AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಾಣ ಹೋಗಿದ್ರೂ ಔಷಧಿ ಬಿಲ್ ಕಟ್ಟಿಸ್ಕೊಂಡ ಆಸ್ಪತ್ರೆ, ಸಂಬಂಧಿಗಳ ಆರೋಪ

ವಿಜಯಪುರ: ಪ್ರಾಣಕ್ಕಿಂತ ಹಣ ಮುಖ್ಯವಲ್ಲ, ಇಂದಲ್ಲ ನಾಳೆ ದುಡ್ಡು ಸಂಪಾದನೆ ಮಾಡ್ಬೋದು. ಆದ್ರೆ ಹೋದ ಜೀವ ವಾಪಸ್ ಬರಲ್ಲ ಅಂತಾ ಅವ್ರು ಇದ್ದಬದ್ದದ್ದನ್ನೆಲ್ಲಾ ಮಾರಿ ಆಸ್ಪತ್ರೆಗೆ ಕಟ್ಟಿದ್ರು. ಆದ್ರೆ ಆಸ್ಪತ್ರೆಯವ್ರು ಮಾತ್ರ ಜೀವ ಇಲ್ಲದಿದ್ರೂ ಸುಳ್ಳು ಕಥೆ ಕಟ್ಟಿ ಲಕ್ಷ ಲಕ್ಷ ಹಣ ಪೀಕಿದ್ದಾರಂತೆ. ಪ್ರಾಣ ಹೋದ್ರೂ ಔಷಧಿ ಬಿಲ್ ಕಟ್ಟಿಸಿಕೊಂಡು ಮೋಸ..?  ವಿಜಯಪುರ ನಗರದ ಯಶೋಧರಾ ಸೂಪರ್ ಸ್ಪೆಷಾಲಿಟಿ ಹಾಸ್ಪಿಟಲ್ ವಿರುದ್ಧ ಇಂಥಾದ್ದೊಂದು ಆರೋಪ ಕೇಳಿ ಬಂದಿದೆ. ಇಂಡಿ ತಾಲೂಕಿನ ತಡವಲಗಾ ಗ್ರಾಮದ 38 ವರ್ಷದ […]

ಪ್ರಾಣ ಹೋಗಿದ್ರೂ  ಔಷಧಿ ಬಿಲ್ ಕಟ್ಟಿಸ್ಕೊಂಡ ಆಸ್ಪತ್ರೆ, ಸಂಬಂಧಿಗಳ ಆರೋಪ
Follow us
ಸಾಧು ಶ್ರೀನಾಥ್​
|

Updated on: Feb 19, 2020 | 2:58 PM

ವಿಜಯಪುರ: ಪ್ರಾಣಕ್ಕಿಂತ ಹಣ ಮುಖ್ಯವಲ್ಲ, ಇಂದಲ್ಲ ನಾಳೆ ದುಡ್ಡು ಸಂಪಾದನೆ ಮಾಡ್ಬೋದು. ಆದ್ರೆ ಹೋದ ಜೀವ ವಾಪಸ್ ಬರಲ್ಲ ಅಂತಾ ಅವ್ರು ಇದ್ದಬದ್ದದ್ದನ್ನೆಲ್ಲಾ ಮಾರಿ ಆಸ್ಪತ್ರೆಗೆ ಕಟ್ಟಿದ್ರು. ಆದ್ರೆ ಆಸ್ಪತ್ರೆಯವ್ರು ಮಾತ್ರ ಜೀವ ಇಲ್ಲದಿದ್ರೂ ಸುಳ್ಳು ಕಥೆ ಕಟ್ಟಿ ಲಕ್ಷ ಲಕ್ಷ ಹಣ ಪೀಕಿದ್ದಾರಂತೆ.

ಪ್ರಾಣ ಹೋದ್ರೂ ಔಷಧಿ ಬಿಲ್ ಕಟ್ಟಿಸಿಕೊಂಡು ಮೋಸ..?  ವಿಜಯಪುರ ನಗರದ ಯಶೋಧರಾ ಸೂಪರ್ ಸ್ಪೆಷಾಲಿಟಿ ಹಾಸ್ಪಿಟಲ್ ವಿರುದ್ಧ ಇಂಥಾದ್ದೊಂದು ಆರೋಪ ಕೇಳಿ ಬಂದಿದೆ. ಇಂಡಿ ತಾಲೂಕಿನ ತಡವಲಗಾ ಗ್ರಾಮದ 38 ವರ್ಷದ ಸಂಗಮೇಶ ಗಂಗಶೆಟ್ಟಿ ಜನವರಿ 10 ರಂದು ಅಪಘಾತದಲ್ಲಿ ಗಾಯಗೊಂಡಿದ್ರು. ಈ ವೇಳೆ ಸಂಗಮೇಶರನ್ನ ಯಶೋಧರಾ ಹಾಸ್ಪಿಟಲ್​ಗೆ ದಾಖಲು ಮಾಡಿದ್ರು. ಚಿಕಿತ್ಸೆಗೆ ಅಂತಾ ಸಂಗಮೇಶ್ ಕುಟುಂಬಸ್ಥರಿಂದ ಆಸ್ಪತ್ರೆಯವ್ರು 8 ರಿಂದ 10 ಲಕ್ಷ ರೂಪಾಯಿ ಖರ್ಚು ಮಾಡಿಸಿದ್ದಾರಂತೆ. ಜೀವ ಉಳಿದ್ರೆ ಸಾಕು ಅಂತಾ ಕುಟುಂಬಸ್ಥರು ಮನೆ ಹಾಗೂ ಜಮೀನು ಮಾರಿ ಹಣ ಕಟ್ಟಿದ್ದಾರಂತೆ.

