ಭ್ರಷ್ಟಾಚಾರದ ಅಡ್ಡೆಯಾಗಿದೆಯಾ ವಿಜಯಪುರ ಜಿಲ್ಲಾ ಅಬಕಾರಿ‌ ಇಲಾಖೆ? ಬಾರ್​ ಮಾಲೀಕರಿಗೆ ಹಣಕ್ಕೆ ಬೇಡಿಕೆ ಇಟ್ಟ ವಿಡಿಯೋ ವೈರಲ್

| Updated By: ಆಯೇಷಾ ಬಾನು

Updated on: Nov 03, 2022 | 11:25 AM

ಭ್ರಷ್ಟಾಷಾರದ ಅಡ್ಡೆಯಾಗಿದೆಯಾ ಜಿಲ್ಲಾ ಅಬಕಾರಿ‌ ಇಲಾಖೆ! ಬಾರ್ ಮಾಲೀಕರಿಂದ ವಸೂಲಿ ಮಾಡುತ್ತಿದ್ದಾರಾ ಅಧಿಕಾರಿಗಳು?. ಮುದ್ದೇಬಿಹಾಳ ಅಬಕಾರಿ ಅಧಿಕಾರಿ ಮಾತನಾಡಿರೋ ವಿಡಿಯೋ ವೈರಲ್​

ಭ್ರಷ್ಟಾಚಾರದ ಅಡ್ಡೆಯಾಗಿದೆಯಾ ವಿಜಯಪುರ ಜಿಲ್ಲಾ ಅಬಕಾರಿ‌ ಇಲಾಖೆ? ಬಾರ್​ ಮಾಲೀಕರಿಗೆ ಹಣಕ್ಕೆ ಬೇಡಿಕೆ ಇಟ್ಟ ವಿಡಿಯೋ ವೈರಲ್
ಬಾರ್​ ಮಾಲೀಕರಿಗೆ ಹಣಕ್ಕೆ ಬೇಡಿಕೆ ಇಟ್ಟ ವಿಡಿಯೋ ವೈರಲ್
Follow us on

ವಿಜಯಪುರ: ಅಬಕಾರಿ ಇಲಾಖೆ ಅಧಿಕಾರಿಗಳು ಬಾರ್ ಮಾಲೀಕರಿಂದ ಹಣ ವಸೂಲಿ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಮೇಲಾಧಿಕಾರಿಗಳಿಂದ ಹಿಡಿದು ಸ್ಥಳೀಯ ಅಧಿಕಾರಿಗಳು ಇದರಲ್ಲಿ ಶಾಮೀಲಾಗಿದ್ದಾರೆ ಎನ್ನಲಾಗಿದೆ. ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ಅಬಕಾರಿ ಅಧಿಕಾರಿ ಮಾತನಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಮುದ್ದೇಬಿಹಾಳ ತಾಲೂಕಿನ ಬಾರ್ ಮಾಲೀಕರೊಂದಿಗೆ ಅಬಕಾರಿ ಇನ್ಸ್ಪೆಕ್ಟರ್ ಡೀಲ್ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಮುದ್ದೇಬಿಹಾಳ ತಾಲೂಕು ಅಬಕಾರಿ ಇನ್ಸ್ಪೆಕ್ಟರ್ ಜ್ಯೋತಿ ಮೇತ್ರಿ, ಬಾರ್ ಮಾಲೀಕರೊಂದಿಗೆ ಮಾತನಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ನನ್ನ ಪಾಲಿನ ಹಣ‌ ಕೊಡಿ ಎಂದು ಜ್ಯೊತಿ ಮೇತ್ರಿ ಡಿಮ್ಯಾಂಡ್ ಮಾಡಿದ್ದಾರೆ. ಅಬಕಾರಿ ಇಲಾಖೆಯ ಕಚೇರಿಯಲ್ಲೇ ಕೊಟ್ಟು ತಗೋ ವ್ಯವಹಾರದ ಬಗ್ಗೆ ಮಾತುಕತೆ ನಡೆದಿದೆ. ಓರ್ವ ಬಾರ್ ಮಾಲೀಕ ಡೀಲ್ ಕುರಿತ ಮಾತುಕತೆಯನ್ನು ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿದ್ದಾರೆ. ಇಲಾಖೆ ಇತರೆ ಸಿಬ್ಬಂದಿಗಳು ಸಹ ಇದರಲ್ಲಿ ಶಾಮೀಲಾಗಿರೋ ಸಾಧ್ಯತೆ ಇದೆ. ಅಬಕಾರಿ ಇಲಾಖೆ ಅಧಿಕಾರಿಗಳ ನಡೆ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಇನ್ನು ಅಬಕಾರಿ ಇಲಾಖೆ ಇನ್ಸ್ಪೆಕ್ಟರ್ ಹಾಗೂ ಬಾರ್ ಮಾಲೀಕರ ಮದ್ಯೆ ಸಂಭಾಷಣೆಯಾಗಿದ್ದು ಕೊಡೋದು ಕೊಡಿ, ಇಲ್ಲದಿದ್ದರೆ ಚೆನ್ನಾಗಿರಲ್ಲ ಎಂದು ಅಬಕಾರಿ ಇನ್ಸ್ಪೆಕ್ಟರ್ ಜ್ಯೋತಿ ಮೇತ್ರಿ ಆವಾಜ್ ಹಾಕಿದ್ದಾರೆ. ಡಿಸಿಗೆ ಕೊಟ್ಟೀರಿ, ಜೆಸಿಗೆ ಕೊಟ್ಟಿರಿ, ನಮ್ಮದ್ಯಾಕೆ ಕೊಡಲ್ಲ ಎಂದು ವಾದ ಮಾಡಿದ್ದಾರೆ. ಜೂನ್, ಜುಲೈ ತಿಂಗಳದ್ದು ಬಾಕಿ‌ ಉಳಿದಿದೆ ಕೊಡಬೇಕು ಎಂದು ಮಹಿಳಾ ಅಧಿಕಾರಿ ವಾದ ಮಾಡಿದ್ದಾರೆ. ಆಯ್ತು ಮೇಡಂ ತಂದು ಕೊಡ್ತೀವಿ ಎಂದು ಬಾರ್ ಮಾಲೀಕರು ಒಪ್ಪಿಕೊಂಡಿದ್ದಾರೆ. ಒಂದೊಂದು ಬಾರ್ ಗೆ 15 ಸಾವಿರದಂತೆ ಕೊಡಿ ಎಂದು ಮಾತನಾಡಿದ ವಿಡಿಯೋ ವೈರಲ್ ಆಗಿದೆ.

