ಹೃದಯ ಕಾಯಿಲೆಗೆ ಬೇಸತ್ತು ತಾನೂ ವಿಷ ಸೇವಿಸಿ ತನ್ನ ಇಬ್ಬರು ಮಕ್ಕಳಿಗೆ ವಿಷ ಕುಡಿಸಿದ ತಾಯಿ

ಕೊಣ್ಣೂರು ಗ್ರಾಮದ ಯಲ್ಲವ್ವ ಚಂದಣ್ಣವರ ಹೃದಯ ಕಾಯಿಲೆಯಿಂದ ಬಳಲುತ್ತಿದ್ದರು. ಈ ಕಾಯಿಲೆಯಿಂದ ಜೀವನದಲ್ಲಿ ಜಿಗುಪ್ಸೆಗೊಂಡು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇನ್ನು ಮಕ್ಕಳಾದ ಸಮರ್ಥ್ ಮತ್ತು ಸ್ವಪ್ನಾಳಿಗೂ ವಿಷ ಕುಡಿಸಿದ್ದಾರೆ.

ಹೃದಯ ಕಾಯಿಲೆಗೆ ಬೇಸತ್ತು ತಾನೂ ವಿಷ ಸೇವಿಸಿ ತನ್ನ ಇಬ್ಬರು ಮಕ್ಕಳಿಗೆ ವಿಷ ಕುಡಿಸಿದ ತಾಯಿ
ಸಾಂದರ್ಭಿಕ ಚಿತ್ರ

ಗದಗ: ಇಬ್ಬರು ಮಕ್ಕಳಿಗೆ ವಿಷ ಕುಡಿಸಿ ತಾಯಿ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ಗದಗ ಜಿಲ್ಲೆಯ ನರಗುಂದ ತಾಲೂಕಿನ ಕೊಣ್ಣೂರು ಗ್ರಾಮದಲ್ಲಿ ನಡೆದಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ 2 ವರ್ಷದ ಸ್ವಪ್ನಾ ಮೃತಪಟ್ಟಿದ್ದಾಳೆ. ಯಲ್ಲವ್ವ ಚಂದಣ್ಣವರ(27), ಸ್ವಪ್ನಾ(2) ಮೃತಪಟ್ಟಿದ್ದು ಸಮರ್ಥ್(6)ಗೆ ಚಿಕಿತ್ಸೆ ಮುಂದುವರೆದಿದೆ. ಕೊಣ್ಣೂರು ಗ್ರಾಮದಲ್ಲಿ ಸೋಮವಾರ ನಡೆದಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಕೊಣ್ಣೂರು ಗ್ರಾಮದ ಯಲ್ಲವ್ವ ಚಂದಣ್ಣವರ ಹೃದಯ ಕಾಯಿಲೆಯಿಂದ ಬಳಲುತ್ತಿದ್ದರು. ಈ ಕಾಯಿಲೆಯಿಂದ ಜೀವನದಲ್ಲಿ ಜಿಗುಪ್ಸೆಗೊಂಡು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇನ್ನು ಮಕ್ಕಳಾದ ಸಮರ್ಥ್ ಮತ್ತು ಸ್ವಪ್ನಾಳಿಗೂ ವಿಷ ಕುಡಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ತಕ್ಷಣ ಓಡೋಡಿ ಬಂದ ಸ್ಥಳೀಯರು ತಾಯಿ ಮತ್ತು ಮಕ್ಕಳನ್ನ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ್ದಾರೆ.

ಇನ್ನು ಸೋಮವಾರ ತಡರಾತ್ರಿ ಚಿಕಿತ್ಸೆ ಫಲಿಸದೆ ಯಲ್ಲವ್ವ ಮೃತಪಟ್ಟಿದ್ದು ನಿನ್ನೆ ಚಿಕಿತ್ಸೆ ಫಲಿಸದೆ 2 ವರ್ಷದ ಸ್ವಪ್ನಾ ಕೂಡ ತಾಯಿಯನ್ನೇ ಹಿಂಬಾಳಿಸಿದ್ದಾಳೆ. ಸದ್ಯ 6 ವರ್ಷದ ಸಮರ್ಥ್‌ಗೆ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ಈ ಬಗ್ಗೆ ನರಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಜಾನುವಾರಗಳ ಮೇಲೆ ದುಷ್ಟರ ಅಟ್ಟಹಾಸ; ಪೆಟ್ರೋಲ್ ಸುರಿದು ಎಮ್ಮೆಗಳಿಗೆ ಬೆಂಕಿ ಇಟ್ಟ ದುಷ್ಕರ್ಮಿಗಳು

‘ನನ್ನ ಸ್ಥಿತಿಗೆ ನೀವೇ ಕಾರಣ’; ತಮಿಳು ನಟ ಅಜಿತ್ ಮನೆ ಮುಂದೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ

Read Full Article

Click on your DTH Provider to Add TV9 Kannada