ಹಾಗೆ ಬೇರೆ ಆಸ್ಪತ್ರೆಗೆ ಕರ್ಕೊಂಡು ಹೋಗ್ತೇವಂದ್ರೂ ನಾವೇ ಚಿಕಿತ್ಸೆ ಕೊಡ್ತೀವಂತ ಉಳಿಸಿಕೊಂಡಿದ್ರಂತೆ. ಜತೆಗೆ ಮೊನ್ನೆ ಮಧ್ಯಾಹ್ನ 3 ಗಂಟೆ ವೇಳೆ ಸಂಗಮೇಶನಿಗೆ ಔಷಧಿ ಬೇಕೆಂದು ತರಿಸಿಕೊಂಡು 4 ಗಂಟೆ ವೇಳೆಗೆ ಹೃದಯಾಘಾತವಾಗಿ ಮೃತಪಟ್ಟಿದ್ದಾನೆಂದು ತಿಳಿಸಿದ್ದಾರಂತೆ. ಹೀಗಾಗಿ ಕುಟುಂಬಸ್ಥರು ಆಸ್ಪತ್ರೆಯವ್ರು ಸತ್ತಿದ್ದನ್ನ ಮುಚ್ಚಿಟ್ಟು ಹಣ ಪಡೆದಿದ್ದಾರೆಂದು ಆರೋಪಿಸಿದ್ದಾರೆ.

ವಿಜಯಪುರದಲ್ಲಿ ಆಸ್ಪತ್ರೆ ಎದುರು ಸಂಬಂಧಿಕರ ಪ್ರತಿಭಟನೆ: ಇನ್ನು ಇದೇ ವಿಚಾರವಾಗಿ ಮೃತ ಸಂಗಮೇಶ ಹಾಗೂ ವೈದ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ಮಾತಿಗೆ ಮಾತು ಬೆಳೆದು ಕೈ ಕೈ ಮಿಲಾಯಿಸಿದರು. ಆಸ್ಪತ್ರೆಯಲ್ಲಿ ಉದ್ವಿಗ್ನದ ವಾತಾವರಣ ಉಂಟಾಗ್ತಿದ್ದಂತೆ ಸ್ಥಳಕ್ಕೆ ಬಂದ ಆದರ್ಶ ನಗರ ಪೊಲೀಸರು ಪರಸ್ಥಿತಿಯನ್ನು ತಿಳಿಗೊಳಿಸಿದ್ರು. ಆದ್ರೆ ಆಸ್ಪತ್ರೆಯ ವೈದ್ಯರು ಮಾತ್ರ ಈ ಸಂಗಮೇಶ್ ಕುಟುಂಬಸ್ಥರ ಆರೋಪವನ್ನ ಅಲ್ಲಗಳೆದಿದ್ದಾರೆ. ನಾವು ರೋಗಿಯನ್ನು ಬದುಕಿಸಲು ಪ್ರಯತ್ನ ಮಾಡಿದ್ದೇವೆ ವಿನಃ ಬೇರೆ ಉದ್ದೇಶವಲ್ಲಾ ಎಂದಿದ್ದಾರೆ.

ಇಲ್ಲಿ ವೈದ್ಯರು ತಪ್ಪು ಮಾಡಿದ್ರೋ ಅಥವಾ ಚಿಕಿತ್ಸೆಗೆ ಫಲಿಸದೆ ಶಿವಾನಂದ್ ಮೃತಪಟ್ಟನೋ.. ಆದ್ರೆ ಮನೆ ಯಜಮಾನನನ್ನ ಕಳ್ಕೊಂಡ ಕುಟುಂಬಸ್ಥರು ಮಾತ್ರ ಕಣ್ಣೀರಿಡ್ತಿದ್ದಾರೆ.