ಯಡಿಯೂರಪ್ಪಗೆ ವಯಸ್ಸಾಗಿದೆ ಇನ್ಮೇಲೆ ಆರಾಮಾಗಿರಬೇಕು, ಸುಖಾಸುಮ್ಮನೇ ಯಾಕೆ ಹೈರಾಣಾಗುತ್ತಾರೆ -ಶಾಸಕ ಯತ್ನಾಳ್‌

| Updated By: ಆಯೇಷಾ ಬಾನು

Updated on: Mar 13, 2022 | 4:44 PM

ಯಡಿಯೂರಪ್ಪಗೆ ವಯಸ್ಸಾಗಿದೆ ಇನ್ಮೇಲೆ ಆರಾಮಾಗಿರಬೇಕು. ಸುಖಾಸುಮ್ಮನೇ ಯಾಕೆ ಹೈರಾಣಾಗುತ್ತಾರೆ. ಬಿಎಸ್‌ವೈ ನೇತೃತ್ವದಲ್ಲಿ ಬಿಜೆಪಿಗೆ 100-104 ಸೀಟ್‌ ಬರುತ್ತಿತ್ತು. ಪಕ್ಷದಲ್ಲಿ ಸೆಕೆಂಡ್ ಲೈನ್ ಲೀಡರ್ ಶಿಪ್ ಬಂದಿದೆ. -ಬಿಜೆಪಿ ಶಾಸಕ ಯತ್ನಾಳ್ ತಿಳಿಸಿದ್ದಾರೆ.

ಯಡಿಯೂರಪ್ಪಗೆ ವಯಸ್ಸಾಗಿದೆ ಇನ್ಮೇಲೆ ಆರಾಮಾಗಿರಬೇಕು, ಸುಖಾಸುಮ್ಮನೇ ಯಾಕೆ ಹೈರಾಣಾಗುತ್ತಾರೆ -ಶಾಸಕ ಯತ್ನಾಳ್‌
ಬಸನಗೌಡ ಪಾಟೀಲ ಯತ್ನಾಳ್
Follow us on

ವಿಜಯಪುರ: ರಾಜ್ಯಾದ್ಯಂತ ಪ್ರವಾಸ ಮಾಡಿ ಪಕ್ಷ ಸಂಘಟನೆ ಮಾಡುವುದಾಗಿ ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ ನೀಡಿದ ಹೇಳಿಕೆಗೆ ಶಾಸಕ ಯತ್ನಾಳ್ ಟಾಂಗ್‌ ಕೊಟ್ಟಿದ್ದಾರೆ. ಯಡಿಯೂರಪ್ಪಗೆ ವಯಸ್ಸಾಗಿದೆ ಇನ್ಮೇಲೆ ಆರಾಮಾಗಿರಬೇಕು. ಸುಖಾಸುಮ್ಮನೇ ಯಾಕೆ ಹೈರಾಣಾಗುತ್ತಾರೆ. ಬಿಎಸ್‌ವೈ ನೇತೃತ್ವದಲ್ಲಿ ಬಿಜೆಪಿಗೆ 100-104 ಸೀಟ್‌ ಬರುತ್ತಿತ್ತು. ಪಕ್ಷದಲ್ಲಿ ಸೆಕೆಂಡ್ ಲೈನ್ ಲೀಡರ್ ಶಿಪ್ ಬಂದಿದೆ. ನಾವೆಲ್ಲಾ ಸೇರಿ 130 ಸೀಟ್ ದಾಟಿಸುತ್ತೇವೆ ಎಂದು ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ತೊರವಿ ತಾಂಡಾ 4ರ ಬಳಿ ಬಿಜೆಪಿ ಶಾಸಕ ಯತ್ನಾಳ್ ತಿಳಿಸಿದ್ದಾರೆ.

ಇನ್ನು ಇದೇ ವೇಳೆ ಅವರು, ಪಂಚರಾಜ್ಯ ಚುನಾವಣೆ ಫಲಿತಾಂಶ ಬಳಿಕ ರಾಜ್ಯ ನಾಯಕತ್ವ ಬದಲಾವಣೆ ಕುರಿತು ಚರ್ಚೆ ನಡೆಯುತ್ತಿದೆ. ದೆಹಲಿಯ ಮಟ್ಟದಲ್ಲಿ ಏನು ನಡೆದಿದೆ ಎಂಬ ಬಗ್ಗೆ ಸುಳಿವಿಲ್ಲ. ನಾಯಕತ್ವ ಬದಲಾವಣೆ ಬಗ್ಗೆ ವರಿಷ್ಠರು ತೀರ್ಮಾನ ಕೈಗೊಳ್ತಾರೆ. ವರಿಷ್ಠರ ನಿರ್ಧಾರಕ್ಕೆ ನಾವೆಲ್ಲರೂ ಬದ್ಧರಾಗಿರುತ್ತೇವೆ ಎಂದು ಯತ್ನಾಳ್ ಹೇಳಿದ್ರು.