ದುಬಾರಿ ಬೆಲೆಗೆ ಬಾರ್​ಗಳಿಗೆ ಕನ್ನಡಾಂಬೆ ಫೋಟೊ ಮಾರಿದ ಅಬಕಾರಿ ಇಲಾಖೆ: ಫೋಟೊಗಳಲ್ಲಿ ಅನ್ಯ ಬಾವುಟ: ವ್ಯಾಪಕ ಆಕ್ರೋಶ

ಬೆಂಗಳೂರು: ಕನ್ನಡ ರಾಜ್ಯೋತ್ಸವದ ಹೆಸರಿನಲ್ಲಿ ಅಬಕಾರಿ ಇಲಾಖೆಯು ಅಕ್ರಮವಾಗಿ ಹಣ ಲೂಟಿ ಮಾಡಿದೆ ಎಂಬ ಆರೋಪಗಳು ವ್ಯಾಪಕವಾಗಿ ಕೇಳಿಬಂದಿವೆ. ಬೆಂಗಳೂರಿನ ಬಾರ್, ವೈನ್ಸ್, ಪಬ್​​ಗಳಿಗೆ ಭುವನೇಶ್ವರಿ ಫೋಟೊ ನೀಡಿ ₹ 1 ಸಾವಿರದಿಂದ ₹ 5 ಸಾವಿರದವರೆಗೆ ಹಣ ಪಡೆಯಲಾಗಿದೆ ಎಂಬ ಆರೋಪಗಳು ಕೇಳಿ ಬಂದಿವೆ. ಈ ಚಿತ್ರಗಳಲ್ಲಿರುವ ಕನ್ನಡಾಂಬೆ ಭುವನೇಶ್ವರಿಯ ಪ್ರತೀಕವಾಗಿರುವ ಕಲಾಕೃತಿಗಳಲ್ಲಿ ಕನ್ನಡ ಬಾವುಟದ ಬದಲು ಬೇರೊಂದು ಬಾವುಟ ಕಾಣಿಸಿಕೊಂಡಿರುವುದು ಜನರಲ್ಲಿ ಆಕ್ರೋಶ ಮೂಡಿಸಿದೆ. ಹಲವು ಬಾರ್​ ಮಾಲೀಕರು ಸಹ ಅಬಕಾರಿ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಣ ಮಾಡುವ ಧಾವಂತದಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳು ಭುವನೇಶ್ವರಿಗೆ ಅವಮಾನ ಮಾಡಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ. ಕನ್ನಡ ರಾಜ್ಯೋತ್ಸವ ಸಂದರ್ಭವನ್ನೇ ಬಂಡವಾಳ ಮಾಡಿಕೊಂಡಿರುವ ಅಧಿಕಾರಿಗಳು ಭುವನೇಶ್ವರಿಯ ಕೈಗೆ ಕೆಂಪು-ಹಳದಿಯ ಕನ್ನಡ ಬಾವುಟದ ಬದಲು ಬೇರೆ ಬಾವುಟ ನೀಡಿದ್ದಾರೆ ಎಂದು ದೂರಲಾಗಿದೆ. ಭುವನೇಶ್ವರಿ ಫೋಟೋ ಮೇಲೆ ಕನ್ನಡ ಸಾಹಿತ್ಯ ಪರಿಷತ್ತಿನ ಚಿಹ್ನೆಯೂ ಇದೆ.

Published On - 11:15 am, Thu, 3 November 22