ಮುದ್ದೇಬಿಹಾಳ; ಶಸ್ತ್ರಚಿಕಿತ್ಸೆಗೊಳಗಾದ ಮಹಿಳೆಯರನ್ನು ನೆಲದ ಮೇಲೆ ಮಲಗಿಸಿದ ತಾಲೂಕು ಆಸ್ಪತ್ರೆ ಸಿಬ್ಬಂದಿ

| Updated By: Rakesh Nayak Manchi

Updated on: Feb 29, 2024 | 10:59 AM

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕು ಆಸ್ಪತ್ರೆಯಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಎದುರಿಸುತ್ತಿದೆ. ಎರಡೆಡರು ಬೆಡ್​ಗಳನ್ನು ಜೋಡಿಸಿ ಶಸ್ತ್ರ ಚಿಕಿತ್ಸೆಗೊಳಗಾದ ಮಹಿಳೆಯರನ್ನು ಮಲಗಿಸಿ ಆರೈಕೆ ಮಾಡಲಾಗುತ್ತಿದೆ. ಇದನ್ನು ಪ್ರಶ್ನಿಸಿದರೆ ಬೆಡ್ ಗಳ ಕೊರತೆಯಿಂದ ಈ ಕ್ರಮ ಕೈಗೊಂಡಿದ್ದೇವೆ ಎಂದು ವೈದ್ಯಾಧಿಕಾರಿಗಳು ಹೇಳುತ್ತಿದ್ದಾರೆ. ಆಸ್ಪತ್ರೆಯ ವೈದ್ಯರ ಹಾಗೂ ಸಿಬ್ಬಂದಿಗಳ ವಿರುದ್ಧ ಕ್ರಮಕ್ಕೆ ಸ್ಥಳಿಯರು ಆಗ್ರಹಿಸಿದ್ದು. ಆಸ್ಪತ್ರೆಯಲ್ಲಿ ಸೂಕ್ತ ಸೌಕರ್ಯಗಳನ್ನು ಕಲ್ಪಿಸುವಂತೆ ಒತ್ತಾಯಿಸಿದ್ದಾರೆ.

ಮುದ್ದೇಬಿಹಾಳ; ಶಸ್ತ್ರಚಿಕಿತ್ಸೆಗೊಳಗಾದ ಮಹಿಳೆಯರನ್ನು ನೆಲದ ಮೇಲೆ ಮಲಗಿಸಿದ ತಾಲೂಕು ಆಸ್ಪತ್ರೆ ಸಿಬ್ಬಂದಿ
ಮುದ್ದೇಬಿಹಾಳ; ಶಸ್ತ್ರಚಿಕಿತ್ಸೆಗೊಳಗಾದ ಮಹಿಳೆಯರನ್ನು ನೆಲೆ ಮೇಲೆ ಮಲಗಿಸಿದ ತಾಲೂಕು ಆಸ್ಪತ್ರೆ ಸಿಬ್ಬಂದಿ
Follow us on

ವಿಜಯಪುರ, ಫೆ.29: ಜಿಲ್ಲೆಯ ಮುದ್ದೇಬಿಹಾಳ ತಾಲೂಕು ಆಸ್ಪತ್ರೆಯಲ್ಲಿ (Muddebihal Taluk Hospital) ಮೂಲಭೂತ ಸೌಕರ್ಯಗಳಲ್ಲಿ ಒಂದಾಗಿರುವ ಬೆಡ್​ಗಳ ಕೊರತೆಯಿಂದಾಗಿ ಎರಡೆರಡು ಬೆಡ್​ಗಳನ್ನು ಜೋಡಿಸಿ ಸಂತಾನ ಹರಣ ಶಸ್ತ್ರ ಚಿಕಿತ್ಸೆಗೆ ಒಳಗಾದ ಐದಾರು ಮಹಿಳೆಯರನ್ನ ಮಲಗಿಸಲಾಗಿದೆ. ಅಷ್ಟೇ ಅಲ್ಲದೆ, ನೆಲದ ಮೇಲೆ ಚಾಪೆ ಹಾಸಿ ಅದರಲ್ಲಿ ಕೆಲವು ಮಹಿಳೆಯರಿಗೆ ಆರೈಕೆ ಮಾಡಲಾಗುತ್ತಿದೆ.

ಘಟನೆಯ ಕುರಿತು ಮಾತನಾಡಿದ ಆಸ್ಪತ್ರೆಯ ವೈಧ್ಯಾಧಿಕಾರಿ ಡಾಕ್ಟರ್ ಅನಿಲ್ ಕುಮಾರ್ ಶೇಗುಣಸಿ, ಪ್ರತಿ ತಿಂಗಳು ಎರಡು ಬಾರಿ ಮಹಿಳೆಯರಿಗೆ ಸಂತಾನರಣಶಾಸ್ತ್ರ ತೆಗೆಸಿ ಮಾಡಲಾಗುತ್ತದೆ. ಪ್ರತಿ ತಿಂಗಳ ಮೊದಲ ವಾರ ಹಾಗೂ ಕೊನೆಯ ವಾರದಲ್ಲಿ ಶಸ್ತ್ರಚಿಕಿತ್ಸೆ ಮಾಡುತ್ತೇವೆ. ನಿನ್ನೆ ಫೆಬ್ರುವರಿ ತಿಂಗಳ ಎರಡನೇ ಬಾರಿಯ ಶಸ್ತ್ರ ಚಿಕಿತ್ಸೆಗಳನ್ನ ಮಾಡಿದ್ದೇವೆ ಎಂದರು.