ಸಿಎಂ ಬಸವರಾಜ ಬೊಮ್ಮಾಯಿ 2 ಕ್ಷೇತ್ರಗಳಲ್ಲಿ ಸ್ಪರ್ಧೆ ವಿಚಾರಕ್ಕೆ ಸಂಬಂಧಿಸಿ ಬಿಜೆಪಿ ಶಾಸಕ ಯತ್ನಾಳ್ ಪ್ರತಿಕ್ರಿಯೆ ನೀಡಿದ್ದಾರೆ. ಬಿಜೆಪಿಯಲ್ಲಿ ಒಬ್ಬರಿಗೆ ಎರಡು ಕ್ಷೇತ್ರಗಳಿಗೆ ಟಿಕೆಟ್ ಕೊಡಲ್ಲ. ಮೋದಿಗೆ ಒಮ್ಮೆ 2 ಕ್ಷೇತ್ರಗಳಲ್ಲಿ ಸ್ಪರ್ಧೆಗೆ ಅವಕಾಶ ನೀಡಿದ್ದರು. ಇದನ್ನು ಬಿಟ್ಟರೆ ಎರಡು ಕ್ಷೇತ್ರಗಳಲ್ಲಿ ಸ್ಪರ್ಧೆಗೆ ಅವಕಾಶ ನೀಡಿಲ್ಲ. ಸಿಎಂ ಬೊಮ್ಮಾಯಿ ಸಹ ಒಂದೇ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಾರೆ. ಒಂದೇ ಕುಟುಂಬದವರು ಸಂಸದ, ಶಾಸಕ, ಜಿ.ಪಂ ಅಧ್ಯಕ್ಷರಾದ್ರೆ ಇವರ ಮನೆ ಮುಂದೆ ಕಾರ್ಯಕರ್ತರು ಗಂಟೆ ಹೊಡೆಯಬೇಕಾ? ಎಂದರು.

ಯಾಱರದ್ದೋ ಕೈಯಲ್ಲಿ ರಾಜ್ಯ ಸಿಕ್ಕರೆ ಬಿಹಾರದಂತೆ ಆಗುತ್ತೆ
ರಾಜ್ಯಕ್ಕೆ ಒಳ್ಳೆಯ ವ್ಯಕ್ತಿ ರಾಜ್ಯದ ಮುಖ್ಯಮಂತ್ರಿ ಆಗಬೇಕು. ಯಾಱರದ್ದೋ ಕೈಯಲ್ಲಿ ರಾಜ್ಯ ಸಿಕ್ಕರೆ ಬಿಹಾರದಂತೆ ಆಗುತ್ತೆ. ಇದೇ ವಿಚಾರವಾಗಿ ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಅವರಿಗೆ ಸದನದಲ್ಲೇ ಮನವಿ ಮಾಡಿದ್ದೇನೆ. ದೇಶದಲ್ಲಿ ಬಿಜೆಪಿಗೆ ಒಳ್ಳೆಯ ವಾತಾವರಣ ನಿರ್ಮಾಣವಾಗಿದೆ. ಪಂಚರಾಜ್ಯಗಳ ಚುನಾವಣೆ ಫಲಿತಾಂಶದ ಬಳಿಕ ಕಾಂಗ್ರೆಸ್ ನತ್ತ ಮುಖ ಮಾಡಿದವರು ಮೌನವಾಗಿದ್ದಾರೆ ಎಂದು ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಲು ಮುಂದಾಗಿದ್ದ ಕೆಲ ನಾಯಕರಿಗೆ ಯತ್ನಾಳ್ ಟಾಂಗ್ ಕೊಟ್ಟಿದ್ದಾರೆ.

ರಾಜ್ಯದಲ್ಲಿ ಅವಧಿಪೂರ್ವ ವಿಧಾನಸಭಾ ಚುನಾವಣೆ ನಡೆಯಲ್ಲ. ರಾಜ್ಯದಲ್ಲಿ ಸಂಪುಟ ಪುನಾರಚನೆ ನೂರಕ್ಕೆ ನೂರರಷ್ಟು ಖಚಿತ. ಸಚಿವ ಸ್ಥಾನಕ್ಕೆ ನಾನು ಯಾವುದೇ ಲಾಬಿ ಮಾಡಿಲ್ಲ. ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆ ಹಿರಿಯ ಸಚಿವರಿಗೆ ಪಕ್ಷದ ಜವಾಬ್ದಾರಿಯನ್ನು ಕೊಡಬಹುದು ಎಂದರು.

ಇದನ್ನೂ ಓದಿ: ಕಾಂಗ್ರೆಸ್ ಒಗ್ಗಟ್ಟಾಗಿರಲು ಗಾಂಧಿ ಕುಟುಂಬ ಮುಖ್ಯ, ರಾಹುಲ್ ಗಾಂಧಿ ಅಧ್ಯಕ್ಷರಾಗಬೇಕು: ಅಶೋಕ್ ಗೆಹ್ಲೋಟ್

ಮಹಿಳೆಯರಲ್ಲಿ ಕಾಣಿಸಿಕೊಳ್ಳುವ PCOD ಸಮಸ್ಯೆಯ ಸತ್ಯಾಸತ್ಯತೆಗಳೇನು? ಇಲ್ಲಿದೆ ಮಾಹಿತಿ