ವಿಜಯಪುರ: ಸಿಂದಗಿ ಉಪ ಚುನಾವಣೆ (Sindagi By Election) ಹಿನ್ನೆಲೆ ಬಿಜೆಪಿ ಅಭ್ಯರ್ಥಿಯಾಗಿ ಮಾಜಿ ಶಾಸಕ ರಮೇಶ್ ಭೂಸನೂರ ಹೆಸರು ಘೋಷಣೆ ಮಾಡಲಾಗಿದೆ. 2008 ಹಾಗೂ 2013 ರಲ್ಲಿ ರಮೇಶ್ ಭೂಸನೂರ ಬಿಜೆಪಿ ಶಾಸಕರಾಗಿದ್ದರು. 2018ರ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಎಂಸಿ ಮನಗೂಳಿ ವಿರುದ್ಧ ಸೋಲು ಕಂಡಿದ್ದರು. ನಾಲ್ಕನೇ ಬಾರಿ ಸ್ಪರ್ಧೆ ಮಾಡಲಿರುವ ಮಾಜಿ ಶಾಸಕ ರಮೇಶ್ ಭೂಸನೂರ ನಾಳೆ (ಅ.8) ನಾಮಪತ್ರ ಸಲ್ಲಿಕೆ ಮಾಡುತ್ತಾರೆ.
ಟಿಕೆಟ್ಗಾಗಿ ತೀವ್ರ ಜಿದ್ದಾಜಿದ್ದಿ ನಡೆದು ಕೊನೆಗೆ ರಮೇಶ್ ಭೂಸನೂರಗೆ ಒಲಿದಿದೆ. ಇವರು ಎರಡು ಬಾರಿ ಸತತವಾಗಿ ಬಿಜೆಪಿ ಶಾಸಕರಾಗಿದ್ದರು. ಹಲವರು ಟಿಕೆಟ್ ಆಕಾಂಕ್ಷಿಗಳಿದ್ದರು. ಆದರೆ ಕೇಂದ್ರ ನಾಯಕರು ರಮೇಶ್ ಭೂಸನೂರಗೆ ಟಿಕೆಟ್ ನೀಡಿದ್ದಾರೆ. ಈ ಬಗ್ಗೆ ಟಿವಿ9ಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ಅಭ್ಯರ್ಥಿ ರಮೇಶ್ ಭೂಸನೂರ, ಸಿಂದಗಿ ಕ್ಷೇತ್ರದ ಬಿಜೆಪಿ ಟಿಕೆಟ್ ಸಿಗುವ ದೃಢ ವಿಶ್ವಾಸವಿತ್ತು. 2018ರ ಸೋಲಿನಿಂದಲೇ ಮುಂದಿನ ಚುನಾವಣೆಗೆ ಅಣಿಯಾಗಿದ್ದೆ. ಪ್ರವಾಹ, ಕೊರೊನಾ ವೇಳೆ ಜನಪರ ಸೇವೆ ಮಾಡಿದ್ದೇನೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಅಭಿವೃದ್ದಿ ಕಾರ್ಯಗಳೊಂದಿಗೆ ಮತ ಬೇಡುವೆ ಎಂದು ತಿಳಿಸಿದರು.
ಹಿಂದೆ ಎರಡು ಬಾರಿ ಶಾಸಕನಾಗಿ ಜನಪರ ಕೆಲಸ ಮಾಡಿದ್ದನ್ನು ಜನರ ಮುಂದಿಡುವೆ ಎಂದು ಹೇಳಿಕೆ ನೀಡಿದ ರಮೇಶ್ ಭೂಸನೂರ, ಈ ಬಾರಿಯ ಚುನಾವಣೆಯಲ್ಲಿ ಗೆದ್ದೇ ಗೆಲ್ಲುತ್ತೇನೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಸಹಜವಾಗಿ ಪಕ್ಷದಲ್ಲಿ ಟಿಕೆಟ್ಗಾಗಿ ಬೇಡಿಕೆಯಿತ್ತು. ಕೇಂದ್ರ ಹಾಗೂ ರಾಜ್ಯ ನಾಯಕರು ನನ್ನ ಮೇಲೆ ಭರವಸೆ ನೀಡಿ ಟಿಕೆಟ್ ನೀಡಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.
ಬಿಜೆಪಿ ಆಭ್ಯರ್ಥಿ ರಮೇಶ್ ಭೂಸನೂರ ನಾಳೆ ಮಧ್ಯಾಹ್ನ 12 ಕ್ಕೆ ನಾಮಪತ್ರ ಸಲ್ಲಿಸುತ್ತಾರೆ. ಈ ವೇಳೆ ಸಚಿವರಾದ ಗೋವಿಂದ ಕಾರಜೋಳ, ವಿ ಸೋಮಣ್ಣ, ಸಂಸದ ರಮೇಶ ಜಿಗಜಿಣಗಿ, ಮಾಜಿ ಸಚಿವ ಲಕ್ಷ್ಮಣ ಸವದಿ ಸೇರಿದಂತೆ ಜಿಲ್ಲೆಯ ಶಾಸಕರು ಭಾಗಿಯಾಗಲಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ
ಉಪ ಚುನಾವಣೆ ಅಭ್ಯರ್ಥಿಗಳ ಪಟ್ಟಿ ರಾಜ್ಯಾಧ್ಯಕ್ಷರಿಗೆ, ಉಮೇದುವಾರಿಕೆ ಬಗ್ಗೆ ಹೈಕಮಾಂಡ್ ತೀರ್ಮಾನ: ಸಿಟಿ ರವಿ
‘ಪುಷ್ಪ’ ಚಿತ್ರದ ಒಂದೇ ಹಾಡಿನಲ್ಲಿ ಡ್ಯಾನ್ಸ್ ಮಾಡಲು 2 ಕೋಟಿ ರೂ. ಸಂಬಳ ಕೇಳಿದ ನೋರಾ ಫತೇಹಿ
Published On - 10:49 am, Thu, 7 October 21