ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆಗೆ ಅವಕಾಶ; ಕೋರ್ಟ್​ ಮೆಟ್ಟಿಲೇರಲು ವಿಪಕ್ಷ ನಾಯಕಿ ಸಿದ್ಧತೆ, ಕಾರಣ ಇಲ್ಲಿದೆ

ಗಣೇಶ ಹಬ್ಬಕ್ಕೆ ದಿನಗಣನೆ ಶುರುವಾಗಿದೆ. ನಾಡಿನೆಲ್ಲೆಡೆ ಭರ್ಜರಿ ಗಣೇಶೋತ್ಸವಕ್ಕೆ ಸಿದ್ದತೆಗಳು ಆರಂಭವಾಗಿವೆ. ವಿಘ್ನ ನಿವಾರಕನನ್ನು ಬರ ಮಾಡಿಕೊಳ್ಳಲು ಜನ ಕಾತುರದಿಂದ ಕಾಯುತ್ತಿದ್ದಾರೆ. ಆದ್ರೆ, ಇಲ್ಲೊಂದು ಕಡೆ ಗಣೇಶ ಪ್ರತಿಷ್ಠಾಪನೆ ವಿಚಾರವೂ ಕೋರ್ಟ್ ಮೆಟ್ಟಿಲೇರುವ ಸಾಧ್ಯತೆ ಇದೆ. ಗಣೇಶ ಪ್ರತಿಷ್ಠಾಪನೆ ವಿಚಾರ ಕೋರ್ಟ್ ಮೆಟ್ಟಿಲೇರ್ತಿರೋದು ಎಲ್ಲಿ ಅಂತೀರಾ? ಈ ಸ್ಟೋರಿ ನೋಡಿ.

ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆಗೆ ಅವಕಾಶ; ಕೋರ್ಟ್​ ಮೆಟ್ಟಿಲೇರಲು ವಿಪಕ್ಷ ನಾಯಕಿ ಸಿದ್ಧತೆ, ಕಾರಣ ಇಲ್ಲಿದೆ
ಹುಬ್ಬಳ್ಳಿ ಈದ್ಗಾ ಮೈದಾನ ಗಣಪ ಪ್ರತಿಷ್ಠಾಪನೆ
Follow us
ಶಿವಕುಮಾರ್ ಪತ್ತಾರ್. ಹುಬ್ಬಳ್ಳಿ
| Updated By: ಕಿರಣ್ ಹನುಮಂತ್​ ಮಾದಾರ್

Updated on: Sep 09, 2023 | 4:36 PM

ಹುಬ್ಬಳ್ಳಿ, ಸೆ.09: ಹುಬ್ಬಳ್ಳಿ ಈದ್ಗಾ ಮೈದಾನ (Hubli Eidga Maidan) ವು ಸದಾ ಸುದ್ದಿಯಲ್ಲಿರುತ್ತದೆ. ಇದೀಗ ಇದೇ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆ ವಿಚಾರ ಪ್ರತಿಷ್ಠಯಾಗಿದೆ. ಕಳೆದ ವಾರ ಹುಬ್ಬಳ್ಳಿ-ಧಾರವಾಡ ಮಾಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಮೂರು ದಿನ ಗಣೇಶ ಪ್ರತಿಷ್ಠಾಪನೆಗೆ ಅವಕಾಶ ನೀಡಿ ಠರಾವು ಪಾಸ್ ಮಾಡಲಾಗಿದೆ. ಆದ್ರೆ, ಇದಕ್ಕೆ ಇದೀಗ ವಿಪಕ್ಷಗಳ ವಿರೋಧ ವ್ಯಕವಾಗಿದೆ. ಹೌದು, ಸಾಮಾನ್ಯ ಸಭೆಯಲ್ಲಿ ಗಣೇಶ ಪ್ರತಿಷ್ಠಾಪನೆ ವಿಚಾರ ಚರ್ಚೆಗೆ ಬಂದಿರಲಿಲ್ಲ. ಆದರೂ ಪಾಲಿಕೆ ಮೇಯರ್ ಅಧಿಕಾರ ಇದೆ ಎಂಬ ಕಾರಣಕ್ಕೆ ಠರಾವು ಪಾಸ್ ಮಾಡಿ ಎದ್ದು ಹೋಗಿದ್ದಾರಂತೆ.

