ವಿಜಯಪುರ ಜಿಲ್ಲೆಯಲ್ಲಿ ಕಂಪಿಸಿದ ಭೂಮಿ: 2.4 ತೀವ್ರತೆಯ ಭೂಕಂಪ

| Updated By: ವಿವೇಕ ಬಿರಾದಾರ

Updated on: Jul 25, 2023 | 1:07 PM

ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಮನಗೂಳಿ ಪಟ್ಟಣದಲ್ಲಿ 2.4 ತೀವ್ರತೆಯಲ್ಲಿ ಭೂಮಿ ಕಂಪಿಸಿದೆ.

ವಿಜಯಪುರ ಜಿಲ್ಲೆಯಲ್ಲಿ ಕಂಪಿಸಿದ ಭೂಮಿ: 2.4 ತೀವ್ರತೆಯ ಭೂಕಂಪ
ಭೂಕಂಪ
Follow us on

ವಿಜಯಪುರ: ಜಿಲ್ಲೆಯಲ್ಲಿ ನಿರಂತರ ಜಿಟಿ ಜಿಟಿ ಮಳೆ ಮಧ್ಯೆ ಭೂಕಂಪನದ (Earthquake) ಅನುಭವವಾಗಿದೆ. ಬಸವನಬಾಗೇವಾಡಿ (Basavana Bagewadi) ತಾಲೂಕಿನ ಮನಗೂಳಿ ಪಟ್ಟಣದಲ್ಲಿ ಇಂದು (ಜು.25) ಬೆಳಿಗ್ಗೆ 9:55ಕ್ಕೆ 2.4 ತೀವ್ರತೆಯಲ್ಲಿ ಭೂಮಿ ಕಂಪಿಸಿದೆ. ಮನಗೂಳಿ ಪಟ್ಟಣದಿಂದ 2.9 ಕಿ.ಮೀ ದೂರದಲ್ಲಿ ಭೂಕಂಪವಾಗಿದೆ. ಭೂಕಂಪನದ ‘ಸೆಸ್ಮಿಕ್ ಇಂಟೆನ್ಸಿಟಿ ಮ್ಯಾಪ್’ ಪ್ರಕಾರ, ತೀವ್ರತೆಯು ತುಂಬಾ ಕಡಿಮೆ ಇದೆ. ಭೂಮಿಯ 15 ರಿಂದ 20 ಕಿಮೀ ಆಳದಲ್ಲಿ ಕಂಪನವಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC) ತಿಳಿಸಿದೆ.

ಇದನ್ನೂ ಓದಿ: ಜಿಟಿ ಜಿಟಿ ಮಳೆಗೆ ವಿಜಯಪುರದಲ್ಲಿ ಕುಸಿದು ಬಿದ್ದ ಸಾರ್ವಜನಿಕ ಶೌಚಾಲಯದ, ಮೂವರು ಮಹಿಳೆಯರಿಗೆ ಗಾಯ

ಇನ್ನು ನಿರಂತರ ಮಳೆಯಿಂದ ಕೃಷ್ಣಾ ನದಿಗೆ ಒಳಹರಿವು ಹೆಚ್ಚಿದ್ದು, ಆಲಮಟ್ಟಿ ಜಲಾಶಯದಲ್ಲಿ ನೀರಿನ ಪ್ರಮಾಣ ಏರಿಕೆಯಾಗಿದೆ.  ಲಾಲ್ ಬಹಾದ್ದೂರ್ ಶಾಸ್ತ್ರೀ ಸಾಗರ (ಆಲಮಟ್ಟಿ ಡ್ಯಾಂ)ನ ಇಂದಿನ ‌ನೀರಿನ‌ ಮಟ್ಟ 515.89 ಮೀಟರ್ ಇದೆ. ಒಳಹರಿವು 1,16,263 ಕ್ಯೂಸೆಕ್ ಇದೆ.  ಹೊರ ಹರಿವು : 8,857 ಕ್ಯೂಸೆಕ್​. ಜಿಲ್ಲೆಯಲ್ಲಿ ಕಳೆದ 24 ಗಂಟೆಗಳಲ್ಲಿ 14 ಮಿಮೀ ಮಳೆಯಾಗಿದೆ.

ಮನೆ ಮೇಲ್ಛಾವಣಿ ಕುಸಿದು ವೃದ್ಧೆ ಸಾವು

ಮನೆ ಮೇಲ್ಛಾವಣಿ ಕುಸಿದು ವೃದ್ಧೆ ಸಾವನ್ನಪ್ಪಿರುವ ಘಟನೆ ವಿಜಯಪುರ ತಾಲೂಕಿನ ಕನ್ನೂರು ಗ್ರಾಮದಲ್ಲಿ ನಡೆದಿದೆ.  ಶಿವಮ್ಮ ಸಾವಳಗಿ(60) ಮೃತ ದುರ್ದೈವಿ. ನಿನ್ನೆ (ಜು.24) ರಾತ್ರಿ ಸುರಿದ ಮಳೆಯಿಂದ ಮೇಲ್ಛಾವಣಿ ಬಿದ್ದು ಅವಘಡ ಸಂಭವಿಸಿದೆ. ವಿಜಯಪುರ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 12:46 pm, Tue, 25 July 23