ದಿನೇಶ್ ಗುಂಡೂರಾವ್ ಮನೆಯಲ್ಲಿ ಅರ್ಧ ಪಾಕಿಸ್ತಾನವಿದೆ ಎಂಬ ಹೇಳಿಕೆಗೆ ಯತ್ನಾಳ್ ಸ್ಪಷ್ಟನೆ
ದಿನೇಶ್ ಗುಂಡೂರಾವ್ (Dinesh Gundu Rao) ಮನೆ ಅರ್ಧ ಪಾಕಿಸ್ತಾನವಾಗಿದೆ ಎಂದು ಬಸನಗೌಡ ಪಾಟೀಲ್ ಯತ್ನಾಳ್(Basanagouda Patil Yatnal) ಹೇಳಿದ್ದರು. ಈ ಹಿನ್ನಲೆ ಯತ್ನಾಳ್ ವಿರುದ್ದ ದಿನೇಶ ಗುಂಡೂರಾವ್ ಪತ್ನಿ ಟಬು ಅವರು ದೂರು ನೀಡಿದ್ದರು. ಇದೀಗ ಈ ವಿಚಾರ ಕುರಿತು ಶಾಸಕ ಯತ್ನಾಳ್ ಸ್ಪಷ್ಟನೆ ನೀಡಿದ್ದಾರೆ.
ವಿಜಯಪುರ, ಏ.10: ಕೆಲದಿನಗಳ ಹಿಂದೆ ಸಚಿವ ದಿನೇಶ್ ಗುಂಡೂರಾವ್ (Dinesh Gundu Rao) ಮನೆ ಅರ್ಧ ಪಾಕಿಸ್ತಾನವಾಗಿದೆ ಎಂದು ಬಸನಗೌಡ ಪಾಟೀಲ್ ಯತ್ನಾಳ್(Basanagouda Patil Yatnal) ಹೇಳಿದ್ದರು. ಈ ಹಿನ್ನಲೆ ಯತ್ನಾಳ್ ವಿರುದ್ದ ದಿನೇಶ ಗುಂಡೂರಾವ್ ಪತ್ನಿ ಟಬು ಅವರು ದೂರು ನೀಡಿದ್ದರು. ಈ ವಿಚಾರಕ್ಕೆ ಸಂಬಂಧಪಟ್ಟಂತೆ ಮಾತನಾಡಿದ ಶಾಸಕ ಯತ್ನಾಳ್, ‘ನಿಮ್ಮ ಮನೆ ಅಂದರೆ ಯಾವುದು? ಅವರ ಮನೆ ಹಿಂಗಿದೆ ಅಂತಾ ಯಾರಿಗೆ ಗೊತ್ತು, ಕಾಂಗ್ರೆಸ್ ಮನೆಯಲ್ಲಿ ಇರುವವರು ಅರ್ಧ ಪಾಕಿಸ್ತಾನ ಏಜೆಂಟರಿದ್ದಾರೆ. ಕಾಂಗ್ರೆಸ್ಸಿಗರು ವಿಧಾನಸಭೆಯಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ್ದನ್ನ ಸಮರ್ಥಿಸಿಕೊಂಡರು, ಅದಕ್ಕೆ ಕಾಂಗ್ರೆಸ್ ಅರ್ಧ ಪಾಕಿಸ್ತಾನ ಇದೆ ಎಂದು ಹೇಳಿದ್ದು, ದಿನೇಶ್ ಗುಂಡೂರಾವ್ ಮನೆಯಲ್ಲಿ ಅಂದರೆ ಕಾಂಗ್ರೆಸ್ನಲ್ಲಿ ಅಂದ ಹಾಗೆ ಎಂದು ಸ್ಪಷ್ಟನೆ ನೀಡಿದರು.
