Crime News: ಕೇವಲ 500 ರೂ.ಗೆ ಹೆಂಡತಿಯನ್ನೇ ಮಾರಿದ ಪತಿರಾಯ; ಆಮೇಲಾಗಿದ್ದು ದುರಂತ

Rape Case: ಊಟ ಕೊಡಿಸುತ್ತೇನೆಂದು ಹೇಳಿ ಹೆಂಡತಿಯನ್ನು ಹೋಟೆಲ್‌ಗೆ ಕರೆದುಕೊಂಡು ಹೋಗಿದ್ದ ಗಂಡ ಅಲ್ಲಿ ಸೋನು ಶರ್ಮ ಎಂಬಾತನಿಗೆ 500 ರೂ.ಗೆ ತನ್ನ ಹೆಂಡತಿಯನ್ನು ಮಾರಾಟ ಮಾಡಿದ್ದಾನೆ.

Crime News: ಕೇವಲ 500 ರೂ.ಗೆ ಹೆಂಡತಿಯನ್ನೇ ಮಾರಿದ ಪತಿರಾಯ; ಆಮೇಲಾಗಿದ್ದು ದುರಂತ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Oct 04, 2021 | 3:04 PM

ಅಹಮದಾಬಾದ್: ಹಣದಾಸೆಗೆ ಏನು ಬೇಕಾದರೂ ಮಾಡುವವರಿದ್ದಾರೆ. ಆದರೆ, ಅಗ್ನಿಸಾಕ್ಷಿಯಾಗಿ ಮದುವೆಯಾದ ಹೆಂಡಿತಿಯನ್ನೇ ಕೇವಲ 500 ರೂ. ಆಸೆಗೆ ಮಾರಾಟ ಮಾಡಿರುವ ಹೀನ ಕೃತ್ಯವೊಂದು ಗುಜರಾತ್​ನಲ್ಲಿ ನಡೆದಿದೆ. 500 ರೂ. ನೀಡಿ ಆ ಮಹಿಳೆಯನ್ನು ಖರೀದಿಸಿದ ವ್ಯಕ್ತಿ ಆಕೆಯನ್ನು ಅಜ್ಞಾತ ಸ್ಥಳಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರ ನಡೆಸಿದ್ದಾನೆ. ನಂತರ ಆಕೆಯನ್ನು ಅಲ್ಲೇ ಬಿಟ್ಟು ಹೋಗಿದ್ದಾನೆ.

ಊಟ ಕೊಡಿಸುತ್ತೇನೆಂದು ಹೇಳಿ ಹೆಂಡತಿಯನ್ನು ಹೋಟೆಲ್‌ಗೆ ಕರೆದುಕೊಂಡು ಹೋಗಿದ್ದ ಗಂಡ ಅಲ್ಲಿ ಸೋನು ಶರ್ಮ ಎಂಬಾತನಿಗೆ 500 ರೂ.ಗೆ ತನ್ನ ಹೆಂಡತಿಯನ್ನು ಮಾರಾಟ ಮಾಡಿದ್ದಾನೆ. ಆತನ ಹೆಂಡತಿಯನ್ನು ಖರೀದಿಸಿದ ವ್ಯಕ್ತಿ ನಿರ್ಜನ ಪ್ರದೇಶಕ್ಕೆ ಆಕೆಯನ್ನು ಕರೆದುಕೊಂಡು ಹೋಗಿ ಅತ್ಯಾಚಾರ ನಡೆಸಿದ್ದಾನೆ. ಅತ್ಯಾಚಾರ ನಡೆದ ಬಳಿಕ ಆ 21 ವರ್ಷದ ಮಹಿಳೆ ಪೊಲೀಸ್ ಠಾಣೆಗೆ ಬಂದು ತನ್ನ ಗಂಡನ ವಿರುದ್ಧ ದೂರು ನೀಡಿದ್ದಾಳೆ. ಆ ದೂರಿನ ಆಧಾರದಲ್ಲಿ ಸೋನು ಶರ್ಮ ಹಾಗೂ ಆ ಮಹಿಳೆಯ ಗಂಡನನ್ನು ಬಂಧಿಸಲಾಗಿದೆ.

ಹೋಟೆಲ್​ಗೆ ಬಂದಿದ್ದ ವ್ಯಕ್ತಿಯ ಜೊತೆಗಿದ್ದ ಆತನ ಹೆಂಡತಿಯನ್ನು ನೋಡಿದ ಸೋನು ಶರ್ಮ ಆಕೆಯನ್ನು ತನಗೆ ಕೊಡಬೇಕೆಂದು ಕೇಳಿದ್ದ. ಅದಕ್ಕೆ ಒಪ್ಪಿದ ಆತ ಸೋನು ಶರ್ಮನಿಂದ 500 ರೂ. ಪಡೆದು ತನ್ನ ಹೆಂಡತಿಯನ್ನು ಆತನಿಗೆ ಮಾರಾಟ ಮಾಡಿದ್ದ. ಈ ಘಟನೆ ನಡೆದು 24 ಗಂಟೆಯೊಳಗೆ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಅತ್ಯಾಚಾರಕ್ಕೊಳಗಾದ ಮಹಿಳೆಯನ್ನು ಆಸ್ಪತ್ರೆಗೆ ಸೇರಿಸಲಾಗಿದೆ.

ಇದನ್ನೂ ಓದಿ: Crime News: ಎಕ್ಸಾಂ ಬರೆದು ಬಂದ ಯುವತಿಯ ಕುತ್ತಿಗೆ ಸೀಳಿದ ಭಗ್ನ ಪ್ರೇಮಿ; ಕಾಲೇಜಿನಲ್ಲೇ ಕಗ್ಗೊಲೆ

Murder: ಲೇಡಿ ಪೊಲೀಸ್​ಗಾಗಿ ಹೆಂಡತಿ, ಮಕ್ಕಳನ್ನೇ ಕೊಂದ ಗಂಡ; ಸತ್ತು ಹೋಗಿದ್ದ ಕೊಲೆಗಾರ ಎದ್ದು ಬಂದ ಕತೆಯಿದು!

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