ಕೋರ್ಟ್​ ಮೆಟ್ಟಿಲೇರಲು ವಿಪಕ್ಷ ನಾಯಕಿ ಸಿದ್ಧತೆ

ಚರ್ಚೆಯಲ್ಲಿ ಇರದೆ ಹೋದ್ರು, ಗಣೇಶ ಪ್ರತಿಷ್ಠಾಪನೆ ವಿಚಾರ ಚರ್ಚೆಗೆಗಣೇಶ ಹಬ್ಬಕ್ಕೆ ದಿನಗಣನೆ ಶುರುವಾಗಿದೆ. ನಾಡಿನೆಲ್ಲೆಡೆ ಭರ್ಜರಿ ಗಣೇಶೋತ್ಸವಕ್ಕೆ ಸಿದ್ದತೆಗಳು ಆರಂಭವಾಗಿವೆ. ವಿಘ್ನ ನಿವಾರಕನನ್ನು ಬರ ಮಾಡಿಕೊಳ್ಳಲು ಜನ ಕಾತುರದಿಂದ ಕಾಯುತ್ತಿದ್ದಾರೆ. ಆದ್ರೆ, ಇಲ್ಲೊಂದು ಕಡೆ ಗಣೇಶ ಪ್ರತಿಷ್ಠಾಪನೆ ವಿಚಾರವೂ ಕೋರ್ಟ್ ಮೆಟ್ಟಿಲೇರುವ ಸಾಧ್ಯತೆ ಇದೆ. ಗಣೇಶ ಪ್ರತಿಷ್ಠಾಪನೆ ವಿಚಾರ ಕೋರ್ಟ್ ಮೆಟ್ಟಿಲೇರ್ತಿರೋದು ಎಲ್ಲಿ ಅಂತೀರಾ? ಈ ಸ್ಟೋರಿ ನೋಡಿ. ಬಂದಿರುವುದನ್ನು ಪ್ರಶ್ನಿಸಿ ಪಾಲಿಕೆ ವಿಪಕ್ಷ ನಾಯಕಿ ಸುವರ್ಣ ಕಲ್ಲಕುಂಟಲಾ ಇದೀಗ ಕೋರ್ಟ್ ಮೆಟ್ಟಿಲೇರಲು ರೆಡಿಯಾಗಿದ್ದಾರೆ. ಕೋರ್ಟ್ ಮೆಟ್ಟಿಲೇರಲು ಹಿರಿಯ ಕಾಂಗ್ರೆಸ್ ನಾಯಕ ಹೆಚ್​.ಕೆ ಪಾಟೀಲ್ ಜೊತೆ ವಿಪಕ್ಷ ನಾಯಕಿ ಚರ್ಚೆ ಮಾಡಿದ್ದು, ಚರ್ಚೆ ಇರದೆ ಹೋದರು, ಆ ವಿಷಯ ಚರ್ಚೆ ಮಾಡಿರುವ ಕಾರಣಕ್ಕೆ ಪಾಲಿಕೆ ಆಯುಕ್ತರು, ಪಾಲಿಕೆ ಮೇಯರ್, ಪರಿಷತ್ ಕಾರ್ಯದರ್ಶಿ ವಿರುದ್ದ ಕೋರ್ಟ್ ಮೆಟ್ಟಿಲೇರಿದ್ದಾರೆ. ನಮ್ಮ ಹಕ್ಕು ಕಸಿದುಕೊಂಡ ಹಿನ್ನಲೆ ನಾನು ಕೊರ್ಟ್​ಗೆ ಹೋಗುತ್ತೇನೆ ಎಂದು ಪಾಲಿಕೆ ವಿಪಕ್ಷ ನಾಯಕಿ ಹೇಳಿದ್ದಾರೆ.

ಇದನ್ನೂ ಓದಿ:Bengaluru Ganesh Chaturthi: ಗಣೇಶ ಪೆಂಡಾಲ್​ಗಳಿಗೆ ಅನುಮತಿ ನೀಡಲು 63 ಏಕಗವಾಕ್ಷಿ ಕೇಂದ್ರಗಳನ್ನು ತೆರೆದ ಬಿಬಿಎಂಪಿ

ಇನ್ನು ಕಳೆದ ವರ್ಷ ಸಾಕಷ್ಟು ಹೋರಾಟದ ನಂತರ ಗಣೇಶ ಪ್ರತಿಷ್ಠಾಪನೆಗಾಗಿ ಪಾಲಿಕೆ ಮೂರು ದಿನ ಅವಕಾಶ ‌ಕೊಟ್ಟಿತ್ತು. ಈ ಬಾರಿಯೂ ಹಲವಾರು ಸಂಘಟನೆಗಳು ಗಣೇಶ ಪ್ರತಿಷ್ಠಾಪನೆ ವಿಚಾರಕ್ಕೆ ಮನವಿ‌ ಸಲ್ಲಿಸಿದ್ದರು. ಈ ಬಾರಿಯೂ ಪಾಲಿಕೆ ಮೂರು ದಿನ ಗಣೇಶ ಪ್ರತಿಷ್ಠಾಪನೆಗೆ ಠರಾವು ಪಾಸ್ ಮಾಡಲಾಗಿದೆ. ಇದಕ್ಕೆ AIMIM ಹಾಗೂ SDPI ಕೂಡ ವಿರೋಧ ಮಾಡಿವೆ. ಇದೀಗ ಪಾಲಿಕೆ ಅಧಿಕೃತ ವಿರೋಧ ಪಕ್ಷದ ನಾಯಕಿಯೂ ಕೋರ್ಟ್ ಮೆಟ್ಟಿಲೇರಲು ನಿರ್ದಾರ ಮಾಡಿದ್ದಾರೆ.

ಕಾನೂನು ಸಲಹೆ ಪಡೆದ ವಿಪಕ್ಷ ನಾಯಕಿ

ಹಿರಿಯರ ಕಾನೂನು‌ ಸಲಹೆ ಪಡೆದ ಪಾಲಿಕೆ ವಿಪಕ್ಷ ‌ನಾಯಕಿ ಕೋರ್ಟ್​ಗೆ ಹೋಗೋಕೆ ಬದ್ದ ಎಂದಿದ್ದಾರೆ. ಈದ್ಗಾ ಮೈದಾನ ಯಾಕೆ ಬೇಕು? ಬೇರೆ ಕಡೆ ಜಾಗ ಸಾಕಷ್ಟು ಇದೆ ಎಂದು ವಿಪಕ್ಷ ನಾಯಕರು ಆರೋಪಿಸಿದ್ದಾರೆ. ಆದ್ರೆ, ಈದ್ಗಾ ಮೈದಾನವೇ ಬೇಕು ಇಲ್ಲದಿದ್ದರೆ ಹೋರಾಟ ಮಾಡುತ್ತೇವೆ ಎಂದು ಹಿಂದೂ ಸಂಘಟನೆಗಳ ಮುಖಂಡರು ಹೇಳುತ್ತಿದ್ದಾರೆ. ಒಟ್ಟಿನಲ್ಲಿ ಹುಬ್ಬಳ್ಳಿಯ ಈದ್ಗಾ ಮೈದಾನ ಗಣೇಶ ಪ್ರತಿಷ್ಠಾಪನೆ ವಿವಾದ ತಣ್ಣಗಾಗೋ ಲಕ್ಷಣ ಕಾಣ್ತಿಲ್ಲ. AIMIM ಹಾಗೂ SDPI ಈದ್ಗಾ ಮೈದಾನದಲ್ಲಿ ಅನುಮತಿ ಕೊಡಬಾರದು ಅಂತಿದ್ರೆ, ಸಭೆಯಲ್ಲಿ ಅದನ್ನು ಚರ್ಚೆ ಮಾಡಿರೋದನ್ನ ನಾವು ಕೋರ್ಟ್​ನಲ್ಲಿ ಪ್ರಶ್ನೆ ಮಾಡ್ತಿವಿ ಅನ್ನೋದು ಪಾಲಿಕೆ ವಿಪಕ್ಷ ನಾಯಕಿ ಹೇಳುತ್ತಿದ್ದಾರೆ. ಗಣೇಶ ಪ್ರತಿಷ್ಠಾಪನೆ ವಿಚಾರ ಏನಾಗತ್ತೆ ಅನ್ನೋದನ್ನ ಕಾದು ನೋಡಬೇಕಿದೆ

ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ಶೋಭಾ ಶೆಟ್ಟಿಗೆ ಈಗ ಉಗ್ರಂ ಮಂಜು ನೇರ ಟಾರ್ಗೆಟ್​; ಮುಖಕ್ಕೆ ಬಿತ್ತು ಕೆಸರು
ಶೋಭಾ ಶೆಟ್ಟಿಗೆ ಈಗ ಉಗ್ರಂ ಮಂಜು ನೇರ ಟಾರ್ಗೆಟ್​; ಮುಖಕ್ಕೆ ಬಿತ್ತು ಕೆಸರು
ವಕ್ಪ್ ಕಾಯ್ದೆಗೆ ತಿದ್ದುಪಡಿ ಬರುವವರೆಗೆ ಹೋರಾಟ ನಿಲ್ಲದು: ಶೋಭಾ ಕರಂದ್ಲಾಜೆ
ವಕ್ಪ್ ಕಾಯ್ದೆಗೆ ತಿದ್ದುಪಡಿ ಬರುವವರೆಗೆ ಹೋರಾಟ ನಿಲ್ಲದು: ಶೋಭಾ ಕರಂದ್ಲಾಜೆ
ಕೊಟ್ಟ ಮಾತಿನಂತೆ ಉಡುಗೊರೆ ಕಳಿಸಿದ ಕಿಚ್ಚ ಸುದೀಪ್, ಭಾವುಕಗೊಂಡ ಹನುಮಂತ
ಕೊಟ್ಟ ಮಾತಿನಂತೆ ಉಡುಗೊರೆ ಕಳಿಸಿದ ಕಿಚ್ಚ ಸುದೀಪ್, ಭಾವುಕಗೊಂಡ ಹನುಮಂತ
ಸರ್ಕಾರಿ ನೌಕರರಿಗೆ ಅನ್ನಭಾಗ್ಯ ಸ್ಕೀಮಿನ ಅಕ್ಕಿ ಕೊಡಬೇಕಿಲ್ಲ: ಸಿದ್ದರಾಮಯ್ಯ
ಸರ್ಕಾರಿ ನೌಕರರಿಗೆ ಅನ್ನಭಾಗ್ಯ ಸ್ಕೀಮಿನ ಅಕ್ಕಿ ಕೊಡಬೇಕಿಲ್ಲ: ಸಿದ್ದರಾಮಯ್ಯ