ವಿಜಯಪುರ ಸಿಂದಗಿಯಲ್ಲಿ ಮತ್ತೆ ಭೂಕಂಪದ ಅನುಭವ! ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಆತಂಕ

ಈವರೆಗೆ ಜಿಲ್ಲೆಯಲ್ಲಿ ನಾಲ್ಕು ಬಾರಿ ಭೂಮಿ ಕಂಪಿಸಿರುವ ಬಗ್ಗೆ ಮಾಹಿತಿ ಇದೆ. ರಿಕ್ಟರ್ ಮಾಪಕದಲ್ಲಿ ಭೂಕಂಪನ ತೀವ್ರತೆ ದಾಖಲಾಗಿದ್ದು, ಜನರಿಗೆ ದಿನದಿಂದ ದಿನಕ್ಕೆ ಆತಂಕ ಹೆಚ್ಚುತ್ತಿದೆ.

ವಿಜಯಪುರ ಸಿಂದಗಿಯಲ್ಲಿ ಮತ್ತೆ ಭೂಕಂಪದ ಅನುಭವ! ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಆತಂಕ
ಸಾಂದರ್ಭಿಕ ಚಿತ್ರ
Updated By: sandhya thejappa

Updated on: Oct 06, 2021 | 9:14 AM

ವಿಜಯಪುರ: ಜಿಲ್ಲೆಯ ಸಿಂದಗಿಯಲ್ಲಿ ಮತ್ತೆ ಭೂಕಂಪದ (Earthquake) ಅನುಭವವಾಗಿದೆ. ಇಂದು (ಅ.6) ಬೆಳಗ್ಗೆ 8.30ರ ಸುಮಾರಿಗೆ ಭೂಮಿ ಕಂಪಿಸಿದ ಅನುಭವವಾಗಿದೆ. ಸಿಂದಗಿ ಪಟ್ಟಣದ ನಾಗೂರು ಬಡಾವಣೆ, ಶಿವಶಂಕರ್ ಬಡಾವಣೆ, ವಿದ್ಯಾನಗರ, ಜ್ಯೋತಿನಗರ ಸೇರಿ ಹಲವೆಡೆ ಕಂಪನದ ಅನುಭವಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಕಳೆದ ಅಕ್ಟೋಬರ್ 1ರ ಬೆಳಗಿನ ಜಾವ 5.30 ಕ್ಕೆ ಭೂಮಿ ನಡುಗಿದ ಅನುಭವ ಉಂಟಾಗಿತ್ತು. ಈಗ ಮತ್ತೆ ಸಿಂದಗಿ ಪಟ್ಟಣದಲ್ಲಿ 2ನೇ ಬಾರಿ ಭೂಮಿ ಕಂಪಿಸಿದ ಅನುಭವಾಗಿದೆ. ಆದರೆ ಅನಾಹುತ ಸಂಭವಿಸಿರುವ ಬಗ್ಗೆ ಮಾಹಿತಿ ತಿಳಿದುಬಂದಿಲ್ಲ.

ಈವರೆಗೆ ಜಿಲ್ಲೆಯಲ್ಲಿ ನಾಲ್ಕು ಬಾರಿ ಭೂಮಿ ಕಂಪಿಸಿರುವ ಬಗ್ಗೆ ಮಾಹಿತಿ ಇದೆ. ರಿಕ್ಟರ್ ಮಾಪಕದಲ್ಲಿ ಭೂಕಂಪನ ತೀವ್ರತೆ ದಾಖಲಾಗಿದ್ದು, ಜನರಿಗೆ ದಿನದಿಂದ ದಿನಕ್ಕೆ ಆತಂಕ ಹೆಚ್ಚುತ್ತಿದೆ. ಇನ್ನು ಅಕ್ಟೋಬರ್ 2ರ ಬೆಳಗ್ಗೆ ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಬಿಜ್ಜರಗಿ, ಬಾಬಾನಗರ, ಕಳ್ಳಕವಟಗಿ, ಸೋಮದೇವರಹಟ್ಟಿ, ಘೊಣಸಗಿ, ಮಲಕನದೇವರಹಟ್ಟಿ, ಹುಬನೂರ, ಸಿದ್ದಾಪುರ ಕೆ, ಟಕ್ಕಳಕಿ ಭಾಗದಲ್ಲಿ 8.30 ರಿಂದ 8.31 ನಿಮಿಷಕ್ಕೆ ಭೂಮಿ ಕಂಪನವಾಗಿತ್ತು. ಭೂಕಂಪನ ರಿಕ್ಟರ್ ಮಾಪಕದಲ್ಲಿ 2.5ರಷ್ಟು ತೀವ್ರತೆ ದಾಖಲಾಗಿತ್ತು.

ಅಕ್ಟೋಬರ್ 1ಕ್ಕೆ ಸಿಂದಗಿ ಪಟ್ಟಣದಲ್ಲಿ ಭೂಕಂಪನದ ಅನುಭವವಾಗಿತ್ತು. ಭೂಕಂಪನದವೆಂದು ವಿಜಯಪುರ ಜಿಲ್ಲಾಡಳಿತ ದೃಢಪಡಿಸಿತ್ತು. ರಿಕ್ಟರ್ ಮಾಪಕದಲ್ಲಿ ಕಂಪನದ ತೀವ್ರತೆ 2.5ರಷ್ಟು ದಾಖಲಾಗಿದೆ. ಮಸೂತಿಯಲ್ಲಿ ಭೂಕಂಪನದ ಕೇಂದ್ರ ಬಿಂದುವಿದ್ದು ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣಾ ಕೇಂದ್ರ ಈ ಕುರಿತು ಅಧಿಕೃತ ಮಾಹಿತಿ ನೀಡಿತ್ತು.

ಇದನ್ನೂ ಓದಿ

ಹೃದಯ ಕಾಯಿಲೆಗೆ ಬೇಸತ್ತು ತಾನೂ ವಿಷ ಸೇವಿಸಿ ತನ್ನ ಇಬ್ಬರು ಮಕ್ಕಳಿಗೆ ವಿಷ ಕುಡಿಸಿದ ತಾಯಿ

ಸಿಂದಗಿ ಪಟ್ಟಣದಲ್ಲಿ ಭೂಕಂಪನವಾದದ್ದು ನಿಜ; ರಿಕ್ಟರ್ ಮಾಪಕದಲ್ಲಿ 2.5ರಷ್ಟು ತೀವ್ರತೆ ದಾಖಲು