‘ನನ್ನ ಸ್ಥಿತಿಗೆ ನೀವೇ ಕಾರಣ’; ತಮಿಳು ನಟ ಅಜಿತ್ ಮನೆ ಮುಂದೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ

ಎಷ್ಟೇ ಪ್ರಯತ್ನ ಮಾಡಿದರೂ ಅಜಿತ್ ಅವರನ್ನು ಭೇಟಿಯಾಗಲು ಆ ಮಹಿಳೆಗೆ ಸಾಧ್ಯವಾಗಿರಲಿಲ್ಲ. ಇದರಿಂದ ಬೇಸರವಾಗಿ ಫರ್ಜಾನಾ ಅಜಿತ್ ಮನೆ ಮುಂದೆ ಬೆಂಕಿ ಹಚ್ಚಿಕೊಂದು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದರು.

'ನನ್ನ ಸ್ಥಿತಿಗೆ ನೀವೇ ಕಾರಣ'; ತಮಿಳು ನಟ ಅಜಿತ್ ಮನೆ ಮುಂದೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ
ಕಾಲಿವುಡ್ ನಟ ಅಜಿತ್

ಚೆನೈ: ಕಾಲಿವುಡ್ ನಟ ಅಜಿತ್ ಮನೆ ಮುಂದೆ ಮಹಿಳೆಯೊಬ್ಬರು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಖಾಸಗಿ ಆಸ್ಪತ್ರೆಯ ಸಿಬ್ಬಂದಿಯಾಗಿದ್ದ ಈ ಮಹಿಳೆ ಹಾಕಿದ ಒಂದು ವಿಡಿಯೋದಿಂದಾಗಿ ಆಕೆಯನ್ನು ಅಮಾನತು ಮಾಡಲಾಗಿತ್ತು. ಅದಕ್ಕೆ ಕಾರಣವಾಗಿದ್ದ ಅಜಿತ್ ಅವರ ಮನೆ ಮುಂದೆ ಆಕೆ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಅಷ್ಟಕ್ಕೂ ಏನು ಆ ಘಟನೆ? ಮುಂದೆ ಓದಿ.

ಫರ್ಜಾನಾ ಎಂಬ ಮಹಿಳೆ ತಮಿಳುನಾಡಿನ ತೇನಂಪೇಟೆ ಬಳಿಯ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರು. ಕಳೆದ ವರ್ಷ ನಟ ಅಜಿತ್ ಮತ್ತು ಅವರ ಪತ್ನಿ ಶಾಲಿನಿ ಆ ಆಸ್ಪತ್ರೆಗೆ ಬಂದಿದ್ದರು. ತಮ್ಮ ಆಸ್ಪತ್ರೆಗೆ ಅಜಿತ್ ಬಂದಿದ್ದನ್ನು ನೋಡಿ ಖುಷಿಯಿಂದ ಅದನ್ನು ವಿಡಿಯೋ ಮಾಡಿಕೊಂಡಿದ್ದ ಫರ್ಜಾನಾ ಆ ವಿಡಿಯೋವನ್ನು ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದರು. ಇದು ಭಾರೀ ವೈರಲ್ ಆಗಿತ್ತು. ಅಲ್ಲದೆ, ಅಜಿತ್ ಆಸ್ಪತ್ರೆಗೆ ಹೋಗಿದ್ದು ಯಾಕೆಂಬ ಚರ್ಚೆಗಳು ಮಾಧ್ಯಮಗಳಲ್ಲಿ ನಡೆದಿದ್ದವು.

ಆಸ್ಪತ್ರೆಯ ಸಿಬ್ಬಂದಿಯಾಗಿದ್ದುಕೊಂಡು ಹೀಗೆ ಆಸ್ಪತ್ರೆಗೆ ಬರುವವರ ವಿಡಿಯೋ ಮಾಡಿ ಅವರ ಖಾಸಗಿತನಕ್ಕೆ ತೊಂದರೆ ಕೊಡುವಂತಿಲ್ಲ ಎಂದು ಆಸ್ಪತ್ರೆಯ ನಿಯಮವಿದ್ದುದರಿಂದ ಆಕೆಯ ವಿರುದ್ಧ ಕ್ರಮ ಕೈಗೊಂಡ ಆಸ್ಪತ್ರೆ ಆಡಳಿತಾಧಿಕಾರಿಗಳು ಅವರ ಆಸ್ಪತ್ರೆಯ ನಿಯಮದ ವಿರುದ್ಧವಾಗಿದೆ. ಇದೇ ಕಾರಣಕ್ಕೆ ಫರ್ಜಾನಾರನ್ನು ಕೆಲಸದಿಂದ ವಜಾ ಮಾಡಿದ್ದರು. ಇದರಿಂದ ಶಾಕ್ ಆಗಿದ್ದ ಫರ್ಜಾನಾ ಅಜಿತ್ ಹಾಗೂ ಅವರ ಪತ್ನಿ ಶಾಲಿನಿ ಬಳಿ ಕ್ಷಮೆ ಕೇಳಿ, ತನ್ನನ್ನು ಕೆಲಸದಿಂದ ತೆಗೆದು ಹಾಕಬಾರದು ಎಂದು ಆಸ್ಪತ್ರೆಯ ಅಧಿಕಾರಿಗಳಿಗೆ ಹೇಳಿ ಎಂದು ಮನವಿ ಮಾಡಲು ಸಾಕಷ್ಟು ಪ್ರಯತ್ನ ಮಾಡಿದ್ದರು.

ಆದರೆ, ಎಷ್ಟೇ ಪ್ರಯತ್ನ ಮಾಡಿದರೂ ಅಜಿತ್ ಅವರನ್ನು ಭೇಟಿಯಾಗಲು ಆ ಮಹಿಳೆಗೆ ಸಾಧ್ಯವಾಗಿರಲಿಲ್ಲ. ಇದರಿಂದ ಬೇಸರವಾಗಿ ಫರ್ಜಾನಾ ಅಜಿತ್ ಮನೆ ಮುಂದೆ ಬೆಂಕಿ ಹಚ್ಚಿಕೊಂದು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದರು. ಅಲ್ಲದೆ, ತನ್ನ ಈ ಸ್ಥಿತಿಗೆ ಆಸ್ಪತ್ರೆ ಆಡಳಿತಾಧಿಕಾರಿಗಳು ಹಾಗೂ ಅಜಿತ್ ಕಾರಣವೆಂದು ಅವಳು ಬರೆದಿದ್ದಳು. ಆಕೆ ಬೆಂಕಿ ಹಚ್ಚಿಕೊಳ್ಳಲು ಯತ್ನಿಸಿದ್ದನ್ನು ನೋಡಿದ ಸೆಕ್ಯುರಿಟಿ ಸಿಬ್ಬಂದಿ ನೀರು ಹಾಕಿ ಬೆಂಕಿ ಆರಿಸಿದ್ದಾರೆ. ಬಳಿಕ ಆಕೆಯನ್ನು ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ: Crime News: ಕೇವಲ 500 ರೂ.ಗೆ ಹೆಂಡತಿಯನ್ನೇ ಮಾರಿದ ಪತಿರಾಯ; ಆಮೇಲಾಗಿದ್ದು ದುರಂತ

Viral News: ವರನ ಎದುರೇ ಮದುವೆಯ ಫೋಟೋಸ್ ಡಿಲೀಟ್ ಮಾಡಿದ ಫೋಟೋಗ್ರಾಫರ್; ಕಾರಣ ಕೇಳಿದ್ರೆ ಶಾಕ್ ಆಗ್ತೀರ

Read Full Article

Click on your DTH Provider to Add TV9 Kannada