ವಿಜಯಪುರದಲ್ಲಿ ಶಿಕ್ಷಕಿಯ ಬರ್ಬರ ಹತ್ಯೆ, ಪುತ್ರನ ಮೇಲೆ ಮಾರಣಾಂತಿಕ ಹಲ್ಲೆ; ಬೆಚ್ಚಿಬಿದ್ದ ಇಂಡಿ ಪಟ್ಟಣದ ಜನ

| Updated By: ಕಿರಣ್ ಹನುಮಂತ್​ ಮಾದಾರ್

Updated on: Feb 21, 2023 | 8:12 PM

ಜಿಲ್ಲೆಯ ಇಂಡಿ ಪಟ್ಟಣದ ಗಣೇಶ ನಗರ ಬಳಿ ಸರ್ಕಾರಿ ಶಾಲಾ ಶಿಕ್ಷಕಿಯನ್ನ ಮಾರಕಾಸ್ತ್ರಗಳಿಂದ ಹಲ್ಲೆಗೈದು ಹತ್ಯೆ ಮಾಡಲಾಗಿದ್ದು, ಬಳಿಕ ಪುತ್ರನ ಮೇಲೂ ಹಲ್ಲೆ ಮಾಡಿದ್ದಾರೆ.

ವಿಜಯಪುರದಲ್ಲಿ ಶಿಕ್ಷಕಿಯ ಬರ್ಬರ ಹತ್ಯೆ, ಪುತ್ರನ ಮೇಲೆ ಮಾರಣಾಂತಿಕ ಹಲ್ಲೆ; ಬೆಚ್ಚಿಬಿದ್ದ ಇಂಡಿ ಪಟ್ಟಣದ ಜನ
ವಿಜಯಪುರದ ಇಂಡಿಯಲ್ಲಿ ಶಾಲಾ ಶಿಕ್ಷಕಿಯ ಬರ್ಬರ ಹತ್ಯೆ
Follow us on

ವಿಜಯಪುರ: ಸರ್ಕಾರಿ ಶಾಲಾ ಶಿಕ್ಷಕಿಯನ್ನ ಮಾರಕಾಸ್ತ್ರಗಳಿಂದ ಹಲ್ಲೆಗೈದು ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ಇಂಡಿ ಪಟ್ಟಣದ ಗಣೇಶ ನಗರ ಬಳಿ ನಡೆದಿದೆ. ದಿಲ್ಶಾದ್ ಹವಾಲ್ದಾರ್ ಕೊಲೆಯಾದ ಸರ್ಕಾರಿ ಶಾಲಾ ಶಿಕ್ಷಕಿ, ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ದಿಲ್ಶಾದ್ ಸಾವನ್ನಪ್ಪಿದ ಬಳಿಕ ದುಷ್ಕರ್ಮಿಗಳು ಆಕೆಯ ಪುತ್ರ ಮುಜಾಮಿಲ್ ಚಕ್ಲೆರ್ ಮೇಲೂ ಹಲ್ಲೆ ಮಾಡಿದ್ದಾರೆ. ಮುಜಾಮಿಲ್​ಗೆ ತೀವ್ರ ಗಾಯಗಳಾಗಿದ್ದು, ವಿಜಯಪುರ ನಗರದ ಖಾಸಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಸ್ಥಳಕ್ಕೆ ಹಿರಿಯ ಪೊಲೀಸ್ ಆಧಿಕಾರಿಗಳ ಭೇಟಿ ಪರಿಶೀಲನೆ ನಡೆಸುತ್ತಿದ್ದು, ಇಂಡಿ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಾಗರಾಜ್ ಚಲವಾದಿ ಕೊಲೆ ಪ್ರಕರಣ; ಇಬ್ಬರು ಅಪ್ರಾಪ್ತ ಬಾಲಕರು ಸೇರಿ ಏಳು ಜನರ ಬಂಧನ

ಹುಬ್ಬಳ್ಳಿ: ರವಿವಾರ(ಫೆ.19) ನೇಕಾರ ನಗರದಲ್ಲಿ 32 ವರ್ಷದ ನಾಗರಾಜ್ ಚಲವಾದಿಯನ್ನ ಕಣ್ಣಿಗೆ ಖಾರದ ಪುಡಿ ಎರಚಿ ತಲ್ವಾರ್​ನಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿದ್ದರು. ಬಳಿಕ ಪರಾರಿಯಾಗಿದ್ದ ಹಂತಕರನ್ನ ಘಟನೆ ನಡೆದ 48 ಗಂಟೆಗಳಲ್ಲಿ ಹಳೇ ಹುಬ್ಬಳ್ಳಿ ಪೊಲೀಸರು ಬಂಧಿಸಿದ್ದಾರೆ. ಸಮೀರ್, ಶಶಿಧರ್, ನಿಖಿಲ್ ಮೇದಾರ, ಗಿರೀಶ್ ಗುಡಿ, ಪ್ರದೀಪ್ ಅಲಿಯಾಸ್​ ಪದ್ಯಾ ಬಂಧಿತ ಆರೋಪಿಗಳು. ಬಂಧಿತರೆಲ್ಲರೂ 25 ವರ್ಷದೊಳಗಿನ ಯುವಕರೇ ಆಗಿದ್ದು, ಹಳೇ ವೈಷಮ್ಯದ ಹಿನ್ನಲೆ ಕೊಲೆ ಮಾಡಿರೋದಾಗಿ ತಪ್ಪೊಪ್ಪಿಕೊಂಡಿದ್ದಾರೆ.

ಇದನ್ನೂ ಓದಿ:ದೊಡ್ಡಬಳ್ಳಾಪುರ: ಕೊಲೆ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿಗಳ ಮೇಲೆ ಪೊಲೀಸ್​​ ಫೈರಿಂಗ್​

ಉಪಾಹಾರ ಸೇವಿಸಿ ಶಾಲಾ ವಿದ್ಯಾರ್ಥಿಗಳು ಅಸ್ವಸ್ಥ ಪ್ರಕರಣ; ಜಿಲ್ಲಾಸ್ಪತ್ರೆಗೆ ಸಂಸದ ಎಸ್.ಮುನಿಸ್ವಾಮಿ ಭೇಟಿ

ಕೋಲಾರ: ಜಿಲ್ಲೆಯ ಕ್ಲಾಕ್ ಟವರ್ ಬಳಿಯ ಸರ್ಕಾರಿ ಉರ್ದು ಪ್ರೌಢಶಾಲೆಯಲ್ಲಿ ಫೆ.17ರಂದು ಉಪಹಾರ ಸೇವಿಸಿ ಉರ್ದು ಶಾಲಾ ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು(ಫೆ.21) ಜಿಲ್ಲಾಸ್ಪತ್ರೆಗೆ ಸಂಸದ ಎಸ್.ಮುನಿಸ್ವಾಮಿ ಭೇಟಿ ನೀಡಿ ವಿದ್ಯಾರ್ಥಿಗಳ ಆರೋಗ್ಯ ವಿಚಾರಿಸಿದರು. ಈಗಷ್ಟೇ ಚೇತರಿಸಿಕೊಳ್ಳುತ್ತಿರುವ ವಿದ್ಯಾರ್ಥಿಗಳಿಗಾಗಿ ಹೊಸ ಸಲಕರಣೆಗಳನ್ನು ಕೊಡಿಸುವುದಾಗಿ ಭರವಸೆ ನೀಡಿದ್ದಾರೆ.

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