ಪ್ರಧಾನಿ ಮೋದಿ ಅಭಿವೃದ್ಧಿ ಕೆಲಸ ಒಪ್ಪಿಕೊಳ್ಳದವರ ವಿರುದ್ಧ ಮಾಜಿ ಸಚಿವ ಎಸ್​ಕೆ ಬೆಳ್ಳುಬ್ಬಿ ವಿವಾದಾತ್ಮಕ ಹೇಳಿಕೆ

| Updated By: ಗಂಗಾಧರ​ ಬ. ಸಾಬೋಜಿ

Updated on: Sep 09, 2023 | 5:31 PM

ಪ್ರಧಾನಿ ನರೇಂದ್ರ ಮೋದಿ ಕಳೆದ 9 ವರ್ಷಗಳಲ್ಲಿ ದೇಶದಲ್ಲಿ ಉತ್ತಮ ಕೆಲಸ ಮಾಡಿದ್ದಾರೆ. ಕಾಂಗ್ರೆಸ್​ನವರಿಗೆ ಹೋಗಿ ಕೇಳಿ ಅವರೂ ಒಪ್ಪಿಕೊಳ್ಳುತ್ತಾರೆ, ಒಪ್ಪಿಕೊಳ್ಳದವರು ಹಾದರಕ್ಕೆ ಹುಟ್ಟಿದಂಗೆ ಎಂದು ಬಿಜೆಪಿ ಮಾಜಿ ಸಚಿವ ಎಸ್​​ಕೆ ಬೆಳ್ಳುಬ್ಬಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಬಿಜೆಪಿ ವತಿಯಿಂದ ವಿಜಪುರದಲ್ಲಿ ಆಯೋಜಿಸಿದ್ದ ‘ನನ್ನ ಮಣ್ಣು ನನ್ನ ದೇಶ’ ಕಾರ್ಯಕ್ರಮದಲ್ಲಿ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ.

ಪ್ರಧಾನಿ ಮೋದಿ ಅಭಿವೃದ್ಧಿ ಕೆಲಸ ಒಪ್ಪಿಕೊಳ್ಳದವರ ವಿರುದ್ಧ ಮಾಜಿ ಸಚಿವ ಎಸ್​ಕೆ ಬೆಳ್ಳುಬ್ಬಿ ವಿವಾದಾತ್ಮಕ ಹೇಳಿಕೆ
ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ
Follow us on

ವಿಜಯಪುರ, ಸೆಪ್ಟೆಂಬರ್​ 9: ಕಳೆದ 9 ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಉತ್ತಮ ಕೆಲಸ ಮಾಡಿದ್ದಾರೆ. ಮೋದಿ ಕೆಲಸಗಳನ್ನು ಒಪ್ಪಿಕೊಳ್ಳದವರು ಹಾದರಕ್ಕೆ ಹುಟ್ಟಿದಂಗೆ. ಕಾಂಗ್ರೆಸ್​ನವರಿಗೆ ಹೋಗಿ ಕೇಳಿ ಅವರೂ ಒಪ್ಪಿಕೊಳ್ಳುತ್ತಾರೆ, ಒಪ್ಪಿಕೊಳ್ಳದವರು ಹಾದರಕ್ಕೆ ಹುಟ್ಟಿದಂಗೆ ಎಂದು ಬಿಜೆಪಿ ಮಾಜಿ ಸಚಿವ ಎಸ್​​ಕೆ ಬೆಳ್ಳುಬ್ಬಿ (SK Bellumbi) ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ನಗರದಲ್ಲಿ ನಡೆದ ಬಿಜೆಪಿ ಪಕ್ಷದ ‘ನನ್ನ ಮಣ್ಣು ನನ್ನ ದೇಶ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿ ಅವರ ಅಭಿವೃದ್ದಿ ಕಾರ್ಯಗಳನ್ನು ಹೇಳುವ ಭರದಲ್ಲಿ ಈ ರೀತಿಯಾಗಿ ಹೇಳಿಕೆ ನೀಡಿದ್ದಾರೆ.

ಪಿಎಂ ಮೋದಿ ಅವರು ಕಳೆದ 9 ವರ್ಷಗಳ ಆಧಿಕಾರಾವಧಿಯಲ್ಲಿ ಅಸಂಖ್ಯಾತ ಕೆಲಸ ಕಾರ್ಯಗಳನ್ನು ಮಾಡಿದ್ದಾರೆ. 9 ವರ್ಷದಲ್ಲಿ ದೇಶದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯವನ್ನು ಮೋದಿ ಅವರು ಮಾಡಿದ್ದಾರೆ.

ಇದನ್ನೂ ಓದಿ: ಬಳ್ಳಾರಿ: ಲೋಕಸಭೆ ಚುನಾವಣೆಗೆ ಸಂಬಂಧಿಸಿದಂತೆ ವಿವಾದಾತ್ಮಕ ಹೇಳಿಕೆ ನೀಡಿದ ಬಸನಗೌಡ ಪಾಟೀಲ್​ ಯತ್ನಾಳ್; ಏನು?

ಕಾಂಗ್ರೆಸ್​​ನವರ ಮನೆಗೆ ಹೋಗಿ ಕೇಳಿ ಬೇಕಾದರೆ ಅಭಿವೃದ್ಧಿ ವಿಚಾರವಾಗಿ ಅವರು ಒಪ್ಪಿಕೊಳ್ಳುತ್ತಾರೆ. ಒಳ್ಳೆಯ ಕೆಲಸವನ್ನು ಒಪ್ಪಲೇಬೇಕು, ಒಪ್ಪದಿದ್ದರೆ ಅವರು ಮನುಷ್ಯರಲ್ಲ ರಾಕ್ಷಸರು. ಅವರು ಭಾರತ ಮಾತೆಯ ಮಕ್ಕಳಲ್ಲ ಹಾದರಕ್ಕೆ ಹುಟ್ಟಿದಂಗೆ ಎಂದು ಆಕ್ಷೇಪಾರ್ಹ ಪದ ಬಳಕೆ ಮಾಡಿದ್ದಾರೆ.

ಭಾರತ ಮಾತೆಗೆ ನಾವು ತಾಯಿ ಎಂದು ಕರೆಯುತ್ತೇವೆ. ತಾಯಿಗೆ ಅವಮಾನ ಮಾಡಿದವರು ಯಾರೇ ಇದ್ದರೂ ಅವರು ದೇಶದ್ರೋಹಿನೇ ಎಂದು ಕಿಡಿಕಾರಿದ್ದಾರೆ.

ಕಾಂಗ್ರೆಸ್​ನವರಿಗೆ 135 ಸೀಟು ಗೆದ್ದ ಮೇಲೆ ದುರಂಹಕಾರ ಬಂದಿದೆ: ಯತ್ನಾಳ್

‘135 ಜನ ಶಾಸಕರಿದ್ರೂ ಲೋಕಸಭೆ ಚುನಾವಣೆ ಎದುರಿಸೋಕೆ ನಿಮಗೆ ನಮ್ಮದೇ *** ಬೇಕು ಅಂದರೆ, ಏನು ಮಾಡೋಣ? ಎಂದು ಬಸನಗೌಡ ಪಾಟೀಲ್​ ಯತ್ನಾಳ್​ ನಿನ್ನೆ ವಿವಾದಾತ್ಮಕ ಹೇಳಿಕೆ ನೀಡಿದ್ದರು.

ಇದನ್ನೂ ಓದಿ: ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆಗೆ ಅವಕಾಶ; ಕೋರ್ಟ್​ ಮೆಟ್ಟಿಲೇರಲು ವಿಪಕ್ಷ ನಾಯಕಿ ಸಿದ್ಧತೆ, ಕಾರಣ ಇಲ್ಲಿದೆ

ಕಾಂಗ್ರೆಸ್​ನವರಿಗೆ 135 ಸೀಟು ಗೆದ್ದ ಮೇಲೆ ದುರಂಹಕಾರ ಬಂದಿದೆ. ಸೂರ್ಯ ಚಂದ್ರರನ್ನು ಅಳುವ ಲೆಕ್ಕಕ್ಕೆ ಹೋಗಿದ್ದಾರೆ. ಡಿಸೆಂಬರ್​ವರೆಗೂ ಈ ಸರ್ಕಾರ ಉಳಿಯುವುದಿಲ್ಲ. ಐದು ವರ್ಷ ಆಳುವುದು ದೂರದ ಮಾತು. ಜವಾಬ್ದಾರಿ ಸ್ಥಾನದಲ್ಲಿ ಇದ್ದವರು ಹಗುರವಾಗಿ ಮಾತನಾಡುತ್ತಾರೆ. ಈ ಸರ್ಕಾರ ಉಳಿಯುವುದಕ್ಕೆ ಸಾಧ್ಯವಿಲ್ಲ. ಪಕ್ಷಕ್ಕೆ ಬೇಸಿಕ್ ಇಲ್ಲ, ಅಸ್ಥಿತ್ವನೇ ಇಲ್ಲ. ಇನ್ನೇನು ಸರ್ಕಾರ ಉಳಿಯುತ್ತದೆ ಎಂದು ಹೇಳಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 5:23 pm, Sat, 9 September 23