ಐವತ್ತು ಬೆಡ್​ಗಳ ಆಸ್ಪತ್ರೆಯಲ್ಲಿ 25 ಮಹಿಳೆಯರಿಗೆ ಮಾತ್ರ ಸಂತಾನ ಹರಣ ಶಸ್ತ್ರಚಿಕಿತ್ಸೆ ಮಾಡಲಾಗುತ್ತದೆ. ನಿನ್ನೆ ಸುಮಾರು 48 ಜನ ಮಹಿಳೆಯರು ಸಂತಾನ ಹರಣ ಶಸ್ತ್ರ ಚಿಕಿತ್ಸೆಗೆ ಆಗಮಿಸಿದ್ದರು. ನಾವು ಕೇವಲ 25 ಮಹಿಳೆಯರಿಗೆ ಮಾತ್ರ ಶಸ್ತ್ರಚಿಕಿತ್ಸೆ ಮಾಡುವುದಾಗಿ ಹೇಳಿದ್ದೆವು. ಬೇರೆ ಬೇರೆ ಊರುಗಳಿಂದ ಬಂದಿದ್ದೇವೆ ನಮ್ಮೆಲ್ಲರಿಗೂ ಶಸ್ತ್ರ ಸಿಗುತ್ತೆ ಮಾಡಬೇಕೆಂದು ಮಹಿಳೆಯರು ಮನವಿ ಮಾಡಿದ್ದರು ಎಂದರು.

ಇದನ್ನೂ ಓದಿ: ಶಸ್ತ್ರಚಿಕಿತ್ಸೆ ವೈಫಲ್ಯದಿಂದ ಮೂವರು ಮಹಿಳೆಯರು ಸಾವು: ಗುತ್ತಿಗೆ ವೈದ್ಯೆ ಸೇರಿ ಮೂವರು ಸೇವೆಯಿಂದ ವಜಾ

ಬೆಡ್ ಕೊರತೆ ಅವರಿಗೆ ಮೊದಲೇ ಹೇಳಿದ್ದೇವು. ಆಸ್ಪತ್ರೆಯಲ್ಲಿರುವ ಬೆಡ್​ಗಳಲ್ಲೇ ಹೊಂದಾಣಿಕೆ ಮಾಡಿಕೊಳ್ಳುವುದಾಗಿ ಮಹಿಳೆಯರು ಹೇಳಿದ್ದರು. ಹೀಗಾಗಿ ಮಾನವೀಯತೆ ಆಧಾರದ ಮೇಲೆ 48 ಜನ ಮಹಿಳೆಯರಿಗೂ ನಿನ್ನೆ ಸಂತಾನ ಹರಣ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ. ಬೆಡ್ ನೀಡಬಾರದು ಎಂಬ ಉದ್ದೇಶದಿಂದ ನಾವು ಮಾಡಿಲ್ಲ. ಮುಂದಿನ ಬಾರಿ 25 ಮಹಿಳೆಯರಿಗೆ ಮಾತ್ರ ಶಸ್ತ್ರ ಚಿಕಿತ್ಸೆ ಮಾಡುತ್ತೇವೆ ಎಂದರು.

ಮುದ್ದೇಬಿಹಾಳ ತಾಲೂಕು ಆಸ್ಪತ್ರೆಯಲ್ಲಿ ನಿನ್ನೆ ನಡೆದ ಘಟನೆ ಕುರಿತು ಮಾಹಿತಿ ಪಡೆದಿದ್ದೇನೆ. ಈ ಕುರಿತು ಇನ್ನು ಹೆಚ್ಚಿನ ಮಾಹಿತಿಯನ್ನು ಕಲೆಹಾಕಿ ಕ್ರಮ ತೆಗೆದುಕೊಳ್ಳಲಾಗುತ್ತದೆ. ಶಸ್ತ್ರ ಚಿಕಿತ್ಸೆಗೆ ಬಂದ ಮಹಿಳೆಯರ ಮನವಿ ಮೇರೆಗೆ ಹೆಚ್ಚಿನ ಜನರಿಗೆ ಸಂತಾನ ಹರಣ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಬೆಡ್​ಗಳ ಸಂಖ್ಯೆಯನ್ನು ಹೆಚ್ಚಿಸಲಾಗುವುದು ಅಥವಾ 25 ಜನ ಮಹಿಳೆಯರಿಗೆ ಮಾತ್ರ ಶಾಸ್ತ್ರ ಹರಣ ಚಿಕಿತ್ಸೆ ಮಾಡಲಾಗುತ್ತದೆ ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಶಿವಾನಂದ್ ಹುಬ್ಬಳ್ಳಿ ಹೇಳಿದ್ದಾರೆ.

ಶಸ್ತ್ರ ಚಿಕಿತ್ಸೆಗೊಳಗಾದ ಮಹಿಳೆಯರು ಡಿಸ್ಚಾರ್ಜ್

ಬೆಡ್​ಗಳ ಕೊರತೆಯಿಂದಾಗಿ ಸರಿಯಾದ ರೀತಿಯಲ್ಲಿ ಶಸ್ತ್ರ ಚಿಕಿತ್ಸೆಗ ಒಳಗಾದವರಿಗೆ ಆರೈಕೆ ಮಾಡದ ಬಗ್ಗೆ ಟಿವಿ9 ವರದಿ ಪ್ರಸಾರ ಮಾಡುತ್ತಿದ್ದಂತೆ ಆಸ್ಪತ್ರೆಯಲ್ಲಿದ್ದ ಆರೈಕೆಯಲ್ಲಿದ್ದ ಮಹಿಳೆಯರೆಲ್ಲರೂ ಡಿಸ್ಚಾರ್ಜ್ ಆಗಿದ್ದಾರೆ. ಇಂದು ಬೆಳಿಗ್ಗೆ ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:56 am, Thu, 29 February 24