ವಿಜಯಪುರ, ಜ.08: ರಾಮಮಂದಿರ (Ayodhya Ram Mandir) ಉದ್ಘಾಟನೆ ವಿಚಾರದಲ್ಲಿ ಬಿಜೆಪಿ ಕಾಂಗ್ರೆಸ್ ಮಧ್ಯೆ ಆರೋಪ ಪ್ರತ್ಯಾರೋಪ ನಡೆಯುತ್ತಿರೋ ವೇಳೆ ವಿಜಯಪುರ ಜಿಲ್ಲೆಯಲ್ಲಿ ಧರ್ಮ ದಂಗಲ್ ಮತ್ತೇ ಸದ್ದು ಮಾಡುತ್ತಿದೆ. ಉತ್ತರ ಕರ್ನಾಟಕದ ಪ್ರಖ್ಯಾತ ಜಾತ್ರೆ ಶ್ರೀ ಸಿದ್ದೇಶ್ವರ ಜಾತ್ರೆಯ (VIjayapura Siddeshwara Swamiji) ವೇಳೆ ಮುಸ್ಲಿಮರಿಗೆ ವ್ಯಾಪಾರ ವಹಿವಾಟಿಗೆ ಅವಕಾಶ ನೀಡಬಾರದು ಎಂಬ ವಿಚಾರ ವಿವಾದಕ್ಕೆ ಕಾರಣವಾಗಿದೆ. ವಿವಿಧ ಹಿಂದೂಪರ ಸಂಘಟನೆಗಳು ಈ ನಿಟ್ಟಿನಲ್ಲಿ ನಿನ್ನೆ ಬ್ಯಾನರ್ ಹಾಕಿದ್ದು ಸದ್ಯ ಸಿದ್ದೇಶ್ವರ ಸಂಸ್ಥೆಯ ಸಿಬ್ಬಂದಿ ಬ್ಯಾನರ್ ತೆರವುಗೊಳಿಸಿದ್ದಾರೆ.
ಸಿದ್ದೇಶ್ವರ ಜಾತ್ರೆಯಲ್ಲಿ ಅನ್ಯಕೋಮಿನವರಿಗೆ ವ್ಯಾಪಾರ ವಹಿವಾಟಿಗೆ ಅವಕಾಶ ನೀಡಬಾರದು ಎಂದು ಹಿಂದೂ ಸಂಘಟನೆಗಳ ಒಕ್ಕೂಟ ಪರವಾಗಿ ಸಿದ್ದೇಶ್ವರ ದೇವಸ್ಥಾನದ ಎದುರು ನಿನ್ನೆ ಬ್ಯಾನರ್ ಹಾಕಲಾಗಿತ್ತು. ಬ್ಯಾನರ್ ತೆರವಿಗೆ ಸಿದ್ದೇಶ್ವರ ಸಂಸ್ಥೆಯ ಸಿಬ್ಬಂದಿ ಮುಂದಾದಾಗ ಶ್ರೀರಾಮ ಸೇನಾ ಸಂಘಟನೆ ಮುಖಂಡ ನೀಲಕಂಠ ಕಂದಗಲ್ ವಾಗ್ವಾದ ನಡೆಸಿದ್ದರು. ನಿನ್ನೆ ಬ್ಯಾನರ್ ತೆರವು ಮಾಡದಂತೆ ತಡೆದಿದ್ದರು. ಹೀಗಾಗಿ ನಿನ್ನೆ ಬ್ಯಾನರ್ ತೆರವು ಮಾಡದೇ ಸಿದ್ದೇಶ್ವರ ಸಂಸ್ಥೆಯ ಸಿಬ್ಬಂದಿ ವಾಪಸ್ ಹೋಗಿದ್ದರು. ಸದ್ಯ ತಡರಾತ್ರಿ ಪೊಲೀಸರ ಸಹಾಯದಿಂದ ಬ್ಯಾನರ್ ತೆರವು ಮಾಡಲಾಗಿದೆ. ಬೆಳಗ್ಗೆ ದೇವಸ್ಥಾನದ ಬಳಿ ಬ್ಯಾನರ್ ಇಲ್ಲದಿರುವುದನ್ನು ಕಂಡು ನೀಲಕಂಠ ಕಂದಗಲ್ ಆಕ್ರೋಶ ಹೊರ ಹಾಕಿದ್ದು ಬ್ಯಾನರ್ ಮತ್ತೇ ಅದೇ ಸ್ಥಳದಲ್ಲಿ ಹಾಕಬೇಕೆಂದು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ವಿಜಯಪುರದ ಸಿದ್ದೇಶ್ವರ ಜಾತ್ರೆಯಲ್ಲಿ ಅನ್ಯಕೋಮಿನ ವ್ಯಾಪಾರಿಗಳಿಗೆ ಅವಕಾಶವಿಲ್ಲ: ಹಿಂದೂ ಸಂಘಟನೆಗಳ ಒಕ್ಕೂಟದ ಬ್ಯಾನರ್
