Mahashivratri 2023: ಕೇಸರಿ ಶಾಲಿನಲ್ಲಿ ಮಿಂಚಿದ ಕಾಂಗ್ರೆಸ್ ನಾಯಕರು

| Updated By: ವಿವೇಕ ಬಿರಾದಾರ

Updated on: Feb 18, 2023 | 11:38 AM

ಮಹಾಶಿವರಾತ್ರಿ ಹಿನ್ನೆಲೆ ಇಂದು (ಫೆ.17) ಕಾಂಗ್ರೆಸ್ ನಾಯಕರು ವಿಜಯಪುರ ಜಿಲ್ಲೆಯ ಐತಿಹಾಸಿಕ 770 ಲಿಂಗಳಿರುವ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆದರು.

ವಿಜಯಪುರ: ರಾಜ್ಯ ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದೆ. ರಾಜಕೀಯ ನಾಯಕರು ಮತಗಳ ಕ್ರೋಢಿಕರಣಕ್ಕೆ ಹೊಸ ಹೊಸ ತಂತ್ರಗಳನ್ನು ರೂಪಿಸುತ್ತಿದ್ದಾರೆ. ಇದರ ಭಾಗವಾಗಿ ರಾಜ್ಯ ಕಾಂಗ್ರೆಸ್​ ನಾಯಕರು ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ನಾಯಕರು ಕೇಸರಿ ಶಾಲನ್ನು ಧರಿಸಿದ್ದು, ಗಮನ ಸೆಳೆಯಿತು.  ಮಹಾಶಿವರಾತ್ರಿ ನಿಮಿತ್ತ ಇಂದು (ಫೆ.17) ವಿಜಯಪುರ ಜಿಲ್ಲೆಯ ಐತಿಹಾಸಿಕ 770 ಲಿಂಗಳಿರುವ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆದರು.

ಈ ವೇಳೆ ಕೈ ನಾಯಕರು ಕೇಸರಿ ಶಾಲನ್ನು ಹಾಕಿಕೊಂಡು ಮಿಂಚಿದರು. ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ(Randeep Surjewala), ಎಂಬಿ ಪಾಟೀಲ್ (MB Patil), ಸಲಿಂ ಅಹಮದ್, ಸತೀಶ ಜಾರಕಿಹೊಳಿ (Satish Jarkiholi) ಸೇರಿದಂತೆ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ಶಿವಲಿಂಗಕ್ಕೆ ಪೂಜೆ ಸಲ್ಲಿಸಿದರು.

Published On - 11:21 am, Sat, 18 February 23