ಭೂಕಂಪನ: ಮತ್ತೆ ಕಂಪಿಸಿದ ವಿಜಯಪುರ ಜಿಲ್ಲೆ, ಬೆಚ್ಚಿಬಿದ್ದ ಜನ!

| Updated By: ಸಾಧು ಶ್ರೀನಾಥ್​

Updated on: Oct 29, 2022 | 10:45 AM

ನಿನ್ನೆ ರಾತ್ರಿ 9.47ಕ್ಕೆ ರಿಕ್ಟರ್ ಮಾಪಕದಲ್ಲಿ 2.8ರಷ್ಟು ತೀವ್ರತೆ ದಾಖಲುಗೊಂಡಿದೆ. ಮತ್ತೆ ಮುಂಜಾನೆ 4.40ರಲ್ಲಿ 2.8ರಷ್ಟು ತೀವ್ರತೆಯ ಭೂಕಂಪನವಾಗಿದೆ.

ಭೂಕಂಪನ: ಮತ್ತೆ ಕಂಪಿಸಿದ ವಿಜಯಪುರ ಜಿಲ್ಲೆ, ಬೆಚ್ಚಿಬಿದ್ದ ಜನ!
ಭೂಕಂಪನ: ಮತ್ತೆ ಕಂಪಿಸಿದ ವಿಜಯಪುರ ಜಿಲ್ಲೆ, ಬೆಚ್ಚಿಬಿದ್ದ ಜನ!
Follow us on

ವಿಜಯಪುರ: ವಿಜಯಪುರ ಜಿಲ್ಲೆಯಲ್ಲಿ ಭೂಕಂಪನದ ಹಾವಳಿ ಇನ್ನೂ ನಿಂತಿಲ್ಲ. ಮತ್ತೆ ಮತ್ತೆ ಭೂಕಂಪನವಾಗುತ್ತಲೇ ಇದೆ. ಇದರಿಂದ ಜನ ಹೈರಾಣಗೊಂಡಿದ್ದು, ಬೆಚ್ಚಿಬಿದ್ದಿದ್ದಾರೆ. ನಿನ್ನೆ ಶುಕ್ರವಾರ ರಾತ್ರಿ 9.47, ಮುಂಜಾನೆ 4.40ರ ಸುಮಾರಿಗೆ ವಿಜಯಪುರ ನಗರ, ಬಸವನಬಾಗೇವಾಡಿ ತಾಲೂಕಿನ ಮನಗೂಳಿ, ತಿಕೋಟಾ ತಾಲೂಕಿನ ಹಲವೆಡೆ ಭೂಮಿ ಕಂಪಿಸಿದ ಅನುಭವವಾಗಿದೆ. ವಿಜಯಪುರ ನಗರದ (Vijayapura) ಗೋಳಗುಮ್ಮಟ ಹಾಗೂ ಇತರೆ ಭಾಗದಲ್ಲಿ ಭೂಕಂಪನದ ಅನುಭವವಾಗಿದೆ (Vijayapura Earthquake).

ನಿನ್ನೆ ರಾತ್ರಿ 9.47ಕ್ಕೆ ರಿಕ್ಟರ್ ಮಾಪಕದಲ್ಲಿ 2.8ರಷ್ಟು ತೀವ್ರತೆ ದಾಖಲುಗೊಂಡಿದೆ. ಮತ್ತೆ ಮುಂಜಾನೆ 4.40ರಲ್ಲಿ 2.8ರಷ್ಟು ತೀವ್ರತೆಯ ಭೂಕಂಪನವಾಗಿದೆ. ರಾತ್ರಿ ಸಂಭವಿಸಿದ ಭೂಕಂಪನ ಕೇಂದ್ರ ಬಿಂದು ವಿಜಯಪುರ ಜಿಲ್ಲೆ ಬಸವನಬಾಗೇವಾಡಿ ತಾಲೂಕಿನ ಮನಗೂಳಿ ಗ್ರಾಮದ ಬಳಿ ಕೇಂದ್ರೀಕೃತವಾಗಿತ್ತು.

2ನೇ ಭೂಕಂಪನದ ಕೇಂದ್ರ ಬಿಂದು ವಿಜಯಪುರ ತಾಲೂಕಿನ ಹಂಚಿನಾಳದಲ್ಲಿತ್ತು. ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರವು ಮತ್ತೆ ಮತ್ತೆ ಭೂಕಂಪನವಾಗಿರುವುದನ್ನು ದೃಢಪಡಿಸಿದೆ. ಮೇಲಿಂದ ಮೇಲೆ ಸಂಭವಿಸುತ್ತಿರುವ ಭೂಕಂಪನಗಳಿಂದ ಸ್ಥಳೀಯ ಜನರು ಬೆಚ್ಚಿಬಿದ್ದಿದ್ದಾರೆ.

ವಿಜಯಪುರ: ಅಕ್ಟೋಬರ್​ ಮೊದಲ ವಾರದಲ್ಲಿ ಕಂಪಿಸಿತ್ತು

ನಗರದಲ್ಲಿ ಮತ್ತೆ ಭಾರೀ ಸ್ಫೋಟದ ಸದ್ದಿನೊಂದಿಗೆ ಭೂಮಿಯು ಕಂಪಿಸಿದೆ. ಕಂಪನದ ತೀವ್ರತೆಯು ರಿಕ್ಟರ್​ ಮಾಪಕದಲ್ಲಿ 2.5ರಷ್ಟು ದಾಖಲಾಗಿದೆ. ವಿಜಯಪುರ ಬಳಿಯ ಅಲಿಯಾಬಾದ್​​​​ ಭೂಕಂಪನದ ಕೇಂದ್ರವಾಗಿತ್ತು. ವಿಜಯಪುರ ನಗರದಲ್ಲಿ ಶುಕ್ರವಾರ ನಸುಕಿನಲ್ಲಿಯೂ ಮೂರು ಬಾರಿ ಲಘು ಭೂಕಂಪನವಾಗಿತ್ತು. ಶುಕ್ರವಾರ ಮುಂಜಾನೆ 3.45, 3.46 ಹಾಗೂ 5.56ಕ್ಕೆ ಭೂಕಂಪನ ದಾಖಲಾಗಿತ್ತು. ಭೂಕಂಪನದ ತೀವ್ರತೆಯು ರಿಕ್ಟರ್ ಮಾಪಕದಲ್ಲಿ ಕ್ರಮವಾಗಿ 2.0, 1.9 ಮತ್ತು 3.2 ಎಂದು ದಾಖಲಾಗಿತ್ತು. ಜನರು ನಿದ್ದೆಯಲ್ಲಿದ್ದ ಕಾರಣ ಹೆಚ್ಚಿನವರಿಗೆ ಭೂಕಂಪನದ ಅನುಭವ ಅಷ್ಟಾಗಿ ಆಗಿರಲಿಲ್ಲ. ಆದರೆ, ಇತ್ತೀಚಿನ ದಿನಗಳಲ್ಲಿ ವಿಜಯಪುರದಲ್ಲಿ ಪದೇಪದೆ ಭೂಕಂಪನದ ಅನುಭವ ಜನರಿಗೆ ಆಗುತ್ತಿದ್ದು, ಜನರು ಆತಂಕಕ್ಕೆ ಒಳಗಾಗಿದ್ದಾರೆ.

Published On - 10:40 am, Sat, 29 October 22