ಗುಮ್ಮಟ ನಗರಿ ವಿಜಯಪುರದಲ್ಲಿ ಮತ್ತೇ ಧರ್ಮ ದಂಗಲ್ ಶುರುವಾಗಿದೆ. ನಗರದ ಸಿದ್ದೇಶ್ವರ ಜಾತ್ರೆಯಲ್ಲಿ ಅನ್ಯಕೋಮಿನವರಿಗೆ ವ್ಯಾಪಾರ ವಹಿವಾಟಿಗೆ ಅವಕಾಶ ನೀಡಬಾರದು ಎಂದು ಹಿಂದೂ ಪರ ಸಂಘಟನೆಗಳ ಒಕ್ಕೂಟದಿಂದ ನಿನ್ನೆ(ಜ.07) ಬ್ಯಾನರ್ ಹಾಕಲಾಗಿತ್ತು. ಬ್ಯಾನರ್ ತೆರವಿಗೆ ಮುಂದಾದ ಸಿದ್ದೇಶ್ವರ ಸಂಸ್ಥೆಯ ಸಿಬ್ಬಂದಿ ಜೊತೆಗೆ ವಾಗ್ವಾದ ನಡೆಸಿ ಯಥಾ ಸ್ಥಿತಿಯಲ್ಲಿ ಬ್ಯಾನರ್ ಹಾಕಲಾಗಿತ್ತು. ಸಂಪ್ರದಾಯದಂತೆ ಪ್ರತಿ ವರ್ಷದ ಸಂಕ್ರಮಣ ವೇಳೆ ಶ್ರೀ ಸಿದ್ದೇಶ್ವರ ದೇವಸ್ಥಾನದ ಜಾತ್ರೆ ನಡೆಯುತ್ತದೆ. ಒಂದು ವಾರಕ್ಕಿಂತಲೂ ಅಧಿಕ ಕಾಲ ನಡೆಯೋ ಜಾತ್ರೆಯಲ್ಲಿ ಅನ್ಯ ಕೋಮಿನವರಿಗೆ ವ್ಯಾಪಾರ ವಹಿವಾಟು ನಡೆಸಲು ಅವಕಾಶ ನೀಡಬಾರದೆಂದು ವಿವಿಧ ಹಿಂದೂ ಪರ ಸಂಘಟನೆಗಳ ಒಕ್ಕೂಟ ಕಳೆದ 2023 ರ ಡಿಸೆಂಬರ್ 19 ರಂದು ಸಿದ್ದೇಶ್ವರ ಜಾತ್ರಾ ಕಮೀಟಿಗೆ ಹಾಗೂ ಸಿದ್ದೇಶ್ವರ ಸಂಸ್ಥೆಯ ಆಧ್ಯಕ್ಷ ಹಾಗೂ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳಗೆ ಮನವಿ ಸಲ್ಲಿಸಿದ್ದರು. ನಿನ್ನೆ ಹಿಂದೂ ಸಂಘಟನೆಗಳ ಒಕ್ಕೂಟ ವಿಜಯಪುರ ವತಿಯಿಂದ ಸಿದ್ದೇಶ್ವರ ದೇವಸ್ಥಾನದ ಎದುರು ವಿಜಯಪುರದ ಶ್ರೀ ಸಿದ್ದೇಶ್ವರ ಸಂಕ್ರಮಣದ ಜಾತ್ರೆಯಲ್ಲಿ ಹಿಂದೂ ವ್ಯಾಪಾರಿಗಳಿಗೆ ಮಾತ್ರ ಅವಕಾಶ ನೀಡಲಾಗುವುದು ಎಂಬ ಬ್ಯಾನರ್ ಹಾಕಿದ್ದರು.
ಹಿಂದೂ ಸಂಘಟನೆಗಳ ಒಕ್ಕೂಟ ವಿಜಯಪುರ. ಶ್ರೀ ಸಿದ್ದೇಶ್ವರ ಸಂಕ್ರಮಣದ ಜಾತ್ರೆಯಲ್ಲಿ ಹಿಂದೂ ವ್ಯಾಪಾರಿಗಳಿಗೆ ಮಾತ್ರ ಅವಕಾಶ ನೀಡಲಾಗುವುದು. ಈ ದೇಶದ ಕಾನೂನಿಗೆ ಕೋರ್ಟ್ ತೀರ್ಪಿಗೆ ಗೌರವ ನೀಡದ, ಈ ನೆಲದ ಸಂಸ್ಕೃತಿಗೆ ಅವಮಾನ ಮಾಡುವ ಪದೇ ಪದೇ ಹಿಂದೂಗಳ ಭಾವನೆಗಳಿಗೆ ಧಕ್ಕೆ ಉಂಟು ಮಾಡುವ. ನಮ್ಮ ಪೂಜ್ಯ ಗೋಮಾತೆಯನ್ನು ಕೊಂದು ತಿನ್ನುವ ನಮ್ಮ ಹಿಂದೂ ಸಹೋದರಿಯರನ್ನಾ ಲವ್ ಜಿಹಾದ್ ಹೆಸರಿನಲ್ಲಿ ದುರ್ಬಳಕೆ ಮಾಡಿಕೊಂಡು ತುಂಡು ತುಂಡಾಗಿ ಕೊಂದು ಹಾಕುವ, ಜಿಹಾದ್ ಹೆಸರಿನಲ್ಲಿ ಅಖಂಡತೆಗೆ ಮಾರಕವಾಗಿರುವ ಕ್ರೂರ ಮತಾಂಧರೊಂದಿಗೆ ಹಿಂದೂಗಳು ಯಾವುದೇ ರೀತಿಯ ವ್ಯಾಪಾರ ವಹಿವಾಟು ನಡೆಸುವುದಿಲ್ಲಾ ಹಾಗೂ ಹಿಂದೂಗಳ ಜಾತ್ರೆಯಲ್ಲಿ ವ್ಯಾಪಾರ ಮಾಡಲು ಅವಕಾಶ ನೀಡುವುದಿಲ್ಲ ಎಂದು ಬ್ಯಾನರ್ನಲ್ಲಿ ಹಾಕಲಾಗಿತ್ತು.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