ಕುಂಬಳಕಾಯಿ ಕಳ್ಳ ಅಂದ್ರೆ ಹೆಗಲು ಮುಟ್ಟಿಕೊಂಡು ನೋಡಿದರೆ ಏನು ಮಾಡುವುದು. ನಾನು ಯಾವುದೇ ಸ್ತ್ರೀಲಿಂಗ, ಪುಲ್ಲಿಂಗ್ ಬಳಸಿಲ್ಲ. ಅದನ್ನ ಅವರಿಗೆ ( ಟಬು ) ಅಂದಿರುವುದಾಗಿ ತಿಳಿದುಕೊಂದರೆ ಯತ್ನಾಳ್ ಏನು ಮಾಡಕಾಗಲ್ಲ ಎಂದರು. ಇದೇ ವೇಳೆ ಕಾಂಗ್ರೆಸ್ ಪ್ರಣಾಳಿಕೆ ವಿಚಾರ, ‘ಅವರ ಪ್ರಣಾಳಿಕೆ ಒಂದು ದುರಂತ, 370 ಕಲಂ ಮತ್ತೆ ಜಾರಿಗೆ ತರುತ್ತೇವೆ ಅಂತಾರೆ. ಅಂದರೆ ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಎಂದು ಇವರು ಭಾವಿಸಿಲ್ಲ. ಜೊತೆಗೆ ಅಲ್ಪ ಸಂಖ್ಯಾತರಿಗಾಗಿ ವಿಶೇಷ ಕಾನೂನು ಮಾಡುತ್ತೇವೆ ಅಂತಾರೆ, ಮುಸ್ಲಿಂ ಅವರ ಪರವಾಗಿ ವಿಶೇಷ ಕಾನೂನು ಮಾಡುತ್ತಾರೆ ಅಂದ್ರೆ 5 ವರ್ಷದಲ್ಲಿ ಪಾಕಿಸ್ತಾನ ಮಾಡುತ್ತಾರೆ ಎಂದರ್ಥ. ಇವರಿಗೆ ಮಾನ ಮರ್ಯಾದೆ ಇದೆಯಾ ಎಂದು ವಾಗ್ದಾಳಿ ನಡೆಸಿದರು.
ಇದನ್ನೂ ಓದಿ:ಗುಂಡೂರಾವ್ ಮನೆಯಲ್ಲಿ ಅರ್ಧ ಪಾಕಿಸ್ತಾನವಿದೆ: ಯತ್ನಾಳ್ ವಿರುದ್ಧ ದಿನೇಶ್ ಪತ್ನಿ ಟಬು ರಾವ್ ದೂರು
ಅಯೋದ್ಯ ರಾಮನಿಗೆ ವಿರೋಧ ಮಾಡಿದ ನಾಲಾಯಕರು ಕಾಂಗ್ರೆಸ್ಸಿಗರು
ನೀವು ಒಂದಾದರೂ ಹಿಂದೂಗಳ ಪರವಾಗಿ ಏನಾದರೂ ಮಾಡಿದ್ದೀರಾ? ಎಂದು ಪ್ರಶ್ನಿಸಿದ್ದಾರೆ. ಅಯೋಧ್ಯೆ ರಾಮನಿಗೆ ವಿರೋಧ ಮಾಡಿದ ನಾಲಾಯಕರು ಕಾಂಗ್ರೆಸ್ಸಿಗರು ಎಂದು ಕಿಡಿಕಾರಿದರು. ಇನ್ನು ಈಶ್ವರಪ್ಪ ಮೋದಿ ಫೋಟೋ ಹಾಕಿದ್ದಕ್ಕೆ ದೂರು ವಿಚಾರ, ‘ ಪ್ರಧಾನಿ ಮೋದಿ ಫೋಟೋ ಹಾಕಲು ಯಾರದ್ದೂ ತಕರಾರು ಇಲ್ಲ, ಅವರು ಇಡೀ ಜಗತ್ತಿನ ಲೀಡರ್ ಇದ್ದಾರೆ. ಮೋದಿ ಫ್ಯಾನ್ ಇದ್ದೇನೆ ನಾನು ಅಂದರೆ ಏನು ಮಾಡಕಾಗಲ್ಲ. ಮೋದಿ ಪೋಟೋ ಹಾಕಲು ನಾನು ವಿರೋಧ ಮಾಡಲ್ಲ ಎಂದರು.
ಕಾಂಗ್ರೆಸ್ನವರು ಹತಾಶಯ ಆಗಿದ್ದಾರೆ. ಸಿದ್ಧರಾಮಯ್ಯ ಕೇವಲ ಚಾಮರಾಜನಗರ, ಮೈಸೂರು ಮಾತ್ರ ಓಡಾಡುತ್ತಿದ್ದಾರೆ. ಅವರಿಗೆ ಗೊತ್ತಾಗಿದೆ, ನಾವು ಅಲ್ಲಿಯೇ ಔಟ್ ಆಗುತ್ತೇವೆಂದು. ನಮ್ಮ ವಿಶ್ವನಾಥ್ ಅವರು ಹೇಳಿದ್ದು ಸರಿ ಇದೆ. ರಾಜ್ಯಕ್ಕೆ ಮೈಸೂರು ಮಹರಾಜರ ಕೊಡುಗೆ ಅಪಾರವಾಗಿದೆ. ಏಷ್ಯಾದಲ್ಲೇ ಮೊದಲು ವಿದ್ಯುತ್ ತಂದಿದ್ದು ಮೈಸೂರು ಮಹರಾಜರೇ, ಕಾರಣ ಯಧುವೀರ್ ಅವರು ಅವಿರೋಧವಾಗಿ ಆಯ್ಕೆ ಆಗಿ ಬರಬೇಕು ಎಂದು ಹೇಳಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