ಮಹಿಳೆಯರಲ್ಲಿ ಕಂಡುಬರುವ ಸಾಮಾನ್ಯ ಸಮಸ್ಯೆಗಳಲ್ಲಿ ಪಿಸಿಒಡಿ (PCOD) ಅಥವಾ ಪಿಸಿಒಎಸ್ (PCOS) ಸಮಸ್ಯೆ ಮುಖ್ಯವಾದದ್ದು. ಪಾಲಿಸಿಸ್ಟಿಕ್ ಓವರಿ ಡಿಸೀಸ್ (Polycystic Ovary Disease) ಎನ್ನುವ ಈ ಸಮಸ್ಯೆ 10ರಲ್ಲಿ ಒಬ್ಬ ಮಹಿಳೆಯಲ್ಲಿ ಕಂಡುಬರುವ ಸಮಸ್ಯೆಯಾಗಿದೆ. ಪಿಸಿಓಎಸ್‌ನಿಂದ ಬಳಲುತ್ತಿರುವ ಮಹಿಳೆಯರಲ್ಲಿ ಅತಿಯಾದ ದೇಹದ ಕೂದಲು, ತೂಕ ಹೆಚ್ಚಾಗುವುದು, ಮೊಡವೆಗಳು ಮತ್ತು ಕೆಲವೊಮ್ಮೆ ಬಂಜೆತನದಂತಹ ದೈಹಿಕ ಸಮಸ್ಯೆಗಳು ಕಾಣಿಸಿಕೊಳ್ಲುತ್ತದೆ. ಈ ಪಿಸಿಒಡಿ ಅಥವಾ ಪಿಸಿಒಎಸ್ಅನ್ನು ನಿರ್ಲಕ್ಷಿಸಿದರೆ ಖಿನ್ನತೆ, ಆತಂಕ ಮತ್ತು ಬೈಪೋಲಾರ್ ಡಿಸಾರ್ಡರ್‌ನಂತಹ ಮಾನಸಿಕ ಆರೋಗ್ಯ ಸಮಸ್ಯೆಗಳು ಉಲ್ಬಣಿಸುವ ಸಾಧ್ಯತೆಯಿರುತ್ತದೆ. ಅಲ್ಲದೆ ಪಿಸಿಓಡಿ ದೀರ್ಘಾವಧಿಗೆ ಮುಂದುವರೆದರೆ ಎಂಡೊಮೆಟ್ರಿಯಂನ ಕ್ಯಾನ್ಸರ್ ಅಂದರೆ ಗರ್ಭಾಶಯದ ಕ್ಯಾನ್ಸರ್ ಗೆ ಕಾರಣವಾಗಬಹುದು. ಈ ಕುರಿತು ಹಿಂದೂಸ್ತಾನ್ ಟೈಮ್ಸ್ ಜೊತೆ ಡಾ.ನೀಲಮ್ ಜೈನ್ ಎನ್ನುವವರು ಮಾತನಾಡಿ ನಿರ್ದಿಷ್ಟ ಆಹಾರ ಮತ್ತು ವ್ಯಾಯಾಮದ ಅಭ್ಯಾಸದಿಂದ ಪಿಸಿಒಎಸ್‌ಗೆ ಸಂಬಂಧಿಸಿದ ರೋಗಲಕ್ಷಣಗಳನ್ನು ತಡೆಗಟ್ಟಬಹುದಾಗಿದೆ. ಏಕೆಂದರೆ ಇದು ಇನ್ಸುಲಿನ್ ಪ್ರತಿರೋಧ ಮತ್ತು ರಕ್ತದಲ್ಲಿನ ಉಚಿತ ಆಂಡ್ರೊಜೆನ್ ಮಟ್ಟವನ್ನು ಕಡಿಮೆ ಮಾಡುವ ಮೂಲಕ ಅವಧಿಗಳನ್ನು ಕ್ರಮಬದ್ಧಗೊಳಿಸಲು ಸಹಾಯ ಮಾಡುತ್ತದೆ ಎನ್ನುತ್ತಾರೆ.
ಈ ಪಿಸಿಒಡಿ ಅಥವಾ ಪಿಸಿಒಎಸ್ ಸಮಸ್ಯೆಯ ಬಗ್ಗೆ ಒಂದಷ್ಟು ತಪ್ಪುಕಲ್ಪನೆಗಳಿವೆ ಅದನ್ನು ಹೋಗಲಾಡಿಸಿಕೊಂಡರೆ ಯಾವ ರೀತಿಯ ಚಿಕಿತ್ಸೆ ಅಥವಾ ಜೀವನಶೈಲಿಯನ್ನು ಅಳವಡಿಸಿಕೊಳ್ಳಬಹುದು ಎನ್ನುವುದು ತಿಳಿಯುತ್ತದೆ ಎನ್ನುವ ಡಾ. ನೀಲಮ್ ಪಿಸಿಒಎಸ್ ಬಗ್ಗೆ ಇರುವ ಮಿಥ್ಯೆಗಳೇನು ಹಾಗೂ ಅದರ ಸತ್ಯ ಅಂಶವೇನು ಎನ್ನುವುದನ್ನು ತಿಳಿಸಿಕೊಟ್ಟಿದ್ದಾರೆ.
ಇದನ್ನೂ ಓದಿ:
Joint Pain: ಈ ಆಹಾರಗಳು ಕೀಲು ನೋವನ್ನು ಅಧಿಕಗೊಳಿಸಬಹುದು