್ಯಂತ ಕಿರಿಯ ವ್ಯಕ್ತಿಯ ಹೆಸರೇನು?’’. ಈ ಪ್ರಶ್ನೆಗೆ ಆಯ್ಕೆಗಳಾಗಿ ಅಮಿತಾಭ್, ‘‘ ರಮೇಶ್ಬಾಬು ಪ್ರಜ್ಞಾನಂದಾ, ಅಭಿಮನ್ಯು ಮಿಶ್ರಾ, ಬೆತ್ ಹಾರ್ಮನ್ ಹಾಗೂ ಗುಕೇಶ್ ದೊಮ್ಮರಾಜು ಹೆಸರನ್ನು ನೀಡಿದ್ದರು. ಆದರೆ ಸ್ಪರ್ಧಿ ರಾಜ್ನಂದಿನಿ ಅವರಿಗೆ ಇದಕ್ಕೆ ಉತ್ತರ ತಿಳಿಯಲಿಲ್ಲ. ಕೊನೆಗೆ ಅವರು ಸ್ಪರ್ಧೆಯನ್ನು ಕ್ವಿಟ್ ಮಾಡಿದರು. ಸರಿಯಾದ ಉತ್ತರ ಅಭಿಮನ್ಯು ಮಿಶ್ರಾ ಆಗಿತ್ತು. ಅಂತಿಮವಾಗಿ ರಾಜ್ನಂದಿನಿ ₹ 50 ಲಕ್ಷ ಮೊತ್ತವನ್ನು ಬಹುಮಾನವಾಗಿ ಪಡೆದರು.
ರಾಜ್ನಂದಿನಿ ಕಲಿತಾ ಗುವಾಹಟಿ ಮೂಲದವರು. ಕೆಬಿಸಿಯಲ್ಲಿ ಪ್ರಸ್ತುತ ವಿದ್ಯಾರ್ಥಿಗಳು ಭಾಗವಹಿಸುವ ವಿಶೇಷ ಸಂಚಿಕೆಗಳನ್ನು ನಡೆಸಲಾಗುತ್ತಿದೆ. ಅದರಲ್ಲಿ 14 ವರ್ಷದ ಈ ಬಾಲಕಿ ಭಾಗಿಯಾಗಿ, ಎಲ್ಲರ ಕಣ್ಣರಳಿಸುವಂತೆ ಮಾಡಿದ್ದಾರೆ. ಅಮಿತಾಭ್ ಮುಂದೆ ರಾಜ್ನಂದಿನಿ ತಾನು ರಾಷ್ಟ್ರಪತಿಯಾದರೆ… ಎಂಬ ವಿಷಯದ ಕುರಿತು ಸಣ್ಣ ಭಾಷಣವನ್ನೂ ಮಾಡಿ ಮನಗೆದ್ದರು. ಅವರ ಭಾಷಣಕ್ಕೆ ಅಮಿತಾಭ್ ತಲೆದೂಗಿ, ಇಷ್ಟು ಚಂದದ ಭಾಷಣವನ್ನು ರಾಜಕೀಯ ನಾಯಕರೂ ಮಾಡುವುದಿಲ್ಲ ಎಂದು ಗುಣಗಾನ ಮಾಡಿದರು. ಅಂತಿಮವಾಗಿ ರಾಜ್ನಂದಿನಿ ₹ 50 ಲಕ್ಷ ಮೊತ್ತದೊಂದಿಗೆ ಸ್ಪರ್ಧೆ ಮುಗಿಸಿದ್ದಾರೆ.
ಇದನ್ನೂ ಓದಿ:
ಬಹುಕೋಟಿ ವಂಚನೆ ಆರೋಪಿ ಜತೆ ಜಾಕ್ವೆಲಿನ್ ಲವ್ವಿಡವ್ವಿಗೆ ಸಿಕ್ತು ಇನ್ನಷ್ಟು ಫೋಟೋಗಳ ಸಾಕ್ಷಿ
ಕೊನೆಗೂ ಸುನೀಲ್ ಶೆಟ್ಟಿ ಕುಟುಂಬದೊಂದಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡ ರಾಹುಲ್; ಆಥಿಯಾ ಜತೆ ಭರ್ಜರಿ ಪೋಸ್