ವಿಜಯಪುರ, ಸೆ.01: ಜಿಲ್ಲೆಯ ನಿಡಗುಂದಿ ತಾಲೂಕಿನ ಆಲಮಟ್ಟಿ (Alamatti) ಬಳಿಯಿರುವ ಕೃಷ್ಣೆಯ ಜಲಧಿಗೆ ನಾಳೆ (ಸೆ.2) ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಗಂಗಾ ಪೂಜೆ ನೆರವೇರಿಸಿ ಬಾಗಿನ ಅರ್ಪಿಸಲಿದ್ದಾರೆ. ಈ ಹಿನ್ನಲೆ ಅಬಕಾರಿ ಹಾಗೂ ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವ ಆರ್ಬಿ ತಿಮ್ಮಾಪುರ ಸೇರಿದಂತೆ ವಿಜಯಪುರ ಜಿಲ್ಲಾಧಿಕಾರಿ ಟಿ ಭೂಬಾಲನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹೆಚ್ಡಿ ಆನಂದಕುಮಾರ್ ಬಾಗಿನ ಅರ್ಪಣೆಯ ಸಿದ್ಧತೆ ಮತ್ತು ಹೆಲಿಪ್ಯಾಡ್ ಆವರಣ ಪರಿಶೀಲನೆ ನಡೆಸಿದರು.
ಇನ್ನು ಪರಿಶೀಲನೆ ವೇಳೆ ಅಗತ್ಯ ಇರುವ ಅಧಿಕಾರಿಗಳನ್ನು ಮಾತ್ರ ಡ್ಯಾಂ ಆವರಣದಲ್ಲಿ ಬಿಡಲು ಸಚಿವ ತಿಮ್ಮಾಪುರ ಅವರು ಕಟ್ಟು ನಿಟ್ಟಾಗಿ ಸೂಚಿಸಿದರು. ಬಾಗಿನ ಅರ್ಪಣೆಯ ಸ್ಥಳ, ಹೆಲಿಪ್ಯಾಡ್ ಸ್ಥಳಕ್ಕೆ ತೆರಳಿ ಅಲ್ಲಿಯೂ ಪರಿಶೀಲಿಸಿದರು. ಬಾಗಲಕೋಟೆ ಜಿಲ್ಲಾಧಿಕಾರಿ ಕೆ ಎಂ ಜಾನಕಿ, ಬಾಗಲಕೋಟೆ ಜಿಲ್ಲಾ ಪಂಚಾಯತಿ ಸಿಇಓ ಶಶಿಧರ ಕುರೇರ ಕೆಬಿಜೆಎನ್ ಎಲ್ಎಂಡಿ ಬಿ.ಎಸ್ ಶಿವಕುಮಾರ, ಸೂಪರಿಂಟೆಂಡಿಂಗ್ ಸೇರಿದಂತೆ ಇತರರು ಹಾಜರಿದ್ದರು.
ಇದನ್ನೂ ಓದಿ:ಹಾಸನ: ಬಾಗಿನ ಹೆಸರಿನಲ್ಲಿ ಶಾಸಕ ಪ್ರೀತಂಗೌಡರಿಂದ ಮತದಾರರಿಗೆ ಭರ್ಜರಿ ಗಿಫ್ಟ್, ವಿಡಿಯೋ ವೈರಲ್
ಆಲಮಟ್ಟಿಯಲ್ಲಿ ಬಾಗಿನ ಅರ್ಪಣೆಯ ಸಿದ್ಧತೆಗಳು ಭರದಿಂದ ಸಾಗಿವೆ. ಅಲಮಟ್ಟಿ ಡ್ಯಾಂ ಆವರಣದ ವೃತ್ತಗಳ ಅಲಂಕಾರ, ಬಾಗಿನ ಅರ್ಪಿಸುವ ಸ್ಥಳದ ಅಲಂಕಾರ ಸೇರಿದಂತೆ ಎಲ್ಲೆಡೆ ಹೂವು, ವಿದ್ಯುತ್ ದೀಪದಲ್ಲಿ ಅಲಂಕಾರ ಮಾಡಲಾಗಿದೆ. ಬಣ್ಣ ಬಣ್ಣದ ಬೆಳಕಿನ ವ್ಯವಸ್ಥೆಯನ್ನು ಮಾಡಲಾಗುತ್ತಿದೆ. ಬಾಗಿನ ಅರ್ಪಣೆಯ ಸ್ಥಳದಲ್ಲಿಯೂ ಹೂವು, ಕುಂಡಾಲಿಗಳನ್ನಿಟ್ಟು ಅಲಂಕಾರ ಮಾಡಲಾಗುತ್ತಿದೆ.
ಇನ್ನು ಸಿಎಂ ಆಗಮನದ ಹಿನ್ನಲೆ ಎಸ್ಪಿ ಅವರ ನೇತೃತ್ವದಲ್ಲಿ ಭದ್ರತೆ ನಿಯೋಜಿಸಲಾಗಿದೆ. ಓರ್ವ ಎಎಸ್ಪಿ, 4 ಡಿಎಸ್ಪಿ, 7 ಜನ ಇನ್ಸಪೆಕ್ಟರ್ಸ್ 31 ಪಿಎಸ್ಐ, ಎಎಸೈ 20, ಹಾಗೂ 260 ಹೆಡ್ ಕಾನ್ಸಸ್ಟೇಬಲ್ ಹಾಗೂ ಕಾನ್ಸಸ್ಟೇಬಲ್ಸ್ ಗಳು, ಕೆಎಸ್ಆರ್ಪಿ 2 ತುಕಡಿ, ಡಿಎಆರ್ 4 ತುಕಡಿ ಭದ್ರತೆಗೆ ನಿಯೋಜನೆ ಮಾಡಲಾಗಿದೆ. ಯಾವುದೇ ಲೋಪವಾಗದಂತೆ ಭದ್ರತೆಯನ್ನು ಮಾಡಲಾಗಿದ್ದು, ಆಲಮಟ್ಟಿ ಡ್ಯಾಂ ಆವರಣದಲ್ಲಿನ ಕೆಲ ಮಾರ್ಗಗಳ ಬದಲಾವಣೆಗಳನ್ನೂ ಮಾಡಲಾಗಿದೆ.
ಇದನ್ನೂ ಓದಿ:ವರಮಹಾಲಕ್ಷ್ಮಿ ಪ್ರಯುಕ್ತ ಮನೆ ಮನೆಗೆ ತೆರಳಿ ಬಾಗಿನ ನೀಡಿದ ಶಾಸಕ ಪ್ರದೀಪ್ ಈಶ್ವರ್
ಒಟ್ಟಾರೇ ಆಲಮಟ್ಟಿ ಮಧುವಣಗಿತ್ತಿಯಂತೆ ಶ್ರೀಂಗಾರಗೊಂಡಿದೆ. ಬಾಗಿನ ಅರ್ಪಣೆಯ ಕಾರ್ಯಕ್ರಮದಲ್ಲಿ ಸಿಎಂ ಜೊತೆಗೆ ಡಿಸಿಎಂ ಹಾಗೂ ಜಲಸಂಪನ್ಮೂಲ ಸಚಿವವರಾಗಿರೋ ಡಿ.ಕೆ ಶಿವಕುಮಾರ್, ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ ಬಿ ಪಾಟೀಲ್, ಸಹಕಾರಿ ಸಚಿವ ಶಿವಾನಂದ ಪಾಟೀಲ್, ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವ ಆರ್ಬಿ ತಿಮ್ಮಾಪುರ ಹಾಗೂ ಅವಳಿ ಜಿಲ್ಲೆಗಳ ಜನಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ.
ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