ವಿಜಯಪುರದಲ್ಲಿ 5 ಸಾವಿರ ರೂ.ಗೆ ಮಗು ಮಾರಾಟ: ಜಿಲ್ಲಾಸ್ಪತ್ರೆಯ ಸ್ಟಾಫ್​​ ನರ್ಸ್ ಅಮಾನತು, ಗಂಡ ಅರೆಸ್ಟ್, ಮಗು ಇನ್ನೂ ಪತ್ತೆಯಿಲ್ಲ

Child selling: ಪ್ರಕರಣದಲ್ಲಿ ಸ್ಟಾಫ್​​ ನರ್ಸ್ ಕಸ್ತೂರಿಯ ಪತಿ ಮಂಜುನಾಥ​ನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಆದರೆ ಈ ಮಧ್ಯೆ ಮಗು ಇನ್ನೂ ಪತ್ತೆಯಾಗಿಲ್ಲ. ಜಿಲ್ಲಾ ಪೊಲೀಸರಿಂದ ಶೋಧ ಕಾರ್ಯ ನಡೆದಿದೆ.

ವಿಜಯಪುರದಲ್ಲಿ 5 ಸಾವಿರ ರೂ.ಗೆ ಮಗು ಮಾರಾಟ: ಜಿಲ್ಲಾಸ್ಪತ್ರೆಯ ಸ್ಟಾಫ್​​ ನರ್ಸ್ ಅಮಾನತು, ಗಂಡ ಅರೆಸ್ಟ್, ಮಗು ಇನ್ನೂ ಪತ್ತೆಯಿಲ್ಲ
ಸಾಂದರ್ಭಿಕ ಚಿತ್ರ

ವಿಜಯಪುರ: ವಿಜಯಪುರ ಜಿಲ್ಲೆಯಲ್ಲಿ ಮಗು ಮಾರಾಟ ಪ್ರಕರಣ ನಡೆದಿದ್ದು ಹೆತ್ತಮ್ಮ 5,000 ರೂಪಾಯಿಗೆ ಗಂಡು ಮಗು ಮಾರಾಟ ಮಾಡಿರುವುದು ವರದಿಯಾಗಿದೆ. ತಿಕೋಟಾ ತಾಲೂಕಿನ ಬಿಜ್ಜರಗಿ ಗ್ರಾಮದ ರೇಣುಕಾ ಮಗು ಮಾರಾಟ ಮಾಡಿರುವ ಮಹಿಳೆ ಎಂದು ತಿಳಿದುಬಂದಿದೆ.

ಈ ಸಂಬಂಧ ಸೆಪ್ಟೆಂಬರ್ 12ರಂದು ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಜಿಲ್ಲಾಸ್ಪತ್ರೆಯ ಸ್ಟಾಫ್​​ ನರ್ಸ್ ಕಸ್ತೂರಿ ಮತ್ತು ಆಕೆ ಪತಿಯ ಕೈವಾಡ ಶಂಕೆ ವ್ಯಕ್ತವಾಗಿತ್ತು. ಆಗಸ್ಟ್​ 26ರಂದು ಜಿಲ್ಲಾಸ್ಪತ್ರೆ ಆವರಣದಲ್ಲೇ ಈ ಮಗು ಮಾರಾಟವಾಗಿರುವ ಶಂಕೆ ವ್ಯಕ್ತವಾಗಿದೆ.

ಪ್ರಕರಣದಲ್ಲಿ ಜಿಲ್ಲಾಸ್ಪತ್ರೆಯ ಸ್ಟಾಫ್​​ ನರ್ಸ್ ಕಸ್ತೂರಿ ಅವರನ್ನು ಸೇವೆಯಿಂದ ಅಮಾನತು ಮಾಡಿ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಎಸ್​ ಎಲ್​ ಲಕ್ಕಮ್ಮಣವರ ಆದೇಶಿಸಿದ್ದಾರೆ. ಸ್ಟಾಫ್​​ ನರ್ಸ್ ಕಸ್ತೂರಿಯ ಪತಿ ಮಂಜುನಾಥ​ನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಆದರೆ ಈ ಮಧ್ಯೆ ಮಗು ಇನ್ನೂ ಪತ್ತೆಯಾಗಿಲ್ಲ. ಜಿಲ್ಲಾ ಪೊಲೀಸರಿಂದ ಶೋಧ ಕಾರ್ಯ ನಡೆದಿದೆ.

(child sold in vijayapura district hospital staff nurse suspended baby boy not yet found)

Read Full Article

Click on your DTH Provider to Add TV9 Kannada